Manipura case update: 48 ದಿನದ ಬಳಿಕ ಪ್ರಕರಣದ ಆರೋಪಿ ಬಂಧನ..!

 

ಮಣಿಪುರದಲ್ಲಿ ಮಹಿಳೆ ಮೇಲೆ ನಡೆದ ದೌರ್ಜನ್ಯದ ವಿರುದ್ಧ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ. ತೀವ್ರ ಟೀಕೆಗಳು ಕೇಳಿ ಬಂದಿದೆ. ಈ ಘಟನೆ ನಡೆದು 48 ದಿನಗಳಾಗಿದೆ. ಇದೀಗ ಮಹಿಳೆಯನ್ನು ಹಿಡಿದುಕೊಂಡು ಹೋಗಿದ್ದ ಆರೋಪಿ ಹುಯಿರೆಮ್ ಹೀರೋದಾಸ್ ಮೈತಿಯಿಯನ್ನು ಬಂಧಿಸಲಾಗಿದೆ.


ಈ ಘಟನೆಯನ್ನು ಖಂಡಿಸಿ, ಸಮುದಾಯಗಳು ಪ್ರತಿಭಟನೆ ನಡೆಸುತ್ತಿದ್ದವು. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಒತ್ತಾಯಿಸಿದ್ದವು. ಇದೀಗ ಪ್ರಕರಣ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಮೇ 4ರಂದು ಈ ಘಟನೆ ನಡೆದಿದೆ. 19 ವರ್ಷದ ಕುಕಿ ಸಮುದಾಯಕ್ಕೆ ಸೇರಿದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಬೆತ್ತಲೆ ಮೆರವಣಿಗೆ ಮಾಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೆಲ್ಲಾ ವೈರಲ್ ಆಗಿತ್ತು. ಈ ಘಟನೆ ಸಂಬಂಧ ಸಾವಿರಾರು ಸಂಖ್ಯೆಯಲ್ಲಿ ಜನ ಪ್ರತಿಭಟನೆ ಮಾಡಿದ್ದರು. 48 ದಿನಗಳ ಬಳಿಕ ಎಫ್ಐಆರ್ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *