ಬಳ್ಳಾರಿ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳೀನ್ ಕುಮಾರ್ ಕಟೀಲು ರಾಜೀನಾಮೆ ನೀಡಿದ್ದಾರೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿರುವ ಕಟೀಲು, ನನ್ನ ಅವಧಿ ಮುಗಿದಿದೆ, ಸಹಜವಾಗಿ ಬದಲಾವಣೆ ನಡೆಯುತ್ತದೆ. ಎರಡು ಅವಧಿಯನ್ನು ನಾನು ಪೂರ್ಣಗೊಳಿಸಿದೆ. ಚುನಾವಣೆ ಸೋಲಿನ ಬಳಿಕ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದ್ದೇನೆ. ಲಿಖಿತ ಮತ್ತು ಮೌಖಿಕವಾಗಿ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ. ಆದರೆ, ಕಟೀಲ್ ಅವರ ರಾಜೀನಾಮೆಯನ್ನು ಹೈಕಮಾಂಡ್ ಇನ್ನೂ ಸ್ವೀಕಾರ ಮಾಡಿಲ್ಲ ಎಂದಿದ್ದಾರೆ.
ಇನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿ ಸೊಮಣ್ಣ ಆಕಾಂಕ್ಷಿಯಾಗಿದ್ದಾರೆ. ನೇರವಾಗಿಯೇ ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಯವಂತೆ ಕೇಳಿದ್ದಾರೆ. ನಿಭಾಯಿಸುವ ಶಕ್ತಿಇದೆ ಕೊಡಿ ಎಂದಿದ್ದಾರೆ. ಇದರ ಜೊತೆಗೆ ಅಶ್ವತ್ಥ್ ನಾರಾಯಣ್ ಹಾಗೂ ಆರ್ ಅಶೋಕ್ ಕೂಡ ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿದ್ದಾರೆ.
ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇದೆ. ಹೀಗಾಗಿ ಈಗಿನಿಂದಾನೇ ರಾಜಕೀಯ ಪಕ್ಷಗಳು ಪ್ಲ್ಯಾನ್ ಮಾಡುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷನ ಆಯ್ಕೆಯನ್ನು ಸೂಕ್ಷ್ಮವಾಗಿ ಮಾಡಲಿದೆ.