ಮೈಸೂರು: ಇಂದು ಆಷಾಢ ಮಾಸದ ಮೊದಲ ಶುಕ್ರವಾರ. ಆಷಾಢದ ಪ್ರತಿ ಶುಕ್ರವಾರವೂ ತಾಯಿ ಚಾಮುಂಡೇಶ್ವರಿಗೆ ಬರುವ ಭಕ್ತರು ಹೆಚ್ಚಾಗಿರುತ್ತಾರೆ. ಇಂದು ಮೊದಲ ಶುಕ್ರವಾರವಾಗಿರುವ ಕಾರಣ, ಚಾಮುಂಡಿ ಬೆಟ್ಟ ಭಕ್ತರಿಂದ ತುಂಬಿ ತುಳುಕುತ್ತಿದೆ. ಆದರೆ ಇಷ್ಟು ಜನಸಾಗರದಲ್ಲಿ ಹಿರಿಯ ನಾಗರಿಕರಿಗೆ ದರ್ಶನ ಭಾಗ್ಯ ಸಿಗುವುದು ಬಹಳ ಕಷ್ಟಕರವಾಗಿದೆ. ಆದರೆ ಚಾಮುಂಡಿ ಬೆಟ್ಟದಲ್ಲಿ ಇಂದು ಹಿರಿಯ ನಾಗರಿಕರಿಗೆ ನೇರ ದರ್ಶನಕ್ಕೆ ಅವಕಾಶ ನೀಡಲಾಗಿದೆ.
60 ವರ್ಷ ಮೇಲ್ಪಟ್ಟವರಿಗೆ ಇಂದು ನೇರವಾಗಿ ತಾಯಿಯ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಈ ಬಾರಿ ಪಾಸ್ ವ್ಯವಸ್ಥೆಯನ್ನು ತೆಗೆದು ಹಾಕಲಾಗಿದ್ದು, 50 ಮತ್ತು 300 ರೂಪಾಯಿ ಟಿಕೆಟ್ ಪಡೆದು ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಇಂದು ಬೆಳಗ್ಗೆ 5.30ರಿಂದಾನೇ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಇಂದು ಆಷಾಢ ಮಾಸದ ಮೊದಲ ಶುಕ್ರವಾರವಾಗಿರುವ ಕಾರಣ, ತಾಯಿಯ ದೇಗುಲ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದೆ. ಗರ್ಭಗುಡಿಯಲ್ಲೂ ಹೂಗಳಿಂದಾನೇ ಅಲಂಕಾರ ಮಾಡಲಾಗಿದೆ. ದೇಗುಲದ ಆವರಣವೆಲ್ಲಾ ಹೂವಿನ ಅಲಂಕಾರ ಮಾಡಿದ್ದಾರೆ. ತಾಯಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಗಿದೆ.