Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪೂರ್ತಿ ಬತ್ತಿ ಹೋದ ತುಂಗಾ ಭದ್ರಾ ನದಿ : ರೈತರ ಸ್ಥಿತಿ ಅತಂತ್ರ, ಮೀನುಗಾರರ ಕುಟುಂಬಗಳು ಕಂಗಾಲು

Facebook
Twitter
Telegram
WhatsApp

ವರದಿ : ಮಮತಾ, ಕೆ, ಕುರುಗೋಡು

ಕುರುಗೋಡು(ಬಳ್ಳಾರಿ) (ಜೂ.22) : ರೈತರ ಜೀವನಾಡಿಯಾದ ತುಂಗಾ ಭದ್ರಾ ನದಿ ಸಂಪೂರ್ಣ ಬತ್ತಿ ಹೋಗಿದ್ದು. ನದಿ ದಂಡೆಯ ರೈತರು ಮುಂಗಾರು ಬೆಳೆ ಬೆಳೆಯಲು ಈಗಾಗಲೇ ಸಸಿ ಮಡಿಗಳು ಹಾಕಿ ದಿನಗಳೇ ಗತಿಸಿವೆ. ಬೆರಳಿಣಿಕೆಯಷ್ಟು ರೈತರು ನದಿಯಲ್ಲಿ ನೀರು ಇಲ್ಲ ದಿದ್ರೂ ಮಳೆ ಬರಬಹುದು ಎಂಬ ಆಶಭಾವನೆ ಹಿಟ್ಟುಕೊಂಡು ಭತ್ತ ನಾಟಿಯಲ್ಲಿ ತೊಡಗಿದ್ದಾರೆ.ಇನ್ನೂ ಕೆಲ ರೈತರು ಹಾಕಿದ ಸಸಿ ಮಡಿಗಳು ನೀರಿಲ್ಲದೆ ಬಾಯಿ ತೆರೆದುಕೊಂಡು ನಿಂತಿವೆ.

ಇನ್ನೊಂದು ಕಡೆ ಜನ-ಜಾನುವಾರುಗಳಿಗೆ ನೀರಿಲ್ಲದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ನದಿ ಯಲ್ಲಿ ನೀರಿಲ್ಲದೆ ಬೇಸಿಗೆಯ ದಾಹದಿಂದ ಅಂತರ್ಜಲ ಕುಸಿತದಿಂದ ಗ್ರಾಮದಲ್ಲಿ ಇರುವ ನಳಗಳಿಗೆ ನೀರು ಬರದೆ ಪರಿಣಾಮ ಕುಡಿಯುವ ನೀರಿಗಾಗಿ ಜನ ಪರಿತಪ್ಪಿಸುತ್ತಿದ್ದಾರೆ.

