ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆದಿದೆ. ಇಂದು ಮೂರನೇ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ. ಆದ್ರೆ ಈ ವೇಳೆ ಹಿಂಸಾಚಾರ ಮುಂದಿವರೆದಿದ್ದು, ಟಿಎಂಸಿ ಕಾರ್ಯಕರ್ತ ಸೇರಿ 19 ಜನ ಸಾವನ್ನಪ್ಪಿದ್ದಾರೆ. ಮತದಾನ ಆರಂಭಕ್ಕೂ ಮಜನ್ನವೇ ಕಾಂಗ್ರೆಸ್ ಹಾಗೂ ಟಿಎಂಸಿ ನಾಯಕರು ಕೈಕೈ ಮಿಲಾಯಿಸಿದ್ದರು.
ಮತದಾನದ ವೇಳೆ ಗಲಾಟೆ ನಡೆದ ಕಾರಣ ಒಂದಷ್ಟು ಸಮಯ ಮತದಾನವನ್ನು ಮುಂದೂಡಲಾಗಿತ್ತು. ಮಾತಿಗೆ ಮಾತು ಬೆಳೆದು ಹೊಡೆದಾಟ ಮಾಡಿಕೊಂಡಿದ್ದಲ್ಲದೆ, ಸ್ಥಳೀಯರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದರು. ಫಲಿಮಾರಿ ಗ್ರಾಮ ಪಂಚಾಯತಿ ಬಿಜೆಪಿ ಮತಗಟ್ಟೆ ಏಜೆಂಟ್ ಮಾಧಬ್ ನ ಹತ್ಯೆ ಕೂಡ ನಡೆದಿತ್ತು. ಪರಗಣ ಜಿಲ್ಲೆಯ ಕದಂಬಗಚಿ ಪ್ರದೇಶದಲ್ಲಿ ಸ್ವತಂತ್ರ ಅಭ್ಯರ್ಥಿ ಒಬ್ಬರನ್ನು ಕೊಂದು ಹಾಕಿದ್ದರು.
ಈ ಹತ್ಯೆಗಳನ್ನು ಖಂಡಿಸಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಸ್ಥಳೀಯರು ಬೀದಿಗಿಳಿದು ಪ್ರತಿಭಟಿಸಿದ್ದರು. ನಮ್ಮ ಪಕ್ಷದ ಮೂವರು ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಇದಕ್ಕೆ ಬಿಜೆಪಿ, ಸಿಪಿಐ(ಎಂ) ಮತ್ತು ಕಾಂಗ್ರೆಸ್ ಕಾರಣ ಎಂದು ಟಿಎಂಸಿ ಆರೋಪಿಸಿದೆ.