Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತಾಲೂಕಾಗಿ ವರ್ಷಗಳೇ ಗತಿಸಿದರು ಮೇಲ್ದರ್ಜೆಗೊಳ್ಳದ ರೈತ ಸಂಪರ್ಕ ಕೇಂದ್ರ.!

Facebook
Twitter
Telegram
WhatsApp

* ಹಳೆಯ ಕಟ್ಟಡಗಳಲ್ಲೇ ಕೆಲಸ ಕಾರ್ಯಗಳು : ರೈತರಿಗೆ ಸರಿಯಾಗಿ ಸಿಗದ ಸೌಲಭ್ಯಗಳು*

* ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಭರವಸೆ ಹುಸಿ : ಸರ್ಕಾರ ಬದಲಾವಣೆ ಆದ್ರೂ ರೈತ ಸಂಪರ್ಕ ಕೇಂದ್ರ ಬದಲಾವಣೆ ಆಗಲಿಲ್ಲ

ಕುರುಗೋಡು. ಜೂ.26

ವರದಿ :ಮಮತಾ. ಕೆ.

ಸೂಕ್ತವಾದ ಕಟ್ಟಡವಿಲ್ಲ, ಹಳೆಯ ಕಟ್ಟಡಗಳ ಗೋಡೆಗಳೇ ಸೌಚಾಲಯಕ್ಕೆ ಆಸರೆ, ಬಂದ ರೈತರಿಗೆ ರಕ್ಷಣೆ ಇಲ್ಲ, ಶಿಥಿಲಾವ್ಯಸ್ಥೆಯಲ್ಲಿ ಕಟ್ಟಡಗಳು, ಕಟ್ಟಡದ ಆವರಣ ತುಂಬಾ ದುರ್ವಾಸನೆ ಇದು ಕುರುಗೋಡು ಪಟ್ಟಣದ ಕೃಷಿ ಇಲಾಖೆಯ ಉಪ ರೈತ ಸಂಪರ್ಕ ಕೇಂದ್ರದ ದುಸ್ಥಿತಿ.!

ಹೌದು ಕುರುಗೋಡು ತಾಲೂಕು ರಚನೆಗೊಂಡು ಸುಮಾರು 3 ವರ್ಷ ಕಳೆದಿದೆ ಆದ್ರೂ ರೈತ ಸಂಪರ್ಕ ಕೇಂದ್ರ ಮೇಲ್ದರ್ಜೆಗೊಳ್ಳದೆ 35 ವರ್ಷದ ಹಳೆಯ ಕಟ್ಟಡಗಳಲ್ಲೇ ಕಾರ್ಯನಿರ್ವಾಹಿಸಬೇಕಾದ ಅನಿವಾರ್ಯತೆ ಗಳು ನಿರ್ಮಾಣಗೊಂಡಿವೆ. ಕೇಂದ್ರದಲ್ಲಿ ಸಹಾಯಕ ಅಧಿಕಾರಿಗಳೋಬ್ಬರೇ ಕರ್ತವ್ಯ ನಿರ್ವಹಿಸುತ್ತಿದ್ದು, ಇವರು ರೈತರ ಜಮೀನು ಗಳಿಗೆ ಭೇಟಿ ನೀಡಬೇಕು ಜೊತೆಗೆ  ಇಲಾಖೆಗೆ ಬರುವ ರೈತರ ಸಮಸ್ಯೆಗಳಿಗೆ ಕೂಡ ಸ್ಪಂದಿಸಬೇಕಾಗಿದೆ. ಇದರಿಂದ ಬಹಳ ಸಮಸ್ಯೆಗಳು ಎದುರಾಗಿದ್ದು, ರೈತರಿಗೆ ಸರಿಯಾಗಿ ಕೃಷಿ ಇಲಾಖೆಯ ಸೇವೆಗಳು ಸಿಗದಂತಾಗಿದೆ. ಹುದ್ದೆಗಳು ಕೂಡ ಖಾಲಿ ಇದ್ದು, ಭರ್ತಿಯಾಗದೆ ಮೇಲ್ದರ್ಜೆಗೊಳ್ಳದೆ ಅನೇಕ ಸಮಸ್ಯೆಗಳ ಸುಳಿಯಲ್ಲಿ ರೈತ ಸಂಪರ್ಕ ಕೇಂದ್ರ ಸಿಲುಕಿಕೊಂಡಿದೆ.
ಇನ್ನೂ ಪಟ್ಟಣದಲ್ಲಿ ಬಿಜೋಪಚರಗಳು ಹಾಗೂ ಬ್ಲಾಕ್ ಗೊಬ್ಬರ ಸೇರಿದಂತೆ ಇತರೆ ಗಳನ್ನು ರೈತರು ತೆಗೆದುಕೊಂಡರೆ ಇನ್ನೂ ಕೃಷಿ ಚಟುವಟಿಕೆಗಳಿಗೆ ಸಂಬಂದಿಸಿದ ಅನೇಕ ಕೆಲಸಗಳಿಗೆ ಬಳ್ಳಾರಿ ಯಲ್ಲಿರುವ ಕೃಷಿ ಇಲಾಖೆಯ ಸಹಾಯಕ ಜಂಟಿ ನಿರ್ದೇಶಕರ ಕಚೇರಿಗೆ ತೇರಳಬೇಕಾದ ಅನಿವಾರ್ಯತೆಗಳು ಎದುರಾಗಿವೆ.

