ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 9886295817
ಸುದ್ದಿಒನ್, ಚಿತ್ರದುರ್ಗ,(ಜು.16) : ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿರವರ ದೀಕ್ಷಾ ರಜತ ಮಹೋತ್ಸವ ಹಾಗೂ ಪಟ್ಟಾಭಿಷೇಕ 14 ನೇ ವಾರ್ಷಿಕ ಮಹೋತ್ಸವವು ಜುಲೈ18 ರಂದು ನಗರದ ಹೂರವಲಯದ ಭೋವಿ ಗುರು ಪೀಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಮುಖಂಡರಾದ ರಾಮಪ್ಪ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋವಿ, ಒಡ್ಡರ ಜನಾಂಗದ ಅಭಿವೃದ್ಧಿಯ ಹಾಗೂ ಸಾಂಸ್ಕೃತಿಕ ಜಾತ್ರೆಯಾಗಿ, ಹಬ್ಬವಾಗಿ ಸಮುದಾಯದ ಜನರ ಮಧ್ಯೆ ಪ್ರತಿ ವರ್ಷ ಜುಲೈ 18 ರಂದು ಭೋವಿ ಜನೋತ್ಸವವಾಗಿ ಸಾಕ್ಷಿ ಪ್ರಜ್ಞೆಯಂತೆ ನಡೆಯುತ್ತಾ ಬಂದಿದೆ.
ಈ ಹಿನ್ನೆಲೆಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಗೌರವಿಸುವುದು, ಐ.ಎ.ಎಸ್, ಕೆ.ಎ.ಎಸ್ ಮತ್ತು ಪಿ.ಹೆಚ್.ಡಿ ಅಂತಹ ಉನ್ನತ ವ್ಯಾಸಂಗ ಹೊಂದಿದವರಿಗೆ ಸನ್ಮಾನಿಸುವುದು, ವಧು-ವರರ ಸಮಾವೇಶ, ರಕ್ತದಾನ ಶಿಬಿರ, ಶ್ರೀ ಸಿದ್ಧರಾಮೇಶ್ವರರ ಕುರಿತು ವಿಚಾರ ಸಂಕಿರಣ, ಜನಪ್ರತಿನಿಧಿಗಳನ್ನು ಗೌರವಿಸುವುದರ ಮೂಲಕ ಜನಾಂಗದ ಜಾತ್ರೆಯಾಗಿ ಭೋವಿ ಜನೋತ್ಸವ ಜರುಗುತ್ತಾ ಬಂದಿದೆ ಎಂದರು.
ಈ ಜನೋತ್ಸವಕ್ಕೆ ಸಚಿವರು, ಶಾಸಕರು, ಮಾಜಿ ಶಾಸಕರು, ಮಾಜಿ ಮಂತ್ರಿಗಳು, ರಾಜಕೀಯ ಮುಖಂಡರು, ಸಾಹಿತಿಗಳು, ವಕೀಲರು, ಉಪನ್ಯಾಸಕರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಹೆಸರುಗಳಿಸಿರುವ ಮುಖಂಡರು ಭಾಗವಹಿಸಲಿದ್ದಾರೆ.
ಭೋವಿ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಮಾತನಾಡಿ, ಸಮುದಾಯದ ಬುಡಕಟ್ಟು ಹಿನ್ನೆಲೆಯಿರುವ ಈ ಸಮುದಾಯ ವಲಸೆ ವೃತ್ತಿ ಅವಲಂಬಿತ ಜೀವನವನ್ನು ನಡೆಸುತ್ತಾ ಬಂದಿದ್ದು, ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಸಂಖ್ಯೆಯೇ ಹೆಚ್ಚಾಗಿದೆ. ಸಾಮಾಜಿಕ, ಶೈಕ್ಷಣಿಕ ಸ್ಥಿತಿಯ ಸಹ ಬರವಾಗಿಲ್ಲ, ಸಮಾಜದ ಅಭಿವೃದ್ಧಿಗೆ ಹಿರಿಯ ಮುತ್ಸದ್ಧಿಗಳ ರಾಜ್ಯದ ಕೆಲವು ಭಾಗದಲ್ಲಿ ಶ್ರಮಿಸಿರುವುದನ್ನು ಗಮನಿಸುತ್ತೇವೆ. ಸಮುದಾಯದ ಅಭಿವೃದ್ಧಿ ಸ್ವಾತಂತ್ರ್ಯ ಭಾರತದಲ್ಲಿ ನಿರೀಕ್ಷಿತ ಮಟ್ಟ ತಲುಪಲಾಗಿಲ್ಲ, ಅವಿದ್ಯುವಂತ ಮತ್ತು ಆಸ್ತಿ ಒಡೆತನ ಇಲ್ಲದೇ ಇರುವುದೇ ಬಡತನಕ್ಕೆ ಮುಖ್ಯ ಕಾರಣವಾಗಿದೆ ಎಂದರು.
