ಬೆಂಗಳೂರು: ಕಿಚ್ಚ ಸುದೀಪ್ ಮೇಲೆ ಇಂದು ಹುಚ್ಚ ಸಿನಿಮಾ ನಿರ್ಮಾಪಕರೊಬ್ಬರು ಆರೋಪ ಮಾಡಿದರು. ಹಣ ನೀಡಬೇಕು ಎಂದು ಆರೋಪ ಮಾಡಿದ್ದಾರೆ. ಇದಕ್ಕೆ ಇಂದು ಕಿಚ್ಚ ಸುದೀಪ್ ಪತ್ರದ ಮೂಲಕ ಒಂದಷ್ಟು ಪ್ರಶ್ನೆ ಕೇಳಿದ್ದಾರೆ.
“ಎಲ್ಲರಿಗೂ ನಮಸ್ಕಾರ, ಕನ್ನಡ ಚಿತ್ರರಂಗ ಮಹಾನ್ ಸಾಧಕರಿಂದ ಬೆಳೆದು ನಿಂತಿದೆ. ಅವರೆಲ್ಲರ ಸಾಧನೆಯ ನಡುವೆ, ನನ್ನದೂ ಒಂದು ಅಳಿಲು ಸೇವೆ ಇದ. ಅಂತಹ ಮಹಾನ್ ಸಾಧಕರೆದುರು ನಾನು ತುಂಬಾ ಕಿರಿಯವ, ಈ ಕಳೆದ ೨೭ ವರ್ಷಗಳಲ್ಲಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಕಲಾವಿದನಾಗಿ, ಬರಹಗಾರ, ಗಾಯಕ, ಇತ್ಯಾದಿ ಇತ್ಯಾದಿ ಆಗಿ ನಾನು ಈ ಪತ್ರವನ್ನು ನಿಮಗೆ ಬರೆಯುತ್ತಿಲ್ಲ. ಚಿತ್ರೋದ್ಯಮದಲ್ಲಿ ಆ ೨೭ ವರ್ಷಗಳ ಕಾಲ ಕಾಪಾಡಿಕೊಂಡು ಬಂದ ಒಳ್ಳೆಯತನ ಮತ್ತು ಮಾನವೀಯತೆಯ ಆಧಾರದಲ್ಲಿ, ಈ ಮೇಲ್ಕಂಡ ಸಂಸ್ಥೆಗಳ ಮೇಲಿನ ಗೌರವಾಧಾರದ ಮೇಲೆ ಈ ಪತ್ರವನ್ನು ಬರೆಯುತ್ತಿದ್ದೇನೆ.
ವಾಣಿಜ್ಯ ಮಂಡಳಿಗೆ ನಿರ್ಮಾಪಕರೊಬ್ಬರು ಮೊರೆ ಬಂದಿರುವುದು ಸರಿ ಅಷ್ಟೇ. ಸ್ಪಂದಿಸಬೇಕಾದುದ್ದು ನಿಮ್ಮ ಕರ್ತವ್ಯ, ನೀವು ಸ್ಪಂದಿಸಿದ್ದೀರಿ. ಆ ಬಗ್ಗೆ ನನಗೆ ಯಾವುದೂ ತಕರಾರು ಇರುವುದಿಲ್ಲ. ಆದರೂ, ಯಾವುದೇ ನಿರ್ಮಾಪಕರು, ಯಾರೇ ಕಲಾವಿದರ ತಂತ್ರಜ್ಞರ ಮೇಲೆ ನಿರಾಧಾರ ಸುಳ್ಳು ಆರೋಪಗಳನ್ನು ಮಾಡುವಾಗ, ಕನಿಷ್ಠ ದಾಖಲಾತಿಗಳನ್ನು ಪರಿವೀಕ್ಷಿಸುವುದು ಮಾತ್ರ ಸಂಸ್ಥೆಗಳಾದ ನಿಮ್ಮದೂ ಜವಾಬ್ದಾರಿ ಆಗಿರುತ್ತದೆಂದು ವಿನಮ್ರತೆ ಇಂದ ಮನವಿ ಮಾಡುತ್ತೇನೆ. ಈ ಹಿಂದೆ ನೀವು ಇದನ್ನೆಲ್ಲ ಪರಿಶೀಲಿಸಲಿಲ್ಲವೆಂದಲ್ಲ. ಈ ಬಾರಿ ನನ್ನ ವಿಚಾರದಲ್ಲಿ ಅದೇಕೋ ನಡೆಯುತ್ತಿಲ್ಲ, ಕಾರಣವೂ ನನಗೆ ತಿಳಿಯುತ್ತಿಲ್ಲ.
ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಅಭಿನಯ ಚಕ್ರವರ್ತಿಗೆ ಬೇಸರ ವ್ಯಕ್ತಪಡಿಸಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಲಿಖಿತಪತ್ರ ಬರೆದಿದ್ದಾರೆ. ಚಿತ್ರರಂಗಕ್ಕೆ ನಾನು ನಟನಾಗಿ ಅಳಿಲು ಸೇವೆ ಮಾಡಿದ್ದೇನೆ. ಈ ಸಮಸ್ಯೆಗಳನ್ನ ಗೌರವ ಪೂರ್ವಕವಾಗಿ ಬಗೆಹರಿಸ್ತೀನಿ. ನನ್ನ ಮೇಲೆ ಸುಳ್ಳು ಆರೋಪಗಳನ್ನ ಮಾಡಲಾಗಿದೆ.
ನಿರ್ಮಾಪಕರು ಎಂದರೆ ನನಗೂ ಗೌರವ ಇದೆ. ನಿರ್ಮಾಪಕ ಕುಮಾರ್ ಆತ್ಮಹತ್ಯೆ ಮಾಡಿಕೊಂಡ್ರೆ ನನ್ನ ಜವಾಬ್ದಾರಿ ಅಂದಿದ್ದು ತುಂಬಾ ನೋವು ಕೊಟ್ಟಿದೆ. ನನ್ನ ವಿಚಾರದಲ್ಲಿ ವಾಣಿಜ್ಯ ಮಂಡಳಿ ಸರಿಯಾಗಿ ಪರಿಶೀಲನೆ ಮಾಡುತ್ತಿಲ್ಲ. ಆರ್.ಆರ್.ನಗರದ ಮನೆಯನ್ನ ಲೋನ್ ಪಡೆದು ಕಟ್ಟಿದ್ದು. ತಪ್ಪು ಮಾಡಿದ್ರೆ ಖಂಡಿತ ದಂಡ ಕಟ್ತೀನಿ. ನ್ಯಾಯಯುತವಾಗಿ ತಲೆಬಾಗಿಸ್ತೀನಿ. ನಾನು ಜೀವ ಉಳಿಸುವ ಪ್ರಯತ್ನ ಮಾಡುತ್ತೇನೆ ಜೀವ ತೆಗೆಯಲ್ಲ” ಎಂದು ನಿರ್ಮಾಪಕರ ಆರೋಪಗಳಿಗೆ ಸುದೀಪ್ ಪತ್ರ ಬರೆದಿದ್ದಾರೆ.