ಕೇಂದ್ರಕ್ಕೆ ವೇಣಿವಿರಾಪುರ, ಏಳುಬೆಂಚಿ, ಸಿದ್ದಮ್ಮನಹಳ್ಳಿ, ಕಲ್ಲುಕಂಬ, ಮುಷ್ಟಗಟ್ಟೆ, ಎಚ್.ವಿರಾಪುರ, ಸೋಮಲಾಪುರ, ಒರ್ವಾಯಿ ಸೇರಿದಂತೆ ಸುಮಾರು 18 ಗ್ರಾಮಗಳು ಒಳಪಡುತಿದ್ದು, ಕೇಂದ್ರಕ್ಕೆ ಬರುವ ರೈತರು ಭತ್ತ, ಸೂರ್ಯಕಾಂತಿ, ಮೆಕ್ಕೆಜೋಳ, ಸಜ್ಜಿ, ರಾಗಿ, ನವಣಿ, ಜೋಳ, ಸೇರಿದಂತೆ ಅನೇಕ ಬಿಜೋಪಚರಗಳು ಕಂಡುಕೊಳ್ಳಲು ಬಂದ್ರೆ ಅವರಿಗೆ ಕುಳಿತುಕೊಳ್ಳುವುದಕ್ಕೆ ಸರಿಯಾದ ವ್ಯವಸ್ಥೆ ಇಲ್ಲದಾಗಿದೆ. ಕೇಂದ್ರದ ಮುಂದುಗಡೆ ನಿಂತು ಬಿಜೋಪಚರಗಳು ಸೇರಿದಂತೆ ಇತರೆಗಳನ್ನು ಪಡೆದುಕೊಂಡು ಹೋಗಬೇಕಾಗಿದೆ. ಕೇಂದ್ರದ ಅಕ್ಕ ಪಕ್ಕದಲ್ಲಿ ತುಂಬಾ ಪ್ಲಾಸ್ಟಿಕ್  ವಸ್ತುಗಳು ಸೇರಿದಂತೆ ಬೇರೆ ಬೇರೆ ವಸ್ತುಗಳು ಬಿದ್ದಿದ್ದು, ಗಬ್ಬು ನಾರುತ್ತಿವೆ ಬರುವ ರೈತರಿಗೆ ತುಂಬಾ ತೊಂದರೆ ಗಳು ಉಂಟಾಗುತ್ತಿವೆ.

ಕೇಂದ್ರದಲ್ಲಿ ಪರಿಕರಗಳ ಸಂಗ್ರಹಣೆಗೆ ತೊಂದರೆ :