ಸಾರ್ವಜನಿಕರು ನೀರಿಗಾಗಿ ಖಾಸಗಿ ಘಟಕಗಳಿಗೆ ಮೊರೆ ಹೋಗುವಂತಾಗಿದೆ. ಸತತ 5 ವರ್ಷಗಳಿಂದ ರೈತರಿಗೆ ಸರಿಯಾಗಿ ಉತ್ತಮ ಬೆಲೆ ಸಿಗದೆ ತಿವ್ರ ನಷ್ಟದ ಬೀತಿಯಲ್ಲಿ ಸಿಲುಕಿದ್ದು. ಪ್ರಸಕ್ತ ಸಾಲಿನಲ್ಲಿ ಉತ್ತಮ ಬೆಲೆ ಕಂಡುಕೊಂಡು ಮುಂಗಾರು ಹಂಗಾಮಿಗೆ ಕೂಡ ಇತರ ಬೆಲೆ ಸಿಗಬಹುದು ಎಂಬ ನಂಬಿಕೆಯಿಂದ ಈ ಬಾರಿ ಕೂಡ ರೈತರು ಸಾವಿರಾರು ಗಟ್ಟಲೇ ವ್ಯಯಿಸಿ ಸಸಿ ಮಡಿ ಹಾಕಿದ್ದು ಮತ್ತೆ ನಷ್ಟ ಹೊಂದಿ ಮೈ ಮೇಲೆ ಬರೆ ಎಳೆದುಕೊಂಡತಾಗಿದೆ. ತುಂಗಾ ಭದ್ರಾ ನದಿಗೆ ಸುಮಾರು ಕಳೆದ 2008-09 ಮತ್ತು 2016-17  ಹಾಗೂ 2019-20 ನೇ ಸಾಲಿನಲ್ಲಿ ಜೊತೆಗೆ ಪ್ರಸಕ್ತ 2023 ಸಾಲಿನಲ್ಲೂ ಕೂಡ ನದಿಗೆ ನೀರು ಇಲ್ಲದೆ ಪೂರ್ತಿ ಬತ್ತಿ ಹೊಗಿದ್ದು, ಬರೊಬ್ಬರಿ ನಾಲ್ಕು ಬಾರಿ  ನದಿಗೆ ನೀರು ಇಲ್ಲದೆ ಸಂಪೂರ್ಣ ಬತ್ತಿ ಹೊಗಿದೆ ಇದರಿಂದ ರೈತರ ಆಸೆಗೆ ತಣ್ಣೀರು ಎರೆಚಿದಂತಾಗಿದೆ.

ಒಂದು ಕಡೆ ರೈತರ  ಕೃಷಿ ಚಟುವಟಿಕೆಗಳಿಗೆ ತೊಂದರೆ ಅದರೆ ಇನ್ನೊಂದು ಕಡೆಯಿಂದ ಗಂಗಾ ನದಿಯಿಂದ ರೈತರಿಗೆ ಶಾಪ ಹೊಡ್ಡಿದಂತಾಗಿದೆ.

ಹಿರಿಯರ ಕಾಲದಿಂದಲೂ ತುಂಗಾ ಭದ್ರಾ ನದಿಯಲ್ಲಿ  ನೀರಿಲ್ಲದೆ ಬತ್ತಿ ಹೋದ ಇತಿಹಾಸವಿಲ್ಲ. ಹಾಗೂ ನಂದಿ ದಂಡೆಯ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಗ್ರಾಮಗಳಾದ ಉಳೆನೂರು. ಕುಂಟೋಜಿ.ಜಮಾಪುರ. ಈಳಿಗೆನೂರು. ಸಿದ್ದಾಪುರ. ಕೊಕ್ಕರಗಳ. ನಂದಿಹಳ್ಳಿ. ಸೇರಿದಂತೆ ಇತರೆ ನದಿ ದಂಡೆಯ ಗ್ರಾಮದ ಜನರು ನದಿಯಲ್ಲಿ ಕಾಲ್ನಡಿಗೆ ಮತ್ತು ಬೈಕ್ ಹಾಗೂ ಟ್ರಾಕ್ಟರ್ ನಿಂದ ಸಂಚಾರಿಸಿಕೊಂಡು ಬಂದಿರುವ ಗಳಿಗೆ ಇಲ್ಲ, ಕೆವಲ ದೋಣಿಯ ಮೂಲಕ  ಸಾರ್ವಜನಿಕರು ಮತ್ತು ಬೈಕ್ ದಡ ಸೇರಬೇಕಿತ್ತು. ಅದರೆ ಸುಮಾರು ನಾಲ್ಕು ವರ್ಷಗಳಿಂದ ನದಿಯಲ್ಲಿ ನೀರು ಇಲ್ಲದೆ ಬತ್ತಿ ಹೋಗಿದ್ದು. ಇದರಿಂದ ರೈತರ ಕೈಗೆ ಕೆಲಸವಿಲ್ಲದೆ ವ್ಯಾವಹರದ ವಹಿವಾಟು ನಿಂತು ಹೋಗಿದ್ದು.  ಕುಟುಂಬದ ನಿರ್ವಹಣೆಗಾಗಿ ರೈತರು ಚಿಂತೆಯಲ್ಲಿ ತೊಡಗಿದ್ದಾರೆ.

