ಚಿಕ್ಕಬಳ್ಳಾಪುರ: ಸುಧಾಕರ್ ವಿರುದ್ಧ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಗೆಲುವು ಸಾಧಿಸಿ, ಶಾಸಕರಾಗಿದ್ದಾರೆ. ಆಗಾಗ ಸುಧಾಕರ್ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ, ವಾಗ್ದಾಳಿ ನಡೆಸುತ್ತಾ ಇರುತ್ತಾರೆ. ಇದೀಗ ಆ ಹೇಳಿಕೆ ಸಂಬಂಧ ಚಾಲೆಂಜ್ ಹಾಕಿದ್ದಾರೆ.
ಹಗರಣ ಆಗಿಲ್ಲ ಅಂತ ಅನ್ನೋದು ಸತ್ಯವಾದರೆ ಸುಧಾಕರ್ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ. ನಿವೇಶನ ನಕಲಿ ಎಂದು ನಾನು ಪ್ರೂವ್ ಮಾಡೋದಕ್ಕೆ ರೆಡಿ ಇದ್ದೀನಿ. ಅವರು ಪ್ರಾಮಾಣಿಕವಾಗಿದ್ದರೆ ಬರಬೇಕು ಅಲ್ವಾ. ಅವರು ಹಾಕಿದ ಸವಾಲನ್ನು ನಾನು ಸ್ವೀಕರಿಸುವುದಕ್ಕೆ ರೆಡಿ ಇದ್ದೀನಿ. ಅವರು ಯಾಕೆ ಬರಲ್ಲ. ನಾನು ಸುಮ್ಮನೆ ಬರಲ್ಲ. ದಾಖಲೆ ಸಮೇತ ತೋರಿಸುತ್ತೀನಿ ಎಂದು ಸವಾಲು ಹಾಕಿದ್ದಾರೆ.
ಅದರಲ್ಲೂ ಕೊರೊನಾ ಸಮಯದಲ್ಲಿ ಆದಂತ ಹಗರಣದ ಬಗ್ಗೆಯೇ ಹೆಚ್ಚು ಮಾತನಾಡಿದ್ದಾರೆ. ಕೊರೊನಾ ಸಮಯದಲ್ಲಿ ಹಗರಣ ಆಗಿಲ್ಲ ಅನ್ನೋದಿದ್ದರೆ ಹೇಳಲಿ. ನಾನು ದಾಖಲೆ ತೋರಿಸುತ್ತೀನಿ ಎಂದಿದ್ದಾರೆ.