ಪ್ರಧಾನಿ ಮೋದಿ ಇತ್ತಿಚೆಗಷ್ಟೇ ಅಮೆರಿಕಾದ ಪ್ರವಾಸ ಕೈಗೊಂಡು ಅಲ್ಲಿ, ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿ ಬಂದಿದ್ದಾರೆ. ಈ ಬೆನ್ನಲ್ಲೇ ಈಜಿಪ್ಟ್ ಗೆ ಕೂಡ ಭೇಟಿ ನೀಡಿದ್ದಾರೆ. 1997ರ ನಂತರ ಭಾರತದ ಪ್ರಧಾನಿ ಈಜಿಪ್ಟ್ ಗೆ ಭೇಟಿ ನೀಡಿರುವುದು ಗಮನಾರ್ಹವಾಗಿದೆ.
ಇನ್ನು ಉಭಯ ನಾಯಕರು ನಡೆಸುವ ಮಾತುಕತೆಗೂ ಮುನ್ನವೇ ಪ್ರಧಾನಿ ಮೋದಿ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈಜಿಪ್ಟ್ ಅಧ್ಯಕ್ಷರು, ಪ್ರಧಾನಿ ಮೋದಿ ಅವರಿಗೆ ಆರ್ಡರ್ ಆಫ್ ನೈಲ್ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಈಜಿಪ್ಟ್ ದೇಶದ ಅತ್ಯುನ್ನತ ಪ್ರಶಸ್ತಿ. ನಮ್ಮ ದೇಶದಲ್ಲಿ ನೀಡುವ ಭಾರತ ರತ್ನಕ್ಕೆ ಹೋಲಿಸಬಹುದು. ‘ಆರ್ಡರ್ ಆಫ್ ದಿ ನೈಲ್’ ಪ್ರಶಸ್ತಿಯು ಶುದ್ಧ ಚಿನ್ನದ ಕಾಲರ್ ರೂಪದಲ್ಲಿದೆ. ಮೂರು ಚೌಕಗಳನ್ನು ಹೊಂದಿರುವ ಶುದ್ಧ ಚಿನ್ನದ ಕಾಲರ್ ಇದಾಗಿದೆ. ‘ಆರ್ಡರ್ ಆಫ್ ದಿ ನೈಲ್’ ಕಾಲರ್ ಮೇಲೆ ಫರೋನಿಕ್ ಚಿಹ್ನೆಗಳಿವೆ. ಮೊದಲ ಚೌಕವು ದುಷ್ಟರ ವಿರುದ್ಧ ರಾಜ್ಯವನ್ನು ರಕ್ಷಿಸುವ ಕಲ್ಪನೆಯನ್ನು ಹೋಲುತ್ತದೆ. ಎರಡನೆಯದು ನೈಲ್ ನದಿಯಿಂದ ತಂದ ಸಮೃದ್ಧಿ ಮತ್ತು ಸಂತೋಷವನ್ನು ಹೋಲುತ್ತದೆ. ಮೂರನೆಯದು ಸಂಪತ್ತು ಮತ್ತು ಸಹಿಷ್ಣುತೆಯನ್ನು ಸೂಚಿಸುತ್ತದೆ. ವಜ್ರ ವೈಡೂರ್ಯದಿಂದ ಅಲಂಕಾರಗೊಂಡಿರುತ್ತದೆ.
ಇನ್ನು ಪ್ರಧಾನಿ ಮೋದಿಯವರಿಗೆ ಹಲವು ಅತ್ಯುನ್ನತ ಪ್ರಶಸ್ತಿಗಳು ಸಿಕ್ಕಿವೆ. ವಿಶ್ವದ ಹಲವು ದೇಶಗಳಲ್ಲಿ ಅತ್ಯುನ್ನತ ಗೌರವ ಸ್ವೀಕರಿಸಿರುವ ನರೇಂದ್ರ ಮೋದಿ ಅವರ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ.