ಬಿಜೆಪಿಯ ಸಂಸದ, ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಗೆ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಡೆಲ್ಲಿ ರೌಸ್ ಅವೆನ್ಯೂ ಕೋರ್ಟ್ ಜಾಮೀನು ನೀಡಿದೆ. ಜುಲೈ 20ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.
ಕುಸ್ತಿಪಟುಗಳು ಬ್ರಿಜ್ ಭೂಷಣ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಿ, ದೂರು ದಾಖಲಿಸಿದ್ದರು. ಇದರ ಆಧಾರದ ಮೇಲೆ ಬ್ರಿಜ್ ಭೂಷಣ್ ಸಿಂಗ್ ಮೇಲೆ 506, 354, 354A ಕೇಸ್ ಗಳು ದಾಖಲಾಗಿದ್ದವು. ಒಂದು ದೂರಿನಲ್ಲಿ ಬ್ರಿಜ್ ಭೂಷಣ್ ರಿಂದ ಸತತ ಲೈಂಗಿಕ ಕಿರುಕುಳ ಆಗಿದೆ ಎನ್ನಲಾಗಿತ್ತು. ಇದೀಗ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
ಕುಸ್ತಿಪಟುಗಳು ಸತತವಾಗಿ ಹೋರಾಟ ಮಾಡಿದ್ದರು. ಬ್ರಿಜ್ ಭೂಷಣ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದಕ್ಕೆ ದೇಶಾದ್ಯಂತ ವಿರೋಧವೂ ವ್ಯಕ್ತವಾಗಿತ್ತು. ಬಳಿಕ ಅರೆಸ್ಟ್ ಆಗಿದ್ದ ಬ್ರಿಜ್ ಭೂಷಣ್ ಗೆ ಈಗ ಜಾಮೀನು ಸಿಕ್ಕಿದೆ.