ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಚಿತ್ರದುರ್ಗ,(ಜು.07) : ಕೆಲವು ಸಂಗತಿಗಳನ್ನು ನಾನು ಹೇಳಲು ಆಗುವುದಿಲ್ಲ. ನನ್ನ ಬಳಿಯೂ ಈ ಪ್ರಶ್ನೆಗೆ ಉತ್ತರ ಇಲ್ಲ ಗೊಂದಲ ಇಲ್ಲ. ಬಹಳ ಹುಡುಕಬೇಕಾದ ಸ್ಥಿತಿಯೂ ಇಲ್ಲ ಇಬ್ಬರು ವೀಕ್ಷಕರು ಈಗಾಗಲೇ ಬಂದು ವರದಿ ತೆಗೆದೊಯ್ದಿದ್ದಾರೆ. ಬಹುಶಃ ಬೇರೇನಾದರು ಯೋಚನೆ ಇರಬಹುದೆಂದು ವಿಪಕ್ಷ ನಾಯಕನ ಆಯ್ಕೆ ವಿಳಂಬ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಜಿಲ್ಲಾದ್ಯಕ್ಷರಾದ ಎ ಮುರಳಿಯವರ ನಿವಾಸಕ್ಕೆ ಭೇಟಿ ನೀಡಿ ಉಪಹಾರ ಸೇವಿಸಿ ನಂತರ ಮಾಧ್ಯಮದರೊಂದಿಗೆ ಮಾತನಾಡಿದ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ಆರಂಭದಿಂದಲೇ ಗೊಂದಲದಲ್ಲಿದೆ. ಚುನಾವಣೆಗೂ ಮುನ್ನ ಗ್ಯಾರಂಟಿ ಯೋಜನೆ ಎಲ್ಲರಿಗೂ ಫ್ರೀ ಎಂದಿದ್ದರು. ಈಗ ಗ್ಯಾರಂಟಿ ಯೋಜನೆಗೆ ಕಂಡಿಷನ್ಸ್ ಹಾಕ ತೊಡಗಿದ್ದಾರೆ. ಬೆಲೆ ಏರಿಕೆ ಬರೆ ಹಾಕಿ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ವಿದ್ಯುತ್ ದರ ಏರಿಸುವ ಕೆಲಸ ಮಾಡಿದೆ. ಜನರ ಗಮನ ಡೈವರ್ಟ್ ಮಾಡಲು ಬೇರೆ ವಿಚಾರಗಳ ಮೊರೆ ಹೋಗಿದೆ ಮೂಲ ಸೌಕರ್ಯದ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಮೂಲ ಸೌಕರ್ಯ ಅಭಿವೃದ್ಧಿಯಲ್ಲೇ ಉದ್ಯೋಗ ಸಿಗುವುದು ಎಂದರು.
ಮಾಜಿ ಸಿಎಂ ಹೆಚ್ ಡಿಕೆಗೆ ನಾವು ಬೆಂಬಲಿಸಿದ್ದೇವೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಆಧಾರವಿಟ್ಟುಕೊಂಡು ಮಾತಾಡ್ತಿದ್ದಾರೆ. ಆಧಾರ ಏನೆಂಬುದು ಹೆಚ್.ಡಿ.ಕುಮಾರಸ್ವಾಮಿ ಬಹಿರಂಗ ಪಡಿಸಬೇಕು. ಬಿಜೆಪಿ ಹೊಡೆದಾಳುತ್ತದೆಂದು ಕಾಂಗ್ರೆಸ್, ಕಮುನಿಷ್ಟರು ಹೇಳುತ್ತಾರೆ. ಏಕರೂಪ ನಾಗರಿಕ ಸಂಹಿತೆ ಎಲ್ಲರನ್ನೂ ಒಂದಾಗಿ ಕಾಣುತ್ತದೆ. ಏಕರೂಪ ನಾಗರಿಕ ಸಂಹಿತೆಯನ್ನೇಕೆ ವಿರೋಧಿಸುತ್ತಾರೆ ಎಂದ ಅವರು ಸಿಎಂ ಸಿದ್ಧರಾಮಯ್ಯ, ಮಾಜಿ ಸಿಎಂ ಬೊಮ್ಮಾಯಿ, ಆರ್.ಅಶೋಕ್ ಭೇಟಿ ವಿಚಾರ ಸಹಜವಾಗಿ ಮುಖಾಮುಖಿ ಆಗುವುದು ಅಪರಾಧ ಅಲ್ಲ ಎಂದು ತಿಳಿಸಿ ಬಿಜೆಪಿ
ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ ಎಂದು ಸಿ.ಟಿ ರವಿ ಹೇಳಿದರು.
