ನವದೆಹಲಿ: ಇಂದು ರಾಜ್ಯ ಸರ್ಕಾರದ ಮಹತ್ವದ ಯೋಜನೆಗೆ ಒಂದು ಕ್ಲಾರಿಟಿ ಸಿಗಲಿದೆ. ಆಹಾರ ಸಚಿವ ಮುನಿಯಪ್ಪ ದೆಹಲಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ಇಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರನ್ನು ಭೇಟಿ ಮಾಡಿ, ಒಂದು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಇತ್ತಿಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅವರು ಕೂಡ ದೆಹಲಿಗೆ ಪ್ರವಾಸ ಕೈಗೊಂಡಿದ್ದರು. ಕೇಂದ್ರ ಸಚಿವರನ್ನು ಭೇಟಿ ಮಾಡಲು ಯತ್ನಿಸಿದರು. ಆದರೆ ಅದು ಸಾಧ್ಯವಾಗಿರಲಿಲ್ಲ.
ಕಾಂಗ್ರೆಸ್ ಕೊಟ್ಟಿರುವ ಗ್ಯಾರಂಟಿ ಪ್ರಕಾರ, ಸರ್ಕಾರಕ್ಕೆ 2 ಲಕ್ಷ ಟನ್ ಅಕ್ಕಿಯ ಅಗತ್ಯವಿದೆ. ಈಗಾಗಲೇ ಬೇರೆ ರಾಜ್ಯಗಳು ಅಕ್ಕಿಯನ್ನು ನೀಡಲು ಸಿದ್ಧವಾಗಿವೆ. ಆದರೆ ರಾಜಗಯ ಸರ್ಕಾರಕ್ಕೆ ಅದು ಹೊರೆಯಾಗಲಿದೆ. ಛತ್ತಿಸ್ ಗಢದಿಂದ ತರಬೇಕು ಅಂದ್ರೆ 7 ರೂಪಾಯಿ ಜಾಸ್ತಿ ಆಗುತ್ತೆ. ಆಂಧ್ರಪ್ರದೇಶದಿಂದ ಅಕ್ಕಿಯನ್ನು ತರಿಸಿದರೆ 3 ರುಪಾಯಿ ಜಾಸ್ತಿ ಆಗುತ್ತೆ.
ಹೀಗಾಗಿ ಕೇಂದ್ರ ಸರ್ಕಾರದಿಂದ ಆದಷ್ಟು ಅಕ್ಕಿ ಪಡೆಯುವುದಕ್ಕೆ ಪ್ರಯತ್ನ ಪಡುತ್ತಿದೆ. ಮನವಿ ಮೇಲೆ ಮನವಿ ಮಾಡುತ್ತಿದೆ. ಇಂದು ಕೇಂದ್ರ ಸಚಿವರ ಭೇಟಿ ಬಳಿಕ, ಅಕ್ಕಿಯ ವಿಚಾರ ಏನಾಗಲಿದೆ ಎಂಬುದು ತಿಳಿಯಲಿದೆ.