ಕೇಂದ್ರವು ತುಂಬಾ ಹಳೆಯ ಕಟ್ಟಡಗಳಲಾಗಿದ್ದು, ಕಟ್ಟಡದಲ್ಲಿ ಇಲಾಖೆ ಯ ಸಾಮಗ್ರಿಗಳು ಹಾಗೂ ಪರಿಕರಗಳು ಹಿಟ್ಟುಕೊಳ್ಳುವುದಕ್ಕೂ ಸರಿಯಾದ ವ್ಯವಸ್ಥೆಇಲ್ಲದಾಗಿದೆ.ಕಂಪ್ಯೂಟರ್, ಜಿರಾಕ್ಸ್, ಗಾಡ್ರಾಜ್, ಆಫೀಸ್ ಪೈಲ್ಸ್ ಗಳು ಸೇರಿದಂತೆ ಅನೇಕ ಪರಿಕರಗಳ ಸಂಗ್ರಹಣೆಗೆ ಸೂಕ್ತ ವ್ಯವಸ್ಥೆ ಇಲ್ಲದಾಗಿದೆ. ಇರುವ ಎರಡು ಹಳೆಯ ಕಟ್ಟಡದಲ್ಲಿ ಒಂದು ಕಟ್ಟಡದಲ್ಲಿ ಪೈಲ್ಸ್ ಗಳು, ಟೇಬಲ್ಸ್ ಇದ್ರೆ ಇನ್ನೊಂದು ಕಟ್ಟಡದಲ್ಲಿ ಬಿಜೋಪಚರಗಳು ಸಂಗ್ರಹಣೆ ಮಾಡಬೇಕಾಗಿದೆ ಇವುಗಳಿಗೆ ಸುರಕ್ಷತೆ ಇಲ್ಲದಾಗಿದೆ ಕಾರಣ ಕಟ್ಟಡದ ಕಿಡಕಿಗಳು ಎಲ್ಲಂದರಲ್ಲಿ ಕಿತ್ತು ಹೋಗಿದ್ದು, ಕಿಡಕಿಗಳಿಗೆ ರೋಟ್ಟು ಗಳು ಅಂಟಿಸಲಾಗಿದೆ. ಮೇಲ್ಪದರೂ ಕೂಡ ಕಿತ್ತಿ ಕಿತ್ತಿ ಬಿಳುತಿವೆ ಇದರಿಂದ ಪುಂಡ ಪೋಕಿರಿಗಳು ಯಾವಗ ಬೇಕಾದ್ರೂ  ಬಂದು ಹೊತ್ತುಕೊಂಡು ಹೋಗಬಹುದಾಗಿದೆ.

ಪಾಳು ಬಿದ್ದ ಹಳೆಯ ಸೌಚಾಲಯ :

ಇಲಾಖೆಯ ಹಳೆಯ ಸೌಚಾಲಯ ಗಳು ಪಾಳು ಬಿದ್ದು ನಾರುತ್ತಿವೆ. ಕಟ್ಟಡದ ಹಾಗೂ ಪಾಳು ಬಿದ್ದ ಸೌಚಾಲಯದ ಸುತ್ತ ಗಿಡ ಗಂಟೆಗಳು ಬೆಳೆದು ನಿಂತಿದ್ದು, ವಿಷ ಜಂತು ಗಳು ತಿರುಗಾಡುತ್ತಿವೆ. ಇಲಾಖೆ ಬರುವ ರೈತರು ಬೇರೆ ಬೇರೆ ಜನರು ಕೇಂದ್ರದ ಪಕ್ಕದಲ್ಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ದುರ್ವಾಸನೆ ಬಿರುತ್ತಿದ್ದೂ ಪಕ್ಕದಲ್ಲಿ ವಾಸವಿರುವ ಕುಟುಂಬಗಳಿಗೆ ತುಂಬಾ ಕಿರಿ ಕಿರಿ ಯಾಗುತ್ತಿದೆ. ಕೇಂದ್ರದಲ್ಲಿ ಕೆಲಸ ಮಾಡುವವರು ಕೂಡ ಅಂಗೈಯಲ್ಲಿ ಜೀವ ಹಿಡಿದುಕೊಂಡು ಮಾಡಬೇಕಾಗಿದೆ.

ಹದೆ ಗೆಟ್ಟ ಕಟ್ಟಡಗಳು  :

ಸುಮಾರು 35 ವರ್ಷದ ಕಟ್ಟಡಗಳಾಗಿದ್ದು, ಪಟ್ಟಣಕ್ಕೆ ತಾಲೂಕು ಭಾಗ್ಯ ಸಿಕ್ಕರೂ ಇನ್ನೂ ರೈತ ಸಂಪರ್ಕ ಕೇಂದ್ರ ಮಾತ್ರ ಹದೆ ಗೆಟ್ಟ ಕಟ್ಟಡಗಳಲ್ಲೇ ಇರುವುದು ದುರಂತದ ಸಂಗತಿಯಾಗಿದೆ. ಕಟ್ಟಡ ಮೆಲ್ಚಾವಣಿ ತುಂಬಾ ಶಿಥಿಲಾಗೊಂಡು ಕಾಂಕ್ರಿಟ್ ಪದರು ಉದುರುತ್ತಿದೆ. ಅಕ್ಕ ಪಕ್ಕದ ಗೋಡೆ ಗಳು ಸಿಮೆಂಟ್ ಪದರು ಊದಿರಿ ಬಿದ್ದು ಕಲ್ಲಿನಿಂದ ಇವೆ ಅಲ್ಲದೆ ಕಿಡಕಿಗಳು ಸಂಪೂರ್ಣ ಕಿತ್ತು ಹೋಗಿದ್ದು, ಅವಗಳಿಗೆ ರೋಟ್ಟುಗಳು ಕಟ್ಟಲಾಗಿದೆ ಇಂತಹ ಸ್ಥಿತಿಯಲ್ಲಿ ಇರುವ ಕಟ್ಟಡಗಳಲ್ಲಿ ಅಧಿಕಾರಿಗಳು ಜೀವ ಭಯದಿಂದ ಕಾರ್ಯನಿರ್ವಹಿಸಬೇಕಾಗಿದೆ.ರೈತರಿಗೂ ಕೂಡ ಸರಿಯಾಗಿ ವ್ಯವಸ್ಥೆ ಇರದಂತಾಗಿದೆ.

ಇಲ್ಲದ ಗೋದಾಮ :

ರೈತರ ಪರಿಕರ, ಬೀಜ ಮತ್ತು ಗೊಬ್ಬರ ಸೇರಿದಂತೆ ಇನ್ನಿತರ ಸಾಮಾನುಗಳನ್ನು ದಾಸ್ತಾನು ಮಾಡಿಕೊಳ್ಳಲು ಗೋದಾಮ ಇಲ್ಲದಾಗಿದೆ ಪರಿಣಾಮ ಹಳೆಯ ಕಟ್ಟಡದಲ್ಲೇ ಸಂಗ್ರಹಣೆ ಮಾಡಬೇಕಾಗಿದೆ.ಸದ್ಯ ಇರುವ ರೈತ ಸಂಪರ್ಕ ಕೇಂದ್ರದ ಮೇಲ್ಛಾವಣಿ ಮಳೆಗಾಲದಲ್ಲಿ ಸೋರಿಕೆಯಾಗುತ್ತಿದ್ದು, ಬೀಳುವ ಹಂತದಲ್ಲಿದೆ. ಇದರಿಂದ ಬೀಜ ಮತ್ತು ಗೊಬ್ಬರ ದಾಸ್ತಾನು ಮಾಡಲು ಸಾಧ್ಯವಾಗುತ್ತಿಲ್ಲ.
ಸೂಕ್ತ ಕಟ್ಟಡ ನಿರ್ಮಾಣ ಮತ್ತು ಸಿಬ್ಬಂದಿ ನೇಮಕ ಮಾಡಬೇಕು. ಅಲ್ಲದೇ ರೈತರಿಗೆ ಅಗತ್ಯ ಮಾಹಿತಿ ಮತ್ತು ಕ್ಷೇತ್ರೋತ್ಸವ ಕೈಗೊಳ್ಳಲು ಪ್ರೋತ್ಸಾಹ ಕಾರ್ಯ ನಡೆಯಬೇಕು.ಇದರಿಂದ ದೂರದ ಗ್ರಾಮಗಳಿಂದ ಬರುವ ರೈತರಿಗೆ ಉತ್ತಮ ಸೇವೆ ನೀಡಿದಂತಾಗಿದೆ.

