ಬೆಂಗಳೂರು: ವಿರೋಧ ಪಕ್ಷದ ಸ್ಥಾನದಲ್ಲಿ ಈಗ ಬಿಜೆಪಿ ಇದೆ. ಆದರೆ ಇನ್ನು ನಾಯಕನ ಆಯ್ಕೆಯಾಗಿಲ್ಲ. ಕಾಂಗ್ರೆಸ್ ನಾಯಕರು ಕೂಡ ಈ ಬಗ್ಗೆ ಸಾಕಷ್ಟು ಬಾರೀ ವ್ಯಂಗ್ಯ ಮಾಡಿದ್ದಾರೆ. ಸದನ ಆರಂಭವಾಗುವುದರೊಳಗೆ ಆಯ್ಕೆ ಮಾಡಬೇಕಿದೆ. ಇಂದು ವಿರೋಧ ಪಕ್ಷದ ನಾಯಕನ ಆಯ್ಕೆ ಸಾಧ್ಯತೆ ಇದೆ.
ಇಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಈ ಬಗ್ಗೆ ಪ್ರಯಾಣಕ್ಕೂ ಮುನ್ನ ಮಾತನಾಡಿದ್ದಾರೆ. ನಮ್ಮ ಅಧ್ಯಕ್ಷ ಜೆ ಪಿ ನಡ್ಡ ಅವರು ದೆಹಲಿಗೆ ಬರಲು ಹೇಳಿದ್ದಾರೆ. ವಿಷಯ ಏನು ಅಂತ ಯಾರಿಗೂ ಗೊತ್ತಿಲ್ಲ. ಹೋಗಿ ಅವರ ಜೊತೆ ಮಾತಾಡಿ, ಸಾಧ್ಯವಾದರೆ ರಾತ್ರಿ ವಾಪಸ್ ಬರ್ತೀನಿ. ನಾಡಿದ್ದು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಅದಕ್ಕಾಗಿ ಸಂಜೆ ವಾಪಸ್ ಬರುವ ಪ್ಲಾನ್ ಮಾಡಿದ್ದೇನೆ. ನನಗೆ ಯಾವ ಸ್ಪಷ್ಟತೆಯು ಗೊತ್ತಿಲ್ಲ. ಅವರ ಮನಸ್ಸಲ್ಲಿ ಏನಿದೆ ಅನ್ನೋದು ತಿಳಿದುಕೊಳ್ಳುತ್ತೇನೆ ಎಂದಿದ್ದಾರೆ.
ಇದೇ ವಿಚಾರವಾಗಿ ಅಶ್ವತ್ಥ್ ನಾರಾಯಣ್ ಮಾತನಾಡಿ, ಅವರಿಗೆ ಮುಖ್ಯಮಂತ್ರಿ ನಿಯೋಗ ಮಾಡಲಿಕ್ಕೆ ಎಷ್ಟು ದಿನ ಬೇಕಾಯಿತು ಅಂತ ನಮಗೂ ಗೊತ್ತಿದೆ. ನಮಗೆ ಸದನ ನಡಿಬೇಕಾದ್ರೆ ವಿರೋಧ ಪಕ್ಷದ ನಾಯಕ ಬೇಕು, ಮಾಡುತ್ತೇವೆ. ಯಾರು ಆಕಾಂಕ್ಷಿಯಾಗಿಲ್ಲ, ಹೈಕಮಾಂಡ್ ಕೊಟ್ಟರೆ ನಿಭಾಯಿಸುತ್ತೇನೆ. ಇನ್ಮುಂದೆ ನೋಡಿ ಹೇಗಿರುತ್ತೆ ಅಂತ ನಮ್ಮ ಹೋರಾಟ ಎಂದಿದ್ದಾರೆ.