Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಲೋನ್ ಕಟ್ಟಿಲ್ಲ ಅಂತ ಬ್ಯಾಂಕ್ ಸಿಬ್ಬಂದಿ ಕೊಟ್ಟ ಟಾರ್ಚರ್ ಗೆ ಯುವಕ ಆತ್ಮಹತ್ಯೆ..!

Facebook
Twitter
Telegram
WhatsApp

 

 

ಬೆಂಗಳೂರು: ಇತ್ತಿಚಿನ ದಿನಗಳಲ್ಲಿ ಆನ್ಲೈನ್ ನಲ್ಲಿ ಲೋನ್ ನೀಡುವ ಆ್ಯಪ್ ಗಳು ಹೆಚ್ಚಾಗಿವೆ. ಬಹಳ ಸುಲಭವಾಗಿ ಸಿಗುತ್ತೆ ಎಂಬ ಕಾರಣಕ್ಕೆ ಜನ ಕೂಡ ಆನ್ಲೈನ್ ಲೋನ್ ಗಳ ಮೊರೆ ಹೋಗುತ್ತಾರೆ. ಇದೀಗ ಅಂತ ಲೋನ್ ಗಳಿಂದಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಬೆಂಗಳೂರಿನ ಯಲಹಂಕದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, 22 ವರ್ಷದ ತೇಜಸ್ ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ.

ತೇಜಸ್ ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಆರನೇ ಸೆಮಿಸ್ಟರ್ ನಲ್ಲಿ ಓದುತ್ತಿದ್ದರು. ಮೆಕ್ಯಾನಿಕಲ್ ವಿಭಾಗದಲ್ಲಿ ಟಾಪರ್ ಆಗಿದ್ದರು. ಆದರೆ ಮಹೇಶ್ ಎಂಬಾತ ಮಾಡಿದ ಆನ್ಲೈನ್ ಸಾಲದ ಸುಳಿಗೆ ಸಿಲುಕಿ, ಜೀವವನ್ನೇ ಕಳೆದುಕೊಂಡಿದ್ದಾನೆ. ತೇಜಸ್​ ಸ್ಲೈಲ್ಸ್ ಪೇ, ಕಿಸಾತ್ ಹಾಗೂ ‌ಕೋಟಕ್ ಮಹೀಂದ್ರಾ ಮೂಲಕ ಲೋನ್ ಪಡೆದುಕೊಂಡಿದ್ದನಂತೆ. ಆದರೆ ಕಳೆದ ಒಂದು ವರ್ಷದಿಂದ ಸ್ನೇಹಿತ ಮಹೇಶ್ ಇಎಂಐ ಕಟ್ಟಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಾಲ ಮರು ಪಾವತಿ ಮಾಡುವಂತೆ ಸಿಬ್ಬಂದಿ ತೇಜಸ್ ಹಿಂದೆ ಬಿದ್ದಿದ್ದರಂತೆ.

ಸಾಲ ಕೊಟ್ಟವರ ಟಾರ್ಚರ್ ಕರೆಗೆ ನೊಂದು, ನಿನ್ನೆ ಸಂಜೆ ಆತಹತ್ಯೆ ಮಾಡಿಕೊಂಡಿದ್ದಾನೆ. ಡೆತ್ ನೋಟ್ ಬರೆದಿಟ್ಟು, ವೇಲಿನಿಂದ ನೇಣು ಬಿಗಿದುಕೊಂಡು, ಆತ್ಮಹತ್ಯೆಗೆ ಶರಣಾಗಿದ್ದಾನೆ. ಕುಟುಂಬಸ್ಥರು ಕಣ್ಣೀರಲ್ಲಿ ಮುಳುಗಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನಾಳೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ..!

ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಕ್ಕೆ ಕರ್ನಾಟಕ ಪರೀಕ್ಷಾ ಮಂಡಳಿ ಡೇಟ್ ಫಿಕ್ಸ್ ಆಗಿದೆ. ನಾಳೆಯೇ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಲಿದೆ. 8.69 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಾಳೆಯೇ ತಿಳಿಯಲಿದೆ. ಮೇ 9ಕ್ಕೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಲಿದೆ ಎಂದು

ಗಾಳಿ ಮಳೆಗೆ ಕರೆಂಟ್ ಹೋದ್ರೆ ಈ ನಂಬರ್ ಗೆ ವಾಟ್ಸಾಪ್ ಮಾಡಿ

ಬೆಂಗಳೂರು: ಇನ್ನು ಮಳೆಗಾಲ ಶುರುವಾಯ್ತು. ಈ ಮಳೆಗಾಲ ಬಂತು ಅಂದ್ರೆ ಸಾಕು ಎಲ್ಲೆಡೆ ಮರಗಿಡಗಳು ಬೀಳುತ್ತವೆ, ಪವರ್ ಕಟ್ ಸಮಸ್ಯೆಗಳು ಕೂಡ ಕಾಡುತ್ತವೆ. ಈ ವೇಳೆ ಬೆಸ್ಕಾಂನವರು ಜನರ ಕೈಗೆ ಸಿಗುವುದು ಕಷ್ಟವಾಗಿದೆ. ಆದರೆ

ಹಣ ಉಳಿತಾಯಕ್ಕೆ RD ಅಥವಾ FD.. ಯಾವುದು ಬೆಟರ್..?

ಮನುಷ್ಯನ ಈಗಿನ ಜೀವನಶೈಲಿಯಿಂದ ಹಣದ ಅವಶ್ಯಕತೆ ಬಹಳ ಇದೆ. ಬೆಲೆ ಏರಿಕೆಯ ನಡುವೆ ಮುಂದಿನ ಜೀವನಕ್ಕಾಗಿ ಹಣ ಉಳಿಸಲೇಬೇಕಾಗಿದೆ‌. ಆದರೆ ಹಣ ಉಳಿಕೆಗೆ ಅಥವಾ ಇರುವ ಹಣಕ್ಕೆ ಬ್ಯಾಂಕ್ ನಲ್ಲಿ ಯಾವ ಮಾರ್ಗವನ್ನು ಬಳಸಬೇಕೆಂಬುದು

error: Content is protected !!