ಸಿಎಂ ಸಿದ್ದರಾಮಯ್ಯ ಅವರ 14ನೇ ಬಜೆಟ್ ನಲ್ಲಿ ಗೃಹಲಕ್ಷ್ಮೀ ಯೋಜನೆ ಬಗ್ಗೆ ಮಾಹಿತಿ ನೀಡಿದ್ದು, ಮನೆ ಯಜಮಾನಿಗೆ ಪ್ರತಿ ತಿಂಗಳು 2000, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು, ಬಿಸಿಯೂಟ ಕಾರ್ಯಕರ್ತೆಯರು, ಲಿಂಗತ್ವ ಅಲ್ಪಸಂಖ್ಯಾತರು, ಮಾಜಿ ದೇವದಾಸಿಯರಿಗೆ ಗೃಹಲಕ್ಷ್ಮಿಯ 2000 ಸಿಗಲಿದೆ. ಶೀಘ್ರದಲ್ಲಿಯೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.
ಬೆಂಗಳೂರು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಗುರಿ ಹೊಂದಲಾಗಿದ್ದು, 2026ರ ಒಳಗೆ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕ ಮಾಡಲಿದೆ. ಬೈಯಪ್ಪನಹಳ್ಳಿ ಬಳಿ ಹೊಸ ಮೇಲ್ಸೋತುವೆ ನಿರ್ಮಾಣ, ಬೆಂಗಳೂರಿನಲ್ಲಿ 800 ಕೋಟಿ ವೆಚ್ಚದಲ್ಲಿ ವೈಟ್ ಟೈಪಿಂಗ್, ಬೆಂಗಳೂರು ಅಂತರಾಷ್ಟ್ರ ಮಟ್ಟಕ್ಕೆ ಏರಿಸುವ ಗುರಿ ಹೊಂದಲಾಗಿದೆ.
ಬಿಯರ್ ಮೇಲಿನ ಸುಂಕವನ್ನು ಶೇಕಡ 10ರಷ್ಟು ಹೆಚ್ಚಳ ಮಾಡಲಾಗಿದೆ. ಅಬಕಾರಿ ಇಲಾಖೆಯಿಂದ 36 ಕೋಟಿ ತೆರಿಗೆ ಗುರಿ ಹೊಂದಲಾಗಿದೆ. ಮಧ್ಯದ ಮೇಲಿನ ದರದಲ್ಲಿ ಶೇಕಡ 20ರಷ್ಟು ಹೆಚ್ಚಳವಾಗಿದೆ.
ಚಿತ್ರದುರ್ಗ ಮೆಡಿಕಲ್ ಕಾಲೇಜು ಆರಂಭ ಆಗಬೇಕು ಅನ್ನೋದು ಕೋಟೆನಾಡಿನ ಮಂದಿಯ ಕನಸು. ಸುತ್ತ ಮುತ್ತ ಇರುವ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಮೆಡಿಕಲ್ ಕಾಲೇಜಿಗೆ ಡಿಮ್ಯಾಂಡ್ ಇಡಲಾಗಿದೆ. ಈ ಬಾರಿಯ ಬಜೆಟ್ ನಲ್ಲಿಯೂ ಸಿದ್ದರಾಮಯ್ಯ ಅವರು ಮೆಡಿಕಲ್ ಕಾಲೇಜು ಆರಂಭದ ಸೂಚನೆ ನೀಡಿದ್ದಾರೆ.
ಚಿತ್ರದುರ್ಗದ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಎಲ್ಲಾ ಪೂರ್ವ ಸಿದ್ಧತೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಹೇಳಿದರು.
ಆರೋಗ್ಯ ಇಲಾಖೆಯಲ್ಲಿ 14,950 ಕೋಟಿ. ಪ್ರಮುಖ ಮೂರು ಇಲಾಖೆಗಳಿಂದ ತೆರಿಗೆ ಸಂಗ್ರಹ ಗುರಿ. ಅಬಕಾರಿ ತೆರಿಗೆ 36,000 ಕೋಟಿ, ನೊಂದಣಿ ಮುದ್ರಾಂಕ 25000 ಕೋಟಿ, ಒಟ್ಟು ಒಂದು 1,62,000 ಕೋಟಿ ತೆರಿಗೆ ಗುರಿ ಹೊಂದಲಾಗಿದೆ.