ಭಯೋತ್ಪಾದಕರನ್ನ ಹಿಡಿದಿದ್ದಾರೆ ನಮ್ಮ ಪೊಲೀಸ್ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಅಭಿನಂದನೆ. ಇಂತಹ ಸೂಕ್ಷ್ಮ ವಿಚಾರದಲ್ಲಿ ಕೆಲಸ ಮಾಡಿದ್ದಾರೆ. ಉಗ್ರರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ಕಾರ ಕೂಡ ಈ ಬಗ್ಗೆ ಹೆಚ್ಚು ಗಮನ ಕೊಡಬೇಕು. ಇತ್ತೀಚೆಗೆ ರಸ್ತೆಗಳಲ್ಲಿ ಕೊಲೆಗಳಾಗ್ತಿವೆ. ಇದರ ಬಗ್ಗೆ ಜನರಿಗೆ ಆತಂಕ ಎದುರಾಗಿದೆ. ಕೂಡಲೇ ಸರ್ಕಾರ ಇಂತ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಗೆ ಎನ್ಡಿಎ ಆಹ್ವಾನ ನೀಡಿರುವ ವಿಚಾರ, ನೋಡಿ ಪದೇ ಪದೇ ಈ ವಿಷ್ಯಗಳಲ್ಲಿ ಎಳೆಯಬೇಕಿಲ್ಲ. ನಮ್ಮ ರಾಜ್ಯಕ್ಕೆ ಎರಡು ರಾಷ್ಟ್ರೀಯ ಪಕ್ಷಗಳಿಂದ ಅನ್ಯಾಯ ಆಗಿದೆ. ನಾಡಿನ ಜನತೆಗೆ ಎರಡು ರಾಷ್ಟ್ರೀಯ ಪಕ್ಷಗಳ ಮಾರಕ ಎಂಬುದು ಎಲ್ಲಿಯವರೆಗೆ ಮನವರಿಕೆ ಆಗುವುದಿಲ್ಲ. ಅಲ್ಲಿಯವರೆಗೆ ನಮ್ಮ ರಾಜ್ಯದ ನೀರಾವರಿ ಯೋಜನೆಗಳಿರಬಹುದು. ನಮ್ಮ ರಾಜ್ಯದ ಅಭಿವೃದ್ಧಿ ಇರಬಹುದು. ಯಾವ ರೀತಿ ೭೫ ವರ್ಷಗಳಾದರು ಸಮೃದ್ಧಿಯಾಗಿ,ಪ್ರಕೃತಿ ಸಂಪತ್ತು ಇದ್ರು. ಸರ್ಕಾರದಲ್ಲಿ ಹಣ ಕೊರತೆ ಇಲ್ಲ. ಕೇಂದ್ರ ಸರ್ಕಾರದ ಕೆಲವು ನಿಲುವುಗಳಿಂದ ಕೇಂದ್ರ ಸರ್ಕಾರ ಅಂದ್ರೆ. ಬಿಜೆಪಿ ಅಥವಾ ಕಾಂಗ್ರೆಸ್ ಸರ್ಕಾರಗಳಿಂದ ನಮ್ಮ ರಾಜ್ಯವನ್ನು ಯಾವ ರೀತಿ ಕಡೆಗಣಿಸಿದ್ದಾರೆ.
ವಿಶೇಷ ನೀರಿನ ಯೋಜನೆಗಳು ಹಂಚಿಕೆ ವಿಷಯ ಬಂದಾಗ. ಕೇಂದ್ರ ಸರ್ಕಾರಗಳ ಧೋರಣೆ ಏನಿದೆ. ಈ ರಾಜ್ಯಕ್ಕೆ ಧ್ವನಿ ಎತ್ತಿ ಕೆಲಸ ಮಾಡವ ಶಕ್ತಿ ಇರೋದು ಜೆಡಿಎಸ್ ಗೆ. ಎಲ್ಲಿಯವರೆಗೆ ಜನರಿಗೆ ಮನವರಿಕೆ ಮಾಡಬೇಕು. ಆ ಬಗ್ಗೆ ನನ್ನ ಹೊಸ ಚಿಂತನೆ ಇದೆ. ಈ ಹೊಸ ಇಂಡಿಯಾ ಹೋಗೋದು ಅಥವಾ ಎನ್ ಡಿ ಎ ಜೊತೆ ಹೋಗೋದು ಸೆಕೆಂಡರಿ ಎಂದಿದ್ದಾರೆ.
