ಬಾಗಲಕೋಟೆ: ಸಿದ್ದರಾಮಯ್ಯ ಅವರ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿರುವ ಕಾರಣ ಬಸವ ಅಂತರಾಷ್ಟ್ರೀಯ ಕೇಂದ್ರದ ಬಗ್ಗೆ ಮತ್ತೆ ಭರವಸೆ ಮೂಡಿದೆ. ಯಾಕಂದ್ರೆ 2018 ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರವಿದ್ದಾಗ ಬಸವ ಅಂತರಾಷ್ಟ್ರೀಯ ಕೇಂದ್ರಕ್ಕೆ ಗುದ್ದಲಿ ಪೂಜೆ ನಡೆದಿತ್ತು. ಆದರೆ ಬಳಿಕ ನೆನೆಗುದಿಗೆ ಬಿದ್ದಿತ್ತು. ಈಗ ಮತ್ತೆ ಸಿದ್ದರಾಮಯ್ಯ ಅವರೇ ಸಿಎಂ ಆಗಿರುವ ಕಾರಣ, ಮತ್ತೆ ನೆನೆಗುದಿಗೆ ಬಿದ್ದಿರುವ ಯೋಜನೆಗೆ ಮತ್ತೆ ಶುರುವಾಗುವ ಸಾಧ್ಯತೆ ಇದೆ.
140 ಕೋಟಿ ವೆಚ್ಚದಲ್ಲಿ ಅಕ್ಷರಧಾಮ ಮಾದರಿಯಲ್ಲಿ ಬಸವ ಅಂತಾರಾಷ್ಟ್ರೀಯ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ. ಶಿಲಾನ್ಯಾಸಗೊಂಡು ಐದು ವರ್ಷಕ್ಕೂ ಅಧಿಕವಾಗಿದ್ದು ಇದುವರೆಗೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಅನುಭವ ಮಂಟಪ, ಸನ್ನಿವೇಶಗಳನ್ನು ಚಿತ್ರಕಲೆ, ಶಿಲ್ಪಕಲೆ, ತ್ರಿ ಡಿ ತಂತ್ರಜ್ಞಾನ ಬಳಸಿ ಪ್ರದರ್ಶನ ಮಾಡುವುದು, ಬಸವ ಅಂತಾರಾಷ್ಟ್ರೀಯ ಮ್ಯೂಜಿಯಂ, ಶರಣ ಗ್ರಾಮ ನಿರ್ಮಾಣ ಕಲ್ಪನೆಯನ್ನು ಈ ಅಂತರಾಷ್ಟ್ರೀಯ ಕೇಂದ್ರದಲ್ಲಿ ಮಾಡಲಾಗಿದೆ.
ಭೂಮಿ ಪೂಜೆ ಮಾಡಿದ್ಧ ಸಿದ್ದರಾಮಯ್ಯ ಇದೀಗ ಮತ್ತೆ ಸಿಎಂ ಆಗಿದ್ದು ಸಿದ್ದರಾಮಯ್ಯ ಸರಕಾರದಲ್ಲಿ ಬಸವ ಅಂತರಾಷ್ಟ್ರೀಯ ಕೇಂದ್ರ ಕಾಮಗಾರಿ ಪೂರ್ಣವಾಗಲಿ ಎಂದು ಜನರು ಮನವಿ ಮಾಡಿದ್ದಾರೆ. ಈ ಬಗ್ಗೆ ಹುನಗುಂದ ಶಾಸಕ ವಿಜಯಟನಂದ ಕಾಶಪ್ಪನವರು ಮಾತನಾಡಿ, 2018ರ ಅವಧಿಯಲ್ಲಿ ಸಿಎಂ ಆಗಿದ್ದ ವೇಳೆ ಹಣ ಬಿಡುಗಡೆಯಾಗಿದೆ. ಆದರೆ ಮುಂದೆ ಬಂದ ಸರಕಾರ ಹಾಗೂ ಆಗ ಹುನಗುಂದ ಶಾಸಕರಾಗಿದ್ದ ದೊಡ್ಡನಗೌಡ ಪಾಟಿಲ್ ಇದರ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದಿದ್ದಾರೆ.