ಮತಾಂತರ ಪಿಡುಗು ಹಿಂದೂ ಸಮಾಜಕ್ಕೆ ಗೆದ್ದಲು ಹುಳುವಿನ ರೀತಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಕುಟುಂಬ ಜೀವಂತ ಉದಾಹರಣೆ. ಬಲವಂತದ ಮತಾಂತರವನ್ನು ನಮ್ಮ ಸರ್ಕಾರ ನಿಷೇಧಿಸಿತ್ತು. ಕಾಂಗ್ರೆಸ್ ಸರ್ಕಾರ ಮೋಸ, ಆಮಿಷದ ಮತಾಂತರ ಸರಿ ಎನ್ನುತ್ತದೆಯೇ ಉತ್ತರಿಸಲಿ ಎಲ್ಲಾ ಸಮುದಾಯದ ಮುಖಂಡರು, ಮಠಾಧೀಶರು ಚರ್ಚಿಸಬೇಕು ಮಹಾ ಪಂಚಾಯತಿಯನ್ನೇ ಕರೆದು ಚರ್ಚಿಸಬೇಕಾಗುತ್ತದೆ ಎಲ್ಲಾ ಜನ ಮತಾಂತರ ಆದರೆ ಮಠಕ್ಕೆ ಹೋಗುವವರು ಯಾರು? ಎಂದು ಸಿಟಿ ರವಿ ಪ್ರಶ್ನಿಸಿದರು.
ಇದಕ್ಕೂ ಮುನ್ನಾ ಸಿ ಟಿ ರವಿಯವರು ಜಿಲ್ಲಾದ್ಯಕ್ಷರಾದ ಎ ಮುರಳಿಯವರ ನಿವಾಸದಲ್ಲಿ ಪಕ್ಷದ ಸಂಘಟನೆ ಬಗ್ಗೆ ಹಲವು ವಿಷಯಗಳ ಬಗ್ಗೆ ಮಾಹಿತಿ ಪಡೆದರು
ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷರಾದ ಎ ಮುರಳಿ, ಮಾಜಿ ಜಿಲ್ಲಾದ್ಯಕ್ಷರಾದ ಜಿ ಎಂ ಸುರೇಶ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಯಪಾಲ್ ನರೇಂದ್ರ ಹೊನ್ನಾಳ್ ಮಾಜಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಖಜಾಂಚಿ ಮಾಧುರಿ ಗೀರೀಶ್ ಮಾಜಿ ಕೂಡ ಅದ್ಯಕ್ಷ ಸುರೇಶ್ ಸಿದ್ದಾಪುರ ಯುವಮುಖಂಡ ರಾದ ರಘುಚಂದನ್ ಸುರನಹಳ್ಳಿ ವಿಜಯಣ್ಣ ,ಯುವಮೊರ್ಚಾ ಮಾಜಿ ಅದ್ಯಕ್ಷ ಹನುಮಂತೆಗೌಡ ನಗರ ಅದ್ಯಕ್ಷ ನವಿನ್ ಚಾಲುಕ್ಯ ಗ್ರಾಮಾಂತರ ಅದ್ಯಕ್ಷ ಕಲ್ಲಾಶಯ್ಯ ಮಾದ್ಯಮ ವಕ್ತಾರ ರಾದ ನಾಗರಾಜ್ ಬೇದ್ರೆ ದಗ್ಗೆ ಶಿವಪ್ರಕಾಶ್ ಮಾಜಿ ಉಪಾದ್ಯಕ್ಷ ಡಿ ಕೆ ಜಯ್ಯಣ್ಣ ರೈತ ಮೊರ್ಚಾ ಜಿಲ್ಲಾದ್ಯಕ್ಷ ವೆಂಕಟೇಶ ಯಾದವ್ ಮಹಿಳಾ ಮೊರ್ಚಾ ಜಿಲ್ಲಾಅದ್ಯಕ್ಷೆ ಶೈಲಜಾ ರೆಡ್ಡಿ ಹಿರಿಯ ಮುಖಂಡ ಶಿವಣ್ಣಚಾರ್ ನಗರ ಕಾರ್ಯದರ್ಶಿ ಕಿರಣ್ ಕಚೇರಿ ಕಾರ್ಯದರ್ಶಿ ಶಂಭು ಸೇರಿದಂತೆ ಹಲವರು ಉಪಸ್ಥಿತಿ ಇದ್ದರು.