ಸಾಂಪ್ರದಾಯಿಕವಾಗಿ ಕೆರೆ-ಕಟ್ಟೆ, ಗುಡಿ-ಗೋಪುರಗಳನ್ನ ನಿರ್ಮಾಣ ಮಾಡಿಕೊಂಡು ಬಂದ ಈ ಸಮುದಾಯಕ್ಕೆ ಆ ಉದ್ಯೋಗ ಸಹ ಈಗ ಉಳಿದಿಲ್ಲ. ಅಭಿವೃದ್ಧಿಯ ಹೆಸರಲ್ಲಿ ಆಧುನೀಕರಣದ ಸಂದರ್ಭದಲ್ಲಿ ಯಂತ್ರಗಳ ಭರಾಟೆಯಿಂದ ಭೋವಿ, ಒಡ್ಡರ ಬದುಕು ಇಂದು ಅತಂತ್ರವಾಗಿದೆ. ವಲಸೆಯಲ್ಲೂ ಸಹ ವ್ಯಕ್ತಿ ಸಿಗದೇ ಹಳ್ಳಿಯಲ್ಲಿ ವಸತಿಯಿಲ್ಲದೇ ಅತಂತ್ರ ಸ್ಥಿತಿಯಲ್ಲಿರುವ ಈ ಜನಾಂಗವನ್ನು ಜಾಗೃತಿಗೊಳಿಸುವ ಅಗತ್ಯವಾಗಿದೆ. ನಮ್ಮ ಜನಾಂಗಕ್ಕೆ ಶ್ರೀಗಳು ಬಂದ ಮೇಲೆ ಹೆಚ್ಚಿನ ರೀತಿಯಲ್ಲಿ ಜಾಗೃತಿಯನ್ನು ಮೂಡಿಸಿದ್ದಾರೆ. ರಾಜ್ಯದಲ್ಲಿ ಸಂಚಾರ ಮಾಡುವುದರ ಮೂಲಕ ಜನತೆಯನ್ನು ಒಗ್ಗೂಡಿಸಿದ್ದಾರೆ ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಜನಾಂಗದಿಂದ ಸ್ಪರ್ಧೆ ಮಾಡುವವರ ಸಭೆಯನ್ನು ಕರೆಯುವುದರ ಮೂಲಕ ಶ್ರೀಗಳು ಒಮ್ಮತದ ಅಭ್ಯರ್ಥಿಯನ್ನು ನಿರ್ಧಾರ ಮಾಡಲಾಗವುದು. ಚಿತ್ರದುರ್ಗ ಜಿಲ್ಲೆಯಲ್ಲಿ ನಮ್ಮ ಜನಾಂಗ ಹೆಚ್ಚಿನ ಪ್ರಮಾಣದಲ್ಲಿದ್ದು ಅಭ್ಯರ್ಥಿಯ ಭವಿಷ್ಯವನ್ನು ನಿರ್ಧಾರ ಮಾಡಲಾಗುತ್ತದೆ. ಇದರಿಂದ ಈ ಭಾರಿ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಜನಾಂಗಕ್ಕೆ ಟಿಕೆಟ್ ನಿಡುವಂತೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ರವರನ್ನು ಆಗ್ರಹಿಸಲಾಗುವುದು ಎಂದು ಅಧ್ಯಕ್ಷ ತಿಪ್ಪೇಸ್ವಾಮಿ ತಿಳಿಸಿ ಈ ಜನಜಾಗೃತಿ ಜನೋತ್ಸವಕ್ಕೆ ಸಮುದಾಯದ ಪ್ರತಿಯೊಬ್ಬರು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಗಿ ಬೇಕೆಂದು ಮನವಿ ಮಾಡಲಾಯಿತು.
ಗೋಷ್ಠಿಯಲ್ಲಿ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ತಿಮ್ಮಣ್ಣ, ನಗರಸಭೆಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಮಂಜುನಾಥ್ ಮತ್ತು ತಿಪ್ಪೇಸ್ವಾಮಿ ಭಾಗವಹಿಸಿದ್ದರು.