ಬೆಂಗಳೂರು: ಯಾವ ವಿಚಾರಕ್ಕೂ ಯುದ್ಧ ಮಾಡಲು ನಮಗೆ ಇಷ್ಟವಿಲ್ಲ. ಅವರೆಲ್ಲ ನಮ್ಮ. ಬ್ರದರ್ಸ್ ತಮಿಳುನಾಡಿನವರೂ ಇಲ್ಲಿದ್ದಾರೆ, ಕರ್ನಾಟಕದವರು ತಮಿಳನಾಡಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕುಳಿತು ಬಗೆಹರಿಸಿಕೊಳ್ಳೋಣ ಎಂಬ ಆಸೆ ನಮ್ಮದು ಅಷ್ಟೇ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
10 ಕೆಜಿ ಅಕ್ಕಿ ಕೊಡಬೇಕೆಂದು ಬಿಜೆಪಿಗರ ಒತ್ತಾಯದ ಬಗ್ಗೆ ಮಾತನಾಡಿ, ಬಿಜೆಪಿ ನಾಯಕರಾ ಹೋರಾಟವನ್ನು ನಾವು ತಡೆಯುವುದಿಲ್ಲ. ನೀವು ಕೊಟ್ಟ ಭರವಸೆಗೆ ಹೋರಾಟ ಮಾಡಿ ಎಂದು ಕೇಳಿದ್ದೇವೆ. ನಮ್ಮ ಗ್ಯಾರಂಟಿಗಳ ಬಗ್ಗೆ ಬಿಜೆಪಿ ಅವರು ಪ್ರಚಾರ ಮಾಡುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ಗದ ಪ್ರಹಾರ ಮಾಡುತ್ತಿದೆ. ರಾಜ್ಯದ ಎಸ್ ಬಿ ಐ ಗೋದಾನಿನಲ್ಲಿ ಅಕ್ಕಿ ಹುಳ ಹಿಡಿಯುತ್ತಿದೆ. ಕಾಂಗ್ರೆಸ್ ಗೆ ಒಳ್ಳೆಯ ಹೆಸರು ಬರಲಿದೆ ಎಂದು ಅಕ್ಕಿ ಕೊಡುತ್ತಿಲ್ಲ. ನಾವು ದೀರ್ಘಾವಧಿಗೆ ಯೋಜನೆ ರೂಪಿಸುತ್ತಿದ್ದೇವೆ. ನಮ್ಮ ರಾಜ್ಯದಲ್ಲೂ ಭತ್ತ ಬೆಳೆಯುವವರಿಗೆ ಬೆಂಬಲ ನೀಡುತ್ತೇವೆ ಎಂದಿದ್ದಾರೆ.
ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ಬದಲು ಹಣ ಹಾಕುವ ವಿಚಾರ, ಸಿಎಂ, ಆಹಾರ ಸಚಿವರು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಶೇಕಡ 80 ರಿಂದ 85ರಷ್ಟು ಕಾರ್ಡುದಾರರು ಖಾತೆಗೆ ಆಧಾರ್ ಲಿಂಕ್ ಮಾಡಿಸಿದ್ದಾರೆ. 15 ರಿಂದ 20 ರಷ್ಟು ಕಾರ್ಡುದಾರರ ಅಕೌಂಟಿದೆ. ಆಧಾರ್ ಲಿಂಕ್ ಖಾತೆಗೆ ಹಣ ಕೊಡಿ ಎಂದರೆ ಹಾಕುತ್ತೇವೆ. ಬಿಜೆಪಿ ಸಲಹೆಯನ್ನು ಪರಿಗಣಿಸಿ ತೀರ್ಮಾನ ಮಾಡಿದ್ದೇವೆ.