ನೀರಿಲ್ಲದೆ ಸತ್ತು ಹೋದ ಜಲಚರಗಳು :

ನದಿಯಲ್ಲಿ ನೀರು ಇಲ್ಲದ ಪರಿಣಾಮ ಜಲಚರಗಳು ಸತ್ತು ನದಿ ದಂಡೆಯಲ್ಲಿ ಬಿದ್ದಿವೆ. ಅವುಗಳ ದೇಹವನ್ನು ಪ್ರಾಣಿ ಪಕ್ಷಿಗಳು ಹರಿದು ತಿನ್ನುತ್ತಿವೆ. ಇದರ ದುರ್ವಾಶನೆಯಿಂದ ನದಿ ದಡಕ್ಕೆ ಜಾನುವಾರುಗಳು ಕಾಯಲು ಹೋಗುವ ವ್ಯಕ್ತಿಗಳು ಮತ್ತು ನದಿಯಿಂದ ಬೇರೆ ಕಡೆ ಹೋಗುವ ಸಾರ್ವಜನಿಕರಿಗೆ ತಿವ್ರ ತೊಂದರೆ ಅಗುವಂತಾಗಿದೆ.

ನದಿ ದಂಡೆಯ ರೈತರು ಗುಳೆ ಹೋಗುವ ಪರಿಸ್ಥಿತಿ :

ನದಿಯಲ್ಲಿ ನೀರು ಇಲ್ಲದ ಕಾರಣ ಬೆಳೆ ಬೆಳೆಯಲು ಮುಂದಾಗದ ಹಲವು ರೈತ ಕುಟುಂಬಗಳು ಕೆಲಸ ಕಾರ್ಯಗಳು ಇಲ್ಲದೆ ಸುಮ್ನೆ ಕೂತಿದ್ದು. ಕುಟುಂಬದ ನಿರ್ವಹಣೆಗಾಗಿ ಮತ್ತು ಮಕ್ಕಳಿಗೆ  ವಿದ್ಯಾಭ್ಯಾಸ ಕೊಡಿಸಲು ಹಾಗೂ ವಾರದ ಚಿಟಿ ಕಟ್ಟಲು ಹಾಗದೆ ದಿಕ್ಕು ದೋಚದಂತಾಗಿದೆ.

ಪರಿಣಾಮ ಮಕ್ಕಳನ್ನು ಶಾಲೆ ಯ ವಿದ್ಯಾಭ್ಯಾಸಕ್ಕಾಗಿ ಗ್ರಾಮದಲ್ಲಿ ಬಿಟ್ಟು ಪತಿ – ಪತ್ನಿಯರು ಸೇರಿ ಹೊರ ರಾಜ್ಯಗಳಿಗೆ ಗುಳೆ ಹೋಗಿ ಜೀವನ ಸಾಗಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಕಂಗಲಾದ ಮಿನುಗಾರರು :

