ದೆಹಲಿ : ಯಮುನಾ ನದಿ ತುಂಬಿ ಹರಿಯುತ್ತಿದ್ದಾಳೆ. ಹೀಗಾಗಿ ದೆಹಲಿಯ ತಗ್ಗು ಪ್ರದೇಶಗಳಲ್ಲೆಲ್ಲಾ ನೀರು ತುಂಬಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ನಿನ್ನೆ, ಮೊನ್ನೆಯೆಲ್ಲಾ ಮಳೆ ತಗ್ಗಿತ್ತು. ಆದರೆ ಮತ್ತೆ ಮಳೆ ಜೋರಾಗಿದ್ದು, ಯಮುನೆಯಿಂದಾಗಿ ಮತ್ತಷ್ಟು ಆತಂಕ ಹೆಚ್ಚಾಗಿದೆ.
ಅಧಿಕಾರಗಳ ಪ್ರಕಾರ ನೀರಿನ ಮಟ್ಟ ಅಪಾಯವನ್ನು ಮೀರಿ ಹರಿಯುತ್ತಿದೆ. ದೆಹಲಿಯ ನಾನಾ ಕಡೆ ಈಗಾಗಲೇ ನೀರು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದೆ. ಹಲವು ಕಡೆ ಮುನ್ನೆಚ್ಚರಿಕೆಯ ಕ್ರಮ ಅನುಸರಿಸಲು ಸೂಚನೆ ನೀಡಲಾಗಿದೆ. ಜನಗಳಿಗೆ ಪರಿಹಾರದ ಶಿಬಿರಗಳಲ್ಲಿಯೇ ವಾಸ ಮುಂದುವರೆಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಯಮುನಾ ನದಿಯ ನೀರಿನ ಮಟ್ಟ ಹೆಚ್ಚಾದ ಕಾರಣ ದೆಹಲಿಯ ಕೆಲವೊಂದು ಕಡೆ ಸಾರಿಗೆ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು. ದೆಹಲಿ ಸರ್ಕಾರದ ಸಾರಿಗೆ ಇಲಾಖೆ ಹೊರಡಿಸಿದ ಆದೇಶದಲ್ಲಿ, ಹರಿಯಾಣ, ಹಿಮಾಚಲ ಪ್ರದೇಶ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡದಿಂದ ದೆಹಲಿಯ ಐಎಸ್‌ಬಿಟಿ ಕಾಶ್ಮೀರಿ ಗೇಟ್‌ಗೆ ಬರುವ ಅಂತಾರಾಜ್ಯ ಬಸ್‌ಗಳು ಸಿಂಗು ಗಡಿಯನ್ನು ಮಾತ್ರ ಬರಲು ಸಾಧ್ಯ ಎಂದು ಹೇಳಲಾಗಿದೆ.