ಹಾವೇರಿ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ತರಕಾರಿ ಬೆಲೆಯೆಲ್ಲಾ ಗಗನಕ್ಕೇರಿದೆ. ಅದರಲ್ಲೂ ಟಮೋಟೋ ಬೆಲೆ ಕೇಳಿದ್ರೆ ತಲೆ ಸುತ್ತಿ ಬೀಳುವಷ್ಟರಮಟ್ಟಿಗೆ ಬೆಲೆ ಹೆಚ್ಚಳವಾಗಿದೆ. ಈ ಹಿನ್ನೆಲೆ ಹಾವೇರಿಯ ರೈತನೊಬ್ಬ ಟಮೋಟೋ ಕದಿಯುವ ಕಳ್ಳನನ್ನು ಹಿಡಿಯಲು ಸಿಸಿಟಿವಿ ಹಾಕಲಾಗಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರ ಗ್ರಾಮದ ಮಾರುಕಟ್ಟೆಯಲ್ಲಿ ಸಿಸಿಟವಿ ಅಳವಡಿಸಲಾಗಿದೆ. ಕೃಷ್ಣಪ್ಪ ಎಂಬ ರೈತ ಸಿಸಿಟಿವಿ ಹಾಕಿಸಿ, ಟಮೋಟೋ ಮಾರಾಟ ಮಾಡುತ್ತಿದ್ದಾರೆ. ಹಾವೇರಿ ಮಾರುಕಟ್ಟೆಯಲ್ಲಿ ಕೆಜಿ ಟಮೋಟೋ 120 ರೂಪಾಯಿ ಇದೆ.
ಸಿಸಿಟಿವಿ ಕ್ಯಾಮರಾ ಬಗ್ಗೆ ಮಾತನಾಡಿದ ಕೃಷ್ಣಪ್ಪ, ತರಕಾರಿ ತೆಗೆದುಕೊಳ್ಳುವುದಕ್ಕೆ ಒಮ್ಮೆಲೆ ನಾಲ್ಕೈದು ಜನ ಬರ್ತಾರೆ. ಆಗ ನಾಲ್ಕೈದು ಟಮೋಟೋ ತೆಗೆದುಕೊಂಡರು ನಮಗೆ 40-45 ರೂಪಾಯಿ ನಷ್ಟವಾಗುತ್ತೆ. ಅವರ ಜೊತೆ ಜಗಳ ಮಾಡುವುದಕ್ಕಿಂತ, ಸಿಸಿಟಿವಿಯಲ್ಲಿ ನೋಡುವುದು ಉತ್ತಮ ಎಂದಿದ್ದಾರೆ.