ಮೀನುಗಾರಿಕೆಯನ್ನು ನಂಬಿ ಹಲವಾರು ಕುಟುಂಬಗಳು ಬದುಕುತ್ತಿದ್ದು. ನದಿಯಲ್ಲಿ ನೀರು ಇಲ್ಲದೆ ಕಾರಣ ಮೀನುಗಾರರ ಬದುಕು ತಿವ್ರ ಅತಂತ್ರದ ಸ್ಥಿತಿಗೆ ತಲುಪಿದೆ. ಕಂಪ್ಲಿ ಕೋಟೆಯಿಂದ ಹಿಡಿದು ಸಿರುಗುಪ್ಪದವರೆಗೆ ಸುಮಾರು ಸಾವಿರಾರು ಮೀನುಗಾರರು ಸಂಬಂದಿಸಿದ ಇಲಾಖೆಯಲ್ಲಿ ಪ್ರಮಾಣ ಪತ್ರ ಪಡೆದು ನದಿಯಲ್ಲಿ  ಮೀನುಗಾರಿಕೆಯನ್ನು ಅಗಲು – ರಾತ್ರಿ, ಗಾಳಿ, ಮಳೆ ಕ್ರಿಮಿಕಿಟಗಳು ಎನ್ನದೆ ಮೈ ಮೇಲೆ ಅರಿವು ಇಲ್ಲದೆ  ಕುಟುಂಬದ ನಿರ್ವಹಣೆ ಮಾಡಲು ಮೀನು ಹಾಡುತ್ತಿದ್ದು. ಸದ್ಯ ನದಿಯಲ್ಲಿ ನೀರು ಇಲ್ಲದೆ  ಮೀನುಗಾರರ ಬಲೆ ಮತ್ತು ದೋಣಿಗಳು ನದಿಯ ದಡವನ್ನು ಕಾಯುತ್ತಿವೆ.

ಮೂಲೆ ಸೇರಿದ ಟೆಂಡರ್ ಪಡೆದ ಬೋಟ್ :

ಮಣ್ಣೂರು ನದಿ ದಂಡೆಯಿಂದ ಬೇರೆ ಕಡೆ ತೆರಳಲು ಜನರನ್ನು ಬೊಟ್ ಮೂಲಕ ದಡ ಸೇರಿಸಲು ಗ್ರಾಮದಲ್ಲಿ ವರ್ಷಕ್ಕೊಮ್ಮೆ ಟೆಂಡರ್ ಕರೆಯಲಾಗುತ್ತಿದ್ದು, ಸದ್ಯ 4 ಲಕ್ಷಕ್ಕೂ ಹೆಚ್ಚು ನಿಂದ ಟೆಂಡರ್ ಪಡೆದು 6 ತಿಂಗಳಾಗಿದ್ದು, ನದಿಯಲ್ಲಿ ನೀರು ಇರದ ಕಾರಣ ಬೊಟ್ ನಡಿಯದೆ ನದಿಯ ದಡದಲ್ಲಿ ಮೂಲೆ ಸೇರಿದೆ ಇದರಿಂದ ಟೆಂಡರ್ ಪಡೆದ ಮಾಲೀಕರು ತುಂಬಾ ನಷ್ಟ ಹೊಂದಿದ್ದು, ನದಿಯಲ್ಲಿ ನೀರು ಇರದೆ ಸುಮಾರು ತಿಂಗಳು ಕಳೆದಿದೆ ಇದರಿಂದ ಲಕ್ಷನುಗಟ್ಟಲೇ ನಷ್ಟು ಸಂಭವಿಸಿದ ಪರಿಣಾಮ ಆತಂಕದಲ್ಲಿ ಮುಳಿಗಿದ್ದಾರೆ.

ಹೇಳಿಕೆ 1 :

ಸರ್ ನಮ್ ಬದ್ಕು ಏಳತಿರದು 1 ತಿಂಗಳು ಕಳೆದರೂ ಸರಿಯಾಗಿ ನದಿಯಲ್ಲಿ ನೀರು ಇಲ್ಲದೆ ಪರಿಣಾಮ ನಮಗೆ ಕೆಲಸ ವಿಲ್ಲದಂತಾಗಿದೆ. ಕುಟುಂಬ ಸಾಗಿಸೋದು ಕಷ್ಟಕರವಾಗಿದೆ. ನಾವು ಮೀನುಗಾರಿಕೆ ಹುದ್ದೆಯನ್ನೆ ನಂಬಿದವರು ಈಗ ಏನು ಮಾಡಬೇಕು ದೊಚುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆ ನಮ್ ಕೈ ಹಿಡಿಯಬೇಕು ಸ್ವಾಮಿ.

