Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜೂನಿ ಸಸಿ ಗಿಡಗಳಿಂದ ಉತ್ತಮ ಇಳುವರಿ, ಕಡಿಮೆ ಖರ್ಚು, ಭೂಮಿ ಫಲವತ್ತತೆ

Facebook
Twitter
Telegram
WhatsApp

ಕುರುಗೋಡು. ಜೂ.25

ವರದಿ : ಮಮತಾ, ಕೆ

ಭತ್ತದ ಬೆಳೆ ಸೇರಿದಂತೆ ಇತರೆ ಬೆಳೆಗಳಲ್ಲಿ ಕಡಿಮೆ ಖರ್ಚಿನಿಂದ ಉತ್ತಮ ಇಳುವರಿ ಕಂಡುಕೊಂಡು ಪಲವತ್ತಾದ ಬೆಳೆ ಬೆಳಯಬಹುದು ಎಂದು ಅನೇಕ ರೈತರು ಪೌಷ್ಟಿಕಂಶ ಭರಿತವಾದ ಹಸಿರೆಲೆ ಜೂನಿ ಸಸಿ ಬೆಳೆಸುವ ಕಡೆಗೆ ರೈತರು ಮುಖ ಮಾಡಿದ್ದಾರೆ.

ಹೌದು ಸಮೀಪದ ತುಂಗಭದ್ರಾ ನದಿ ದಂಡೆ ವ್ಯಾಪ್ತಿ ಸೇರಿದಂತೆ ಪಟ್ಟಣದ ಅನೇಕ ಭಾಗಗಳಲ್ಲಿ ಭತ್ತ ಸೇರಿ ವಿವಿಧ ಬೆಳೆಗೆ ಪುಷ್ಟಿ ನೀಡುತಿದ್ದ, ಹಸಿರೆಲೆ ಜೂನಿ ( ಪೌಷ್ಟಿಕಾಂಶವುಳ್ಳ  ಸಸಿ ಗಿಡ ) ಗಳನ್ನು ರೈತರು ಅತಿ ಹೆಚ್ಚಾಗಿ ಬೆಳೆಸಿದ್ದಾರೆ.

ರೈತರು ಯಾವುದೇ ಫಲವತ್ತಾದ ಬೆಳೆ ಬೆಳೆಯಲು ಪ್ರಾರಂಭದಲ್ಲಿ ತಮ್ಮ ಹೊಲ ಗದ್ದೆ ಗಳಲ್ಲಿ ಹಸಿರೆಲೆ ಜೂನಿಯನ್ನು ಬೆಳೆಯುವುದು ಉತ್ತಮ, ಅದರಂತೆ ಪಟ್ಟಣ ಸೇರಿ ಮಣ್ಣೂರು, ಸೂಗೂರು, ಮುದ್ದಟನೂರು, ಸಿರಿಗೇರಿ, ರುದ್ರಪಾದ, ನಡವಿ, ಎಮ್ಮಿಗನೂರು, ಸೋಮಲಾಪುರ, ಮುಷ್ಟಗಟ್ಟೆ, ಉಡೆಗೋಳ, ಇಟಗಿ ಸೇರಿದಂತೆ ಅನೇಕ ಗ್ರಾಮೀಣ ಭಾಗದ ರೈತರು ಭತ್ತದ ಸಸಿ ನಾಟಿ ಮಾಡುವ ಒಂದು ತಿಂಗಳ ಮುನ್ನ ಪೌಷ್ಟಿಕಾಂಶ ಭರಿತವಾದ ಬೀಜಗಳನ್ನು ಖರೀದಿಸಿ ಸಾವಿರಾರು ಎಕರೆ ಪ್ರದೇಶದ ಕೆಸರು ಗದ್ದೆಗಳಲ್ಲಿ ಹಾಕುತ್ತಾರೆ. ಒಂದು ತಿಂಗಳ ನಂತರ ಹಸಿರಿನಿಂದ ಬೆಳದ ನಂತರ ಟ್ರಾಕ್ಟರ್ ನಿಂದ ಹದಗೊಳಿಸಿ ಹದಿ ನೈದು ದಿನ ನೆನೆ ಬಿಟ್ಟು ಆ ನಂತರ ಭತ್ತದ ಸಸಿ ನಾಟಿ ಮಾಡಲು ಪ್ರಾರಂಭಿಸುತ್ತಾರೆ.

ಪ್ರಯೋಜನೆ :

ಹಸಿರೇಲೆ ಜೂನಿ ಬೆಳೆಯುವುದರಿಂದ ಭೂಮಿ ಫಲವತ್ತತೆಯ ಪ್ರಮಾಣ ಅಧಿಕಗೊಂಡು ಇಳುವರಿ ಹೆಚ್ಚುತ್ತದೆ. ಕಳೆ ಬೆಳವಣಿಗೆ ಕುಂಟಿತಗೊಳ್ಳುವುದು, ಪ್ರಮುಖವಾಗಿ ಪ್ರತಿ ಎಕರೆಗೆ ತಗಲುವ ಕ್ರಿಮಿನಾಶಕ ಔಷದಿ ಹಾಗೂ ರಸಗೊಬ್ಬರದ ಖರ್ಚಿನ ಪ್ರಮಾಣ ಕೂಡ ಅರ್ಧದಷ್ಟು ಕಡಿಮೆಯಾಗುತ್ತಿರುವುದು ಈ ಜೂನಿ ಸಸಿಗಿಡದ ಪ್ರಯೋಜನೆಯನ್ನು ರೈತಾಪಿ ವರ್ಗ ಕಂಡುಕೊಂಡಿದೆ.

