ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆ : ಅಜಿತ್ ಪವಾರ್ DCM ಆಗಿ ಪ್ರಮಾಣ ವಚನ ಸ್ವೀಕಾರ

 

ಮಹಾರಾಷ್ಟ್ರ ರಾಜಕೀಯದಲ್ಲಿ ಮಿಂಚಿನ ಸಂಚಲನ ಸೃಷ್ಟಿಯಾಗಿದೆ. ಎನ್‌ಸಿಪಿ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಸ್ಥಾನ ನಿರಾಕರಣೆ ಬಳಿಕ ಬಂಡಾಯವೆದ್ದ ಅಜಿತ್ ಪವಾರ್ ಅವರು ಸಭೆ ನಡೆಸಿದ್ದರು. ಇದರ ಬೆನ್ನಲ್ಲೆ ಏಕನಾಥ್ ಶಿಂಧೆ ಅವರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಯಾಣ ವಚನ ಸ್ವೀಕರಿಸಿದ್ದಾರೆ.

ಡಬಲ್ ಇಂಜಿನ್ ಸರ್ಕಾರಕ್ಕೆ ಮತ್ತೊಂದು ಇಂಜಿನ್ ಸೇರಿದೆ. ಇದು ತ್ರಿಬಲ್ ಇಂಜಿನ್ ಸರ್ಕಾರ. ನಮ್ಮ ಸರ್ಕಾರ ಬುಲೆಟ್ ಟ್ರೈನ್ ಅಂತ ಕೆಲಸ ಮಾಡಲಿದೆ. ಮಹಾರಾಷ್ಟ್ರದ ಅಭಿವೃದ್ಧಿಗಾಗಿ ಅಜಿತ್ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಹೇಳಿಕೆ ನೀಡಿದ್ದಾರೆ.

ಬಂಡಾಯವೆದ್ದಿದ್ದ ಅಜಿತ್ ಪವಾರ್ ಅವರು, ಭಾನುವಾರ ಮುಂಬೈನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಪಕ್ಷದ ಕೆಲವು ನಾಯಕರು ಜೊತೆ ಸಭೆ ನಡೆಸಿದ್ದರು. ಅದರ ಬೆನ್ನಲ್ಲೆ ರಾಜ್ಯಪಾಲ ರಮೇಶ್ ಪೈಸ್ ಅವರ ಸಮ್ಮುಖದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ರಮೇಶ್ ಪೈಸ್ ಪ್ರತಿಜ್ಞಾ ವಿಧಿ ಬೋಧಿಸಿದರು. ಎನ್‌ಸಿಪಿ ಬಿಟ್ಟ ನಾಯಕ ಅಜಿತ್ ಪವಾರ್ ಜೊತೆ 29 ಶಾಸಕರ ಬೆಂಬಲ ಹೊಂದಿದ್ದಾರೆ. ಅದರಲ್ಲಿ ಎಂಟು ಏಕನಾಥ್ ಶಿಂಧೆ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಅಜಿತ್ ನಡೆಗೆ ಶರತ್ ಪವಾರ್ ಕೆಂಡಮಂಡಲ ಆಗಿದ್ದಾರೆ. ಇದು ಆಪರೇಷನ್ ಕಮಲ. ಮಹಾರಾಷ್ಟ್ರದಲ್ಲಿ ರಾಜಕಾರಣ ಮೌಲ್ಯ ಅದಃಪತನವಾಗಿದೆ. ಮಹಾರಾಷ್ಟ್ರ ಜನತೆ ಎನ್ ಸಿಪಿ ಜೊತೆಗೆ ಇದ್ದಾರೆ ಎಂದು ಶರತ್ ಪವಾರ್ ಹೇಳಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *