ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಜು.09) : ರೋಟರಿ ಕ್ಲಬ್ ಚಿನ್ಮುಲಾದ್ರಿ ಅಧ್ಯಕ್ಷರಾಗಿ ರೊ.ಎಂ.ಬಿ.ಶಂಕರಪ್ಪ, ಕಾರ್ಯದರ್ಶಿಯಾಗಿ ರೊ.ಲಕ್ಷ್ಮಿಕಾಂತ್ ಎಸ್. ಇವರುಗಳು ರೋಟರಿ ಬಾಲಭವನದಲ್ಲಿ ಭಾನುವಾರ ಪದಗ್ರಹಣ ಸ್ವೀಕರಿಸಿದರು.
ಡಿಸ್ಟ್ರಿಕ್ಟ್ ಗೌರ್ವನರ್ ನಾಮಿನಿ, ಆರ್.ಐ.ಡಿಸ್ಟ್ರಿಕ್ಟ್, 3160. ಎಂ.ಕೆ.ರವೀಂದ್ರ ಪದಗ್ರಹಣ ನೆರವೇರಿಸಿ ಮಾತನಾಡುತ್ತ 2023-24 ನೇ ಸಾಲಿಗೆ ಅಧ್ಯಕ್ಷ-ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ರೊ.ಎಂ.ಬಿ.ಶಂಕರಪ್ಪ ಹಾಗೂ ಕಾರ್ಯದರ್ಶಿ ರೊ.ಲಕ್ಷ್ಮಿಕಾಂತ್ ಎಸ್. ಇವರುಗಳು ಎಲ್ಲರ ಸಹಕಾರ ಪಡೆದು ಒಂದು ವರ್ಷದಲ್ಲಿ ಅನೇಕ ಉತ್ತಮ ಕಾರ್ಯಕ್ರಮಗಳನ್ನು ಕೈಗೊಳ್ಳಿ. ರೋಟರಿ ಎಂದರೆ ಅಂತರಾಷ್ಟ್ರೀಯ ಸಂಸ್ಥೆ. ಸೇವೆ ಮಾಡಲು ಇಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದರು.
ಹಿಂದಿನ ಅಧ್ಯಕ್ಷ ರೊ.ಅರುಣ್‍ಕುಮಾರ್ ಈ. ಮಾತನಾಡಿ ರೋಟರಿ ಅಂತರಾಷ್ಟ್ರೀಯ ಸಂಸ್ಥೆ ಇನ್ನೂರು ದೇಶಗಳಲ್ಲಿದೆ. ಕಳೆದ ವರ್ಷ ನಾನು ಅಧ್ಯಕ್ಷನಾಗಿ 93 ಕಾರ್ಯಕ್ರಮಗಳನ್ನು ನೆರವೇರಿಸಿದ್ದೇನೆ. ಎಲ್ಲರ ಸಹಕಾರದಿಂದ ಸಾಧ್ಯವಾಯಿತು. ರಕ್ತದಾನ, ಆರೋಗ್ಯ ತಪಾಸಣೆ, ಗಿಡ ನೆಡುವುದು, ನೈರ್ಮಲ್ಯ, ಸ್ವಚ್ಚತೆ, ಆರೋಗ್ಯ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲಾಯಿತು. ನನ್ನ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್‍ಬುಕ್, ಪೆನ್ಸಿಲ್‍ಗಳನ್ನು ನೀಡಿದೆವು. ಈಗಿನ ನೂತನ ಅಧ್ಯಕ್ಷ-ಕಾರ್ಯದರ್ಶಿಗಳು ಸಹ ಇದೆ ರೀತಿ ಉತ್ತಮ ಕೆಲಸಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.
ಪಿಡಿಜಿ ಆರ್.ಐ. ಡಿಸ್ಟ್ರಿಕ್ಟ್. 3160 ರೊ. ಮಧುಪ್ರಸಾದ್, ವೇದಿಕೆಯಲ್ಲಿದ್ದರು. ಹಿಂದಿನ ಕಾರ್ಯದರ್ಶಿ ರೊ.ಎನ್.ಶ್ರೀನಿವಾಸ ಮಳಲಿ ವಾರ್ಷಿಕ ವರದಿ ಮಂಡಿಸಿದರು.