ಬೆಂಗಳೂರು: ಇಂದು ನಾಳೆ ಎರಡು ದಿನಗಳ ಕಾಲ ವಿಪಕ್ಷಗಳ ಸಭೆ ನಡೆಯುತ್ತಿದೆ. ತಾಜ್ ವೆಸ್ಟೆಂಡ್ ನಲ್ಲಿ ಸಭೆ ನಡೆಯಲಿದ್ದಿ, ಈಗಾಗಲೇ ಸಭೆಗಾಗಿ ಬೇರೆ ಬೇರೆ ರಾಜ್ಯದ ಮಹಾ ಅತಿರಥರು ಆಗಮಿಸಿದ್ದಾರೆ.
ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಸಭೆಯಲ್ಲಿ ಆರು ಪ್ರಮುಖ ವಿಷಯಗಳ ಬಗ್ಗೆ ಪ್ರಸ್ತಾಪವಾಗಲಿದೆ. ರಾತ್ರಿ 7:30ಕ್ಕೆ ವಿಪಕ್ಷಗಳ ಒಕ್ಕೂಟಗಳ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ ಏರ್ಪಡಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಬಿಜೆಪಿಯನ್ನು ಸೋಲಿಸಬೇಕು ಎಂಬುದೇ ಉದ್ದೇಶವಾಗಿದೆ. ಹೀಗಾಗಿಯೇ ಎಲ್ಲಾ ವಿಪಕ್ಷಗಳು ಇಂದು ಒಂದಾಗಿದೆ.
ಈ ಸಂಬಂಧ ವಾಗ್ದಾಳಿ ನಡೆಸಿರುವ ಬಿವೈ ವಿಜಯೇಂದ್ರ ಅವರು, ವಿರೋಧ ಪಕ್ಷಗಳಿಗೆ ದೇಶದ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ. ಹೇಗಾದರೂ ಮಾಡಿ ದೇಶದಲ್ಲಿ ಅಧಿಕಾರಕ್ಕೆ ಬರಬೇಕು. ಏನೇ ಮಾಡಿದರೂ ದೇಶದ ಪ್ರಜ್ಞಾವಂತ ಮತದಾರರು ನೋಡುತ್ತಾರೆ. ಮತ್ತೊಮ್ಮೆ ದೇಶದ ಪ್ರಧಾನಿಯಾಗಲು ಯಾರಿಂದಲೂ ತಡೆಯುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.