ಪ್ರತಿ ವರ್ಷ ಉಪಯೋಗ :

ಪ್ರತಿ ವರ್ಷ ಇದೆ ತರಹ ಅನೇಕ ಭಾಗದ ರೈತರು ಜೂನಿಯನ್ನು ನೆಚ್ಚಿಕೊಂಡು ದೊಡ್ಡ ಪ್ರಮಾಣದಲ್ಲಿ ಭತ್ತ ಬೆಳೆಯುವುದರ ಜೊತೆಗೆ ಭೂಮಿಯ ಫಲವತ್ತತೆ ಯನ್ನು ಕಾಪಾಡಿಕೊಳ್ಳುತ್ತಾರೆ.
ಜೂನಿ ಸಸಿಗಿಡಗಳು ನದಿಯಲ್ಲಿ ನೀರು ಇಲ್ಲದಿದ್ರೂ ಹಾಗೂ ಮಳೆ ಆಗದಿದ್ರೂ ಅಲ್ಪ ಪ್ರಮಾಣದ ನೀರಿಗೆ ಬೆಳೆದು ಉತ್ತಮ ಬೆಳೆಯನ್ನು ಬೆಳೆಯಲು ಪಣ ತೋಡುತ್ತಾರೆ.

ತಡವಾಗಿ ಹಾಕಿದ ಜೂನಿ :

ಪ್ರತಿ ವರ್ಷ ಜೂನ್ ತಿಂಗಳ ಕೊನೆಯ ವಾರದಲ್ಲಿ ರೈತರು ಭತ್ತ ನಾಟಿ ಮಾಡಲು ಎಲ್ಲಿಲ್ಲದ ಕಸರತ್ತು ನಡೆಸುತಿದ್ದರು ಆದರೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಹಾಗೂ ತುಂಗಭದ್ರಾ ನದಿಯಲ್ಲಿ ನೀರಿಲ್ಲದ ಕಾರಣ ರೈತರು ತಮ್ಮ ಹೊಲ ಗದ್ದೆಗಳಲ್ಲಿ ಭತ್ತದ ಸಸಿ ಹಾಕಿ ನಾಟಿಗೆ ಮುಂದಾಗದೆ ಹಾಗೆ ಕೂತಿದ್ದಾರೆ. ಇದರಿಂದ ಜೂನಿ ಸಸಿಗಳು ಕೂಡ ಸರಿಯಾದ ಸಮಯಕ್ಕೆ ಬೆಳೆಯತಿದ್ದವು, ಆದರೆ ಈ ವರ್ಷ ನಾಟಿ ಮಾಡುವುದಕ್ಕೆ ತಡವಾದ ಕಾರಣ ಜೂನಿ ಸಸಿಗಳು ಕೂಡ ತಡವಾಗಿ ಹಾಕಿದ್ದಾರೆ.

ಹೆಂಡೆ ಗೊಬ್ಬರಕ್ಕೂ ಡಿಮ್ಯಾಂಡ್ :

ಇನ್ನೂ ಅನೇಕ ಭಾಗದಲ್ಲಿ ಕೆಲ ರೈತರು ಜೂನಿ ಸಸಿ ಗಳನ್ನು ಬೆಳೆದು ಭೂಮಿಯ ಫಲವತ್ತತೆ ಯನ್ನು ಕಾಪಾಡಿದರೆ ಇನ್ನೂ ಕೆಲ ರೈತರು ಹೆಂಡೆ ಗೊಬ್ಬರವನ್ನು ತಮ್ಮ ಹೊಲ ಗದ್ದೆಗಳಿಗೆ ಹಾಕಲು ಮುಂದಾಗಿದ್ದಾರೆ. ಇದರಿಂದ ಸವಳು ತೆಲಿರುವ ಭೂಮಿಗಳನ್ನು ಫಲವತ್ತತೆ ಕಡೆಗೆ ಮರು ಕರಳಿಸುತ್ತದೆ ಇದಲ್ಲದೆ ಕಳೆ ನಾಶಕ, ರೋಗ ಹರಡುವಿಕೆ, ಭತ್ತದ  ಚಿಗುರು ಹೊಡಿಯುವುದಕ್ಕೆ, ಬೆಂಕಿ ರೋಗ ಇತರೆ ಅನೇಕ ಉಪಯೋಗಕ್ಕೆ ಸಹಕರಿಯಾಗುತ್ತದೆ ಆದ್ದರಿಂದ ಹೆಂಡೆ ಗೊಬ್ಬರಕ್ಕೂ ಕೂಡ ರೈತರು ಒತ್ತು ನೀಡುತ್ತಿದ್ದಾರೆ.

