ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, (ಜು.20) : ರೋಟರಿ ಕ್ಲಬ್, ಎಸ್.ಜೆ.ಎಂ. ಡೆಂಟಲ್ ಕಾಲೇಜು ವತಿಯಿಂದ ವಿ.ಪಿ.ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಕ್ಕಳಿಗೆ ದಂತ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ರೋಟರಿ ಸದಸ್ಯ ಹೆಚ್.ವೆಂಕಟೇಶ್ ಶಿಬಿರ ಉದ್ಗಾಟಿಸಿ ಮಾತನಾಡುತ್ತ ಹಲ್ಲಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು.
ಯಾವ ಮಕ್ಕಳಿಗೆ ಏನು ಸಮಸ್ಯೆಯಿದೆ ಎನ್ನುವುದನ್ನು ದಂತ ವೈದ್ಯರು ಪತ್ತೆ ಹಚ್ಚಿ ಚಿಕಿತ್ಸೆ ನೀಡುತ್ತಾರೆ. ಅದಕ್ಕೆ ತಗಲುವ ವೆಚ್ಚವನ್ನು ರೋಟರಿ ಸಂಸ್ಥೆಯಿಂದ ಭರಿಸಲಾಗುವುದು. ಮಕ್ಕಳು ಇದರ ಪ್ರಯೋಜನ ಪಡೆದುಕೊಂಡು ಆರೋಗ್ಯವಂತರಾಗಿರುವಂತೆ ತಿಳಿಸಿದರು.
ಎಸ್.ಜೆ.ಎಂ.ಡೆಂಟಲ್ ಕಾಲೇಜು ವೈದ್ಯಾಧಿಕಾರಿ ಜಯಚಂದ್ರ ಮಾತನಾಡಿ ಬೆಳಿಗ್ಗೆ ಮತ್ತು ರಾತ್ರಿ ದಿನಕ್ಕೆ ಎರಡು ಬಾರಿ ಹಲ್ಲನ್ನು ಉಜ್ಜುವ ಮೂಲಕ ಪ್ರತಿಯೊಬ್ಬರು ದಂತವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಆರೋಗ್ಯದ ಮೇಲೆ ಸಮಸ್ಯೆಯಾಗುತ್ತದೆ. ಹಲ್ಲಿನ ಸಮಸ್ಯೆಯುಳ್ಳವರು ಡೆಂಟಲ್ ಕಾಲೇಜಿಗೆ ಆಗಮಿಸಿ ಚಿಕಿತ್ಸೆ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ರೊ.ಮಧುಪ್ರಸಾದ್ ಮಾತನಾಡುತ್ತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಂತ ತಪಾಸಣೆಗೆ ಶಿಕ್ಷಕರು ಮುಂದಾಗಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಡೆಸ್ಕ್, ನೋಟ್‍ಬುಕ್, ಪೆನ್, ಬ್ಯಾಗ್‍ಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಕನಕರಾಜು ಮಾತನಾಡಿ ಮಕ್ಕಳೆಲ್ಲರೂ ಹಲ್ಲಿನ ಆರೋಗ್ಯ ಕಾಪಾಡಿಕೊಂಡು ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ನೀಡುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಂಡು ಪೋಷಕರು ಹಾಗೂ ಶಾಲೆಗೆ ಕೀರ್ತಿ ತನ್ನಿ ಎಂದು ಹಾರೈಸಿದರು. ದೈಹಿಕ ಶಿಕ್ಷಣ ಶಿಕ್ಷಕ ಕೆ.ಹೆಚ್.ಶಿವರಾಂ, ರೋಟರಿ ಕ್ಲಬ್‍ನ ವೀರಭದ್ರಸ್ವಾಮಿ, ಸರಸ್ವತಿ ವೆಂಕಟೇಶ್‍ಬಾಬು, ಮಾಧುರಿ ಮಧುಪ್ರಸಾದ್, ಜಯಶ್ರೀಷಾ, ಶಿಕ್ಷಕರುಗಳು ಶಿಬಿರದಲ್ಲಿ ಭಾಗವಹಿಸಿದ್ದರು.