ದೆಹಲಿ: ಈಗಾಗಲೇ ಮುಂಗಾರು ಮಳೆ ಎಲ್ಲೆಲ್ಲೂ ಆತಂಕವನ್ನು ತಂದೊಡ್ಡುತ್ತಿದೆ. ಹಲವು ರಾಜ್ಯದಲ್ಲಿ ಸಾಕಷ್ಟು ಅವಾಂತರ ಸೃಷ್ಡಿ ಮಾಡಿದೆ. ಇದೀಗ ದೆಹಲಿಯಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಜನರು ಆತಂಕದಲ್ಲಿಯೇ ಜೀವನ ಕಳೆಯುತ್ತಿದ್ದಾರೆ. ಯಮುನೆ ತುಂಬಿ ಹರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಗೆ ಪ್ರವಾಹದ ವಾತಾವರಣ ಸೃಷ್ಟಿಯಾಗಿದೆ. ಯಮುನೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದಾಳೆ. ದೆಹಲಿಯ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಕಾಶ್ಮೀರಿ ಗ್ರೇಟ್ ಗೇಟ್, ರಾಜ್ ಘಾಟ್ ನಲ್ಲಿ ನೀರು ತುಂಬಿದೆ.
ದೆಹಲಿ ಸಿಎಂ ಕೇಜ್ರಿವಾಲ್ ಅಲರ್ಟ್ ಆಗುದ್ದಾರೆ. ತಕ್ಷಣ ಅಧಿಕಾರಿಗಳು ಮತ್ತು ಸಚಿವರ ಜೊತೆ ಸಭೆ ಕರೆದಿದ್ದಾರೆ.
ಪ್ರವಾಹ ಸ್ಥಿತಿ, ಜನರ ಸ್ಥಳಾಂತರ ಕುರಿತು ಸಭೆ ಈ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ. ದೆಹಲಿಯಲ್ಲೆಲ್ಲಾ ನೀರುಮಯವಾಗಿದೆ.