ಹುಲೇಪ್ಪ, ಮೀನುಗಾರರು ಮಣ್ಣೂರು.

ಹೇಳಿಕೆ 2 :

ಕಳೆದ ವರ್ಷ ಈ ಸಮಯದಲ್ಲಿ ಭತ್ತ ನಾಟಿ ಕಾರ್ಯ ಜೋರಾಗಿ ನಡೆಯುತ್ತಿತ್ತು, ಈಗಾಗಲೇ ಸಸಿಗಳ ದಿನ ಕಳೆದು ಹೋಗಿವೆ ನಾಟಿ ಮಾಡೋಕೆ ನದಿಯಲ್ಲಿ ನೀರು ಇಲ್ಲದೆ ಭತ್ತ ನಾಟಿ ಕಾರ್ಯಕ್ಕೆ ರೈತರು ಮುಂದಾಗಿಲ್ಲ. ಇನ್ನೂ ಕೆಲವು ರೈತರು ಅಲ್ಪ ಸ್ವಲ್ಪ ನೀರಿನ ಆಸರೆಯಿಂದ ಸಸಿ ಮಡಿ ಹಾಕಿದ್ದು ಅವು ಕೈ ಸೇರುವುದು ಅನುಮಾನ ವಾಗಿದೆ  ಅದ್ದರಿಂದ ನೀರಿಲ್ಲದೆ ಬೆಳೆ ಬೆಳೆಯದೆ ಹಲವಾರು ಕುಟುಂಬಗಳು ಜೀವನ ಸಾಗಿಸಲು ಕಷ್ಟಕರ ವಾಗಿದೆ.

ಈರಣ್ಣ, ನದಿ ದಂಡೆಯ ರೈತರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಕ್ತದಾನ ಮಾಡುವ ಗುಣ ಬೆಳೆಸಿಕೊಳ್ಳಿ : ಶಿವಲಿಂಗಾನಂದ ಸ್ವಾಮೀಜಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ನ. 23 : ರಕ್ತವನ್ನು ಕೃತಕವಾಗಿ ತಯಾರು ಮಾಡಲು ಬರುವುದಿಲ್ಲ, ಅಲ್ಲದೆ ಯಾವ ಪ್ರಾಣಿಗಳ ರಕ್ತವನ್ನು

ಸೆಡೆಗಳು ಎಂದಿದ್ದ ರಜತ್ ಗೆ ಬೆವರಿಳಿಸಿದ ಬಾದ್ ಶಾ..!

ಬಿಗ್ ಬಾಸ್ ಕನ್ನಡ ಸೀಸನ್ 11ಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಜತ್ ಹಾಗೂ ಶೋಭಾ ಶೆಟ್ಟಿ ಬಂದಿದ್ದಾರೆ. ರಜತ್ ಆರಂಭದಿಂದಾನು ಒಳ್ಳೆ ರೌಡಿಸಂ ತೋರಿಸುವ ರೀತಿಯೇ ಆಟವಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರಬೇಕು

ನಿತ್ಯ ವಿದ್ಯಾರ್ಥಿಯಾಗಿರುವವನೆ ಅತ್ಯುತ್ತಮ ಶಿಕ್ಷಕ : ಪ್ರೊ.ಹೆಚ್.ಎ.ಭಿಕ್ಷಾವರ್ತಿಮಠ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ನವೆಂಬರ್. 23 : ನಿತ್ಯ ವಿದ್ಯಾರ್ಥಿಯಾಗಿರುವವನೆ ಅತ್ಯುತ್ತಮ ಶಿಕ್ಷಕ. ಕೇವಲ ಪದವಿ ಪಡೆದರೆ ಸಾಲದು. ಶಿಕ್ಷಣದ

error: Content is protected !!