ಎಪಿಎಂಸಿ ಕಾಯ್ದೆ ಪರಾಮರ್ಶೆಗೆ ವಿಧಾನಪರಿಷತ್‌ನಲ್ಲಿ ಬಿಜೆಪಿಗೆ ಬೆಂಬಲ ನೀಡಿದ ವಿಚಾರ. ಬಿಜೆಪಿಗೆ ಬೆಂಬಲ ನೀಡಿಲ್ಲ. ಎಪಿಎಂಸಿ ವಿಧೇಯಕ ವಿರೋಧ ಮಾಡಿದ್ದೇವೆ. ಅದಕ್ಕೆ ಬಿಜೆಪಿ ಬೆಂಬಲ ಅಂತ ಯಾಕೆ ಅನ್ಕೋತೀರಾ.? ಎಪಿಎಂಸಿಗೆ ತಿದ್ದುಪಡಿ ತರಲು ಹೊರಟಿದ್ದು. ಅದರಲ್ಲಿ ಎರಡು ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ. ಎಪಿಎಂಸಿಯಲ್ಲಿ ಮಧ್ಯವರ್ತಿಗಳಿಂದ ಅನ್ಯಾಯ ಆಗ್ತಿದೆ. ರೈತನೇ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ರೆ ಲಾಭ ಅನ್ನೋ ಒಂದು ವರ್ಗ ಕೂಡ ಇದೆ. ಹಾಗಾಗಿ ನಾವು ತೀರ್ಮಾನ ತೆಗೆದುಕೊಂಡಿರೋದು ರೈತರಿಗೆ ನ್ಯಾಯ ಕೊಡಿಸಲು. ಬಿಜೆಪಿಗೆ ಬೆಂಬಲ ಕೊಡಲು ಅಲ್ಲ ಎಂದಿದ್ದಾರೆ.
ಯುಪಿಎ ಮೈತ್ರಿಕೂಟಕ್ಕೆ ಇಂಡಿಯಾ ಎಂಬ ನಾಮಕರಣ ವಿಚಾರವಾಗಿ ಮಾತನಾಡಿದ್ದು, ಅದರ ಬಗ್ಗೆ ನಾನು ಯಾಕೆ ಹಗುರವಾಗಿ ಮಾತನಾಡಲಿ. ನಿನ್ನೆ ದಿನ ಯುಪಿಎ ಬದಲಾವಣೆ ಮಾಡಿಕೊಂಡಿ ಇಂಡಿಯಾ ಅಂತ ಇಡ್ಕೊಂಡಿದ್ದಾರೆ. ಅದು ಅವರಿಗೆ ಸೇರಿದ್ದು, ಹೆಸರು ಇಟ್ಟ ತಕ್ಷಣ ನಾಡಿನ ಸಮಸ್ಯೆ ಬಗೆಹರಿಯಲ್ಲ. ಕಾಂಗ್ರೆಸ್ ಇಷ್ಟು ದೊಡ್ಡ ಮಟ್ಟದಲ್ಲಿ ರಾಜಕೀಯ ಜನರ ಮೇಲೆ ಹೊರೆ ಹೊರಿಸಿ ಮಾಡಿರುವ ಕಾರ್ಯಕ್ರಮ. ಕೊನೆಗೆ ಏನು ಸಂದೇಶ ನೀಡಿದ್ದಾರೆ. ನಾವು ಕಾಂಗ್ರೆಸ್ ನವರು ಪ್ರಧಾನಿ ಹುದ್ದೆಯ ಆಕಾಂಕ್ಷಿ ಅಲ್ಲ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲವೇ ಸಂದೇಶ ಕೊಟ್ಟಿರುವುದು. ನೋಡೋಣ ಮುಂದೆ ಎನ್ ಆಗುತ್ತೆ ಅಂತ ಎಂದಿದ್ದಾರೆ.