ಮಾಜಿ ಸಚಿವ ಬಿ.ಸಿ.ಪಾಟೀಲ್ ಭರವಸೆ ಹುಸಿ  :

ಬಿಜೆಪಿ ಸರಕಾರ ಆಡಳಿತದಲ್ಲಿ ಇದ್ದಾಗ ಮಾಜಿ ಕೃಷಿ ಸಚಿವ ಬಿ. ಸಿ. ಪಾಟೀಲ್ ಅವರು ಪಟ್ಟಣದ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಲು ಬಂದಂತಹ ಸಂದರ್ಭದಲ್ಲಿ ಹೊಸ ತಾಲೂಕು ಆಗಿರುವ ಕುರುಗೋಡು ರೈತ ಸಂಪರ್ಕ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಸುಮಾರು 1.50 ಕೋಟಿ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದ್ದರು ಇದರಿಂದ ಪಟ್ಟಣದಲ್ಲಿ ಹೊಸ ರೈತ ಸಂಪರ್ಕ ಕೇಂದ್ರ ಆಗಲಿದೆ ಎಂದು ಆಸೆ ಹೊತ್ತು ಕೂತಿದ್ದ ರೈತರಿಗೆ ನಿರಾಸೆ ಉಂಟಾಗಿದೆ.ಇನ್ನೂ ಸರಕಾರ ಬದಲಾವಣೆಯಾದರು ರೈತ ಸಂಪರ್ಕ ಕೇಂದ್ರದ ಕಟ್ಟಡ ಮಾತ್ರ ಬದಲಾವಣೆ ಆಗದೆ ಇರುವುದು ವಿಪರ್ಯಾಸ ವಾಗಿದೆ.

ಕೇಂದ್ರಕ್ಕೆ ತಡೆಗೋಡೆ ಇಲ್ಲ :

ಕೇಂದ್ರಕ್ಕೆ ಸೂಕ್ತವಾದ ತಡೆಗೋಡೆ ಇಲ್ಲದಾಗಿದ್ದು, ಸಂಜೆಯಾದರು ಸಾಕು ಪುಂಡ ಪೋಕಿರಿಗಳು, ಮಧ್ಯ ಪ್ರಿಯರು ಬಂದು ಮಧ್ಯ ಸೇವಿಸಿ ಎಲ್ಲಂದರಲ್ಲಿ ಬಾಟಲ್ ಗಳು ಬಿಸಾಡಿ ಗಬ್ಬು ಎಬ್ಬಿಸಿ ಹೋಗುತ್ತಿದ್ದಾರೆ.ಅಲ್ಲದೆ ಕೇಂದ್ರದ ಕಟ್ಟಡಗಳು ಹಾಗೂ ಅದರ ಕಿಡಕಿಗಳು ಸರಿಯಾಗಿ ಇರದ ಪರಿಣಾಮ ಯಾವಾಗ ಏನು ಆಗುತ್ತಾದೋ ತಿಳಿಯದಾಗಿದೆ. ಅಲ್ಲದೆ ಇದರಿಂದ ಅಕ್ಕ ಪಕ್ಕದಲ್ಲಿ ಇರುವ ಸಾರ್ವಜನಿಕರಿಗೆ ಹಾಗೂ ಕೇಂದ್ರಕ್ಕೆ ಬರುವ ರೈತರಿಗೆ ತುಂಬಾ ದುರ್ವಾಸನೆ ಬಿರುತ್ತಿದ್ದು, ಆರೋಗ್ಯದ ಮೇಲೆ ಪರಿಣಾಮ ಬಿರಲಿವೆ. ಆದ್ದರಿಂದ  ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕಾಗಿದೆ.

ಹೇಳಿಕೆ :

ಕುರುಗೋಡು ತಾಲೂಕಾಗಿ ಸುಮಾರು 3 ವರ್ಷ ಅತ್ತಿರ ಬಂದಿದೆ. ಆದರೂ ತಾಲೂಕು ಅಭಿವೃದ್ಧಿಯಾಗಿಲ್ಲ. ಅದರಲ್ಲಿ ರೈತ ಸಂಪರ್ಕ ಕೇಂದ್ರ ಮೇಲ್ದರ್ಜೆಗೊಳ್ಳದೆ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದೆ, ಗೋದಾಮು ಇಲ್ಲದೆ  ರೈತರಿಗೆ ಸರಿಯಾಗಿ ಇಲಾಖೆಯ ಸೌಲಭ್ಯಗಳು ಸಿಗುತ್ತಿಲ್ಲ, ಇರುವಂತ ಕೇಂದ್ರದಲ್ಲಿ ಒಬ್ಬ ಫೀಲ್ಡ್ ಆಫೀಸರ್ ಇದ್ದು, ಎಲ್ಲವುದನ್ನು ಅವರೇ ನೋಡಿಕೊಂಡು ಹೋಗುತ್ತಿದ್ದಾರೆ ಇನ್ನೂ ಮೇಲಾಧಿಕಾರಿಗಳು ಬಳ್ಳಾರಿ ಯಲ್ಲಿ ಇದ್ದಾರೆ ಇತರ ಇದ್ದಾಗ ಅಭಿವೃದ್ಧಿ ಹೇಗೆ ಆಗುತ್ತದೆ.

ವಿ. ಎಸ್. ಶಿವಶಂಕರ, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರು ಬಳ್ಳಾರಿ

ಹೇಳಿಕೆ :

ಹೊಸದಾಗಿ ತಾಲೂಕುಗಳಾಗಿರುವುದರಲ್ಲಿ ಇತರ ದ ಸಮಸ್ಯೆಗಳು ಇವೆ, ಕುರುಗೋಡಲ್ಲಿ ಮಾತ್ರವಲ್ಲ, ಇದ್ದದ್ರಲ್ಲಿ ರೈತರಿಗೆ ಅನುಕೂಲ ಮಾಡುತ್ತಿದ್ದೇವೆ. ಸರಕಾರ ಹೆಚ್ಚಿನ ಅನುದಾನ ನೀಡಿ, ಮೇಲ್ದರ್ಜೆಗೆರಿಸಿದ್ರೆ ಇರುವಂತ ಹುದ್ದೆಗಳನ್ನು ಭರ್ತಿಮಾಡಿಕೊಂಡು     ರೈತರಿಗೆ ಸಂಪೂರ್ಣ ಸೌಲಭ್ಯ ಸಿಗುವುದಕ್ಕೆ ಅನುಕೂಲವಾಗುತ್ತದೆ.

ದೇವರಾಜ್, ಸಹಾಯಕ ಕೃಷಿ         ಅಧಿಕಾರಿ ಕುರುಗೋಡು

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಕ್ತದಾನ ಮಾಡುವ ಗುಣ ಬೆಳೆಸಿಕೊಳ್ಳಿ : ಶಿವಲಿಂಗಾನಂದ ಸ್ವಾಮೀಜಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ನ. 23 : ರಕ್ತವನ್ನು ಕೃತಕವಾಗಿ ತಯಾರು ಮಾಡಲು ಬರುವುದಿಲ್ಲ, ಅಲ್ಲದೆ ಯಾವ ಪ್ರಾಣಿಗಳ ರಕ್ತವನ್ನು

ಸೆಡೆಗಳು ಎಂದಿದ್ದ ರಜತ್ ಗೆ ಬೆವರಿಳಿಸಿದ ಬಾದ್ ಶಾ..!

ಬಿಗ್ ಬಾಸ್ ಕನ್ನಡ ಸೀಸನ್ 11ಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಜತ್ ಹಾಗೂ ಶೋಭಾ ಶೆಟ್ಟಿ ಬಂದಿದ್ದಾರೆ. ರಜತ್ ಆರಂಭದಿಂದಾನು ಒಳ್ಳೆ ರೌಡಿಸಂ ತೋರಿಸುವ ರೀತಿಯೇ ಆಟವಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರಬೇಕು

ನಿತ್ಯ ವಿದ್ಯಾರ್ಥಿಯಾಗಿರುವವನೆ ಅತ್ಯುತ್ತಮ ಶಿಕ್ಷಕ : ಪ್ರೊ.ಹೆಚ್.ಎ.ಭಿಕ್ಷಾವರ್ತಿಮಠ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ನವೆಂಬರ್. 23 : ನಿತ್ಯ ವಿದ್ಯಾರ್ಥಿಯಾಗಿರುವವನೆ ಅತ್ಯುತ್ತಮ ಶಿಕ್ಷಕ. ಕೇವಲ ಪದವಿ ಪಡೆದರೆ ಸಾಲದು. ಶಿಕ್ಷಣದ

error: Content is protected !!