ಹೇಳಿಕೆ :

ನೀರಾವರಿ ಪ್ರದೇಶಗಳಲ್ಲಿ ಪ್ರತಿವರ್ಷ ಭತ್ತ ಬೆಳೆಯುವುದರಿಂದ ಭೂಮಿ ನಿತ್ಯ ನೀರು ಹರಿದು ಡ್ರೈ ಆಗದೆ ಫಲವತ್ತತೆ ಕಡಿಮೆ ಗೊಳ್ಳುತ್ತದೆ ಅಲ್ಲದೆ, ಇಳುವರಿ ಕೂಡ ಸರಿಯಾಗಿ ಬರುವುದಲ್ಲ ಆದ್ದರಿಂದ ಇಂತಹ ಹಸಿರೇಲೆ ಗೊಬ್ಬರ ಅಥವಾ ಹೆಂಡೆ ಗೊಬ್ಬರ ಹಾಕುವುದರಿಂದ ರೈತರ ಭೂಮಿ ಗಳಿಗೆ ತುಂಬಾ ಅನುಕೂಲ.

ಪ್ರಕಾಶ್ ಮಣ್ಣೂರು,
ಪ್ರಗತಿ ಪರ ರೈತ

ಹೇಳಿಕೆ :

ರೈತ ಉತ್ತಮ ಬೆಳೆ ಕಂಡುಕೊಳ್ಳಲು ಜೂನಿ ಹಸಿರೇಲೆ ಗೊಬ್ಬರ ತುಂಬಾ ಸಹಕಾರಿ. ಅತಿ ಕಡಿಮೆ ಖರ್ಚಿನಲ್ಲಿ ವಿವಿಧ ಬೆಳೆಗಳು ಬೆಳೆಯಬಹುದು. ಭೂಮಿ ಫಲವತ್ತತೆ ಜೊತೆಗೆ ಇತರೆ ಕೃಷಿ ಚಟುವಟಿಕೆಗಳಿಗೆ ಅನುಕೂಲ

ಸುರೇಶ್ ಸಜ್ಜನ್, ಪ್ರಗತಿ ಪರ ರೈತ ಮಣ್ಣೂರು

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮಹಾರಾಷ್ಟ್ರದಲ್ಲಿ ಯಾರಾಗಲಿದ್ದಾರೆ ನೂತನ ಸಿಎಂ ?

ಸುದ್ದಿಒನ್ | ಮಹಾರಾಷ್ಟ್ರದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹಾಗಾದರೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಬಿಜೆಪಿ ಮುಖಂಡ ಪ್ರವೀಣ್ ದಾರೇಕರ್ ಪ್ರತಿಕ್ರಿಯಿಸಿದ್ದಾರೆ. ದೇವೇಂದ್ರ ಫಡ್ನವೀಸ್

ಸಿಎಂ ಸಿದ್ದರಾಮಯ್ಯ ಅವರ ಪ್ರಚಾರದಿಂದ ಗೆಲುವು : ಬಿಜೆಪಿ ಸೋಲಿನ ಬಗ್ಗೆ ಜನಾರ್ದನ ರೆಡ್ಡಿ ಫಸ್ಟ್ ರಿಯಾಕ್ಷನ್

ಬಳ್ಳಾರಿ: ಇಂದು ಸಂಡೂರು ವಿಧಾನಸಭಾ ಕ್ಷೇತ್ರದಲ್ಲೂ ಫಲಿತಾಂಶ ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ಅನ್ನಪುರ್ಣ ತುಕರಾಂ ಗೆಲುವು ಸಾಧಿಸಿದ್ದಾರೆ. ಸಂಜೆ ವೇಳೆಗೆ ಅಧಿಕೃತ ಅನೌನ್ಸ್ ಆಗಲಿದೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಾಗಿ ಜನಾರ್ದನ ರೆಡ್ಡಿ ಅವರು ಸಾಕಷ್ಟು

ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿ ಮತ್ತೊಮ್ಮೆ ಅಧಿಕಾರಕ್ಕೆ…!

ಸುದ್ದಿಒನ್ | ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿ ದೊಡ್ಡ ಅಬ್ಬರವನ್ನೇ ಸೃಷ್ಟಿಸಿದೆ. ದ್ವಿಶತಕದ ಸೀಟುಗಳನ್ನು ದಾಟಿ ದಾಖಲೆ ಸೃಷ್ಟಿಸಿದ್ದಾರೆ. ಮಹಾಯುತಿ ಈಗಾಗಲೇ 220 ಸ್ಥಾನಗಳಲ್ಲಿ ಮುನ್ನಡೆಯಲ್ಲಿ ಮುಂದುವರಿದಿದೆ. ಏತನ್ಮಧ್ಯೆ, ಮಹಾವಿಕಾಸ್ ಅಘಾಡಿ 53 ಸ್ಥಾನಗಳಲ್ಲಿ ಮುನ್ನಡೆ

error: Content is protected !!