ಸರ್ಕಾರಿ ನೌಕರರ ಹಲ್ಲೆ ಖಂಡನೀಯ : ನಿಕಟ ಪೂರ್ವ ಅಧ್ಯಕ್ಷ ಕೆ.ಮಂಜುನಾಥ್ ಆಕ್ರೋಶ

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ,(ಜು.13) :  ಪಿ.ಎಂ.ಜಿ.ಎಸ್.ವೈ ಯೋಜನಾ ಉಪ ವಿಭಾಗ ಚಿತ್ರದುರ್ಗದ ಸಹಾಯಕ ಇಂಜಿನಿಯರ್ ನಾಗರಾಜ್.ಜಿ.ಎಂ ಇವರ ಮೇಲೆ ನಡೆದಿರುವ ಹಲ್ಲೆಯ ಅತ್ಯಂತ ಖಂಡನೀಯ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಚಿತ್ರದುರ್ಗ ನಿಕಟ ಪೂರ್ವ ಅಧ್ಯಕ್ಷ ಮಂಜುನಾಥ್. ಕೆ. ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನೌಕರರ ಸಮುದಾಯದಲ್ಲಿ ಗೊಂದಲಗಳು ಉಂಟಾಗಿ ಸರ್ಕಾರಿ ಸೇವೆಯಲ್ಲಿ ಸಾರ್ವಜನಿಕರ ಸೇವೆ ಮಾಡುವ ನಮ್ಮಂತಹ ನೌಕರರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದು ಇದೇ ಮೊದಲಲ್ಲ ಈ ಹಿಂದೆಯೂ ಇಂತಹ ದುಷ್ಕೃತ್ಯಗಳು ಅನೇಕ ನಡೆದಿದೆ ಈ ಬಗ್ಗೆ ಸಾಕಷ್ಟು ಮುಷ್ಕರಗಳು ಹೋರಾಟಗಳು ಮೌನ ಮೆರವಣಿಗೆಗಳು ನಡೆದಿದ್ದರೂ ಸಹ ಇಂತಹ ಹಲ್ಲೆಗಳು, ಹವ್ಯಾಚ ಪದಗಳಿಂದ ನಿಂದಿಸುವುದು, ಮಾರಣಾಂತಿಕ ಹಲ್ಲೆ ಮಾಡುವುದು, ಕೊಲೆ ಮಾಡಿರುವುದು ನಿಂತಿಲ್ಲ ಇದನ್ನು ಇಡೀ ನೌಕರರ ಸಮುದಾಯ ಖಂಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ಸರ್ಕಾರಿ ನೌಕರರು ತಪ್ಪು ಮಾಡಿದಾಗ ಮೇಲಾಧಿಕಾರಿಗಳಿಗೆ ದೂರು ನೀಡುವುದು ಅಥವಾ ಲೋಕಾಯುಕ್ತರಿಗೆ ದೂರು ನೀಡುವುದು ಮಾಡಲಿ ಅದನ್ನು ಹೊರತುಪಡಿಸಿ ದೈಹಿಕವಾಗಿ ದಂಡನೆ ಮಾಡುವುದು ಅಪರಾಧವಾಗಿರುತ್ತದೆ ನಾವು ಕೂಡ ಮನುಷ್ಯರು ನಮ್ಮನ್ನು ನಂಬಿಕೊಂಡಿರುವ ಕುಟುಂಬಗಳು ಇರುವುದನ್ನು ಮರೆಯಬಾರದು. ಸಾರ್ವಜನಿಕ ಸೇವೆಯಲ್ಲಿ, ಸಾರ್ವಜನಿಕ ಬದುಕಿನಲ್ಲಿ ವ್ಯತ್ಯಾಸಗಳಾಗುವುದು ಸರ್ವೇಸಾಮಾನ್ಯ ಅದಕ್ಕೆ ಹಲ್ಲೆ ಮಾಡುವುದು, ಕೊಲೆ ಮಾಡುವುದೇ ಪರಿಹಾರವಲ್ಲ. ಸರ್ಕಾರಿ ಸೇವೆಗೆ ಅಡ್ಡಿಪಡಿಸಿದಂತಹ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿ ಆಗಬೇಕು ಈ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಕಠಿಣ ಕಾನೂನುಗಳನ್ನು ರೂಪಿಸಿ ನೌಕರರ ರಕ್ಷಣೆ ಮಾಡಬೇಕು ಎಂದು ಮಂಜುನಾಥ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *