Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಯೋಗ ಗುರುವಿನ ಕರ್ಮಭೂಮಿ ತುರುವನೂರು ಆಗಬೇಕಿತ್ತು, ಆದರೆ ಆಗಿದ್ದು ಮಲ್ಲಾಡಿಹಳ್ಳಿ : ಶ್ರೀ ರಾಘವೇಂದ್ರ ಸ್ವಾಮೀಜಿಯವರ ಕುರಿತು ನಿಮಗೆ ಗೊತ್ತಿರದ ಸ್ವಾರಸ್ಯಕರ ಮಾಹಿತಿ ಇಲ್ಲಿದೆ…!

Facebook
Twitter
Telegram
WhatsApp

 

ವಿಶೇಷ ಲೇಖನ
ತುರುವನೂರು ಮಂಜುನಾಥ,
ಮೊ : 9916191222

ಜೂನ್ 21 ರಂದು ವಿಶ್ವಯೋಗದ ದಿನ ಅಂತ ಕೇಂದ್ರ ಸರ್ಕಾರ ಕರೆದಿದೆ. ಇದರ ಹಿಂದಿನ ಸತ್ಯಗಳು ಏನೇ ಇರಲಿ ಆದರೆ ನಮ್ಮ ಪರಂಪರೆಯ  ಯೋಗಕ್ಕೆ ವಿಶ್ವಮಾನ್ಯತೆ ಸಿಕ್ಕಿದೆ ಎನ್ನುವುದೇ ಖುಷಿ, ಯಾಕೆಂದರೆ ಇದ್ಯಾವುದರ ಗೊಡವಯೇ ಇಲ್ಲದ ಸಂದರ್ಭದಲ್ಲಿ  ನಮ್ಮ ನಡುವಿನ ಸಂತನೊಬ್ಬರು  ಅದನ್ನು ತಪಸ್ಸಿನಂತೆ ಆಚರಿಸಿ ಸಹಾಸ್ರಾರು ಯೋಗ ಪಟುಗಳನ್ನು ನಾಡಿಗೆ ನೀಡಿದರು. ಅದರ ಆಳ-ಅಗಲವನ್ನು ತಿಳಿಸಿದರು. ಅದನ್ನೊಂದು ಕ್ರಾಂತಿಯ ರೂಪದಲ್ಲಿ ತಂದರು ಅವರೆ ‘ತಿರುಕ .  ತಮ್ಮನ್ನು ತಾವೇ ‘ತಿರುಕ ಎಂದು ಕರೆದುಕೊಂಡು ಜೋಳಿಗೆಯ ಮೂಲಕ ಪವಾಡವನ್ನೇ ಮಾಡಿದ ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮೀಜಿ.

ಬಹುಶಃ ಐವತ್ತರ ದಶಕದಲ್ಲಿ ಆರಂಭವಾದ ಈ ಯೋಗ  ಸತತವಾಗಿ ಐವತ್ತು ವರ್ಷಗಳ ಕಾಲ ಈ ನಾಡಿನ ಅದ್ಭುತವೊಂದನ್ನು ಕಲಿಸಿಕೊಟ್ಟಿದ್ದಾರೆ ಕೇವಲ ಯೋಗವಲ್ಲ ಅದರ ಜೊತೆಗೆ ಆರ್ಯುವೇದ ಔಷಧಿಯನ್ನು ತಯಾರಿಸುವ ಮೂಲಕ ಗಿಡಮೂಲಿಕೆಗಳನ್ನು ಬೆಳೆದು ಅದರಲ್ಲಿಯೇ ಲಕ್ಷಾಂತರ ಮಂದಿಯ ಜೀವವನ್ನು ಉಳಿಸಿದ ಮಹಾಮಹಿಮ ಅದಕ್ಕಾಗಿಯೇ ಮಲ್ಲಾಡಿಹಳ್ಳಿ ವಿಶ್ವವಿಖ್ಯಾತಿ ಪಡೆಯಿತು.

ಮಲ್ಲಾಡಿ ಹಳ್ಳಿ ಹೆಸರು ಬಂದಿದ್ದು ರಾಘವೇಂದ್ರ ಸ್ವಾಮೀಜಿಯ ಮೂಲಕವೇ, ಆದರೆ ಅವರು ದಕ್ಷಿಣ ಕನ್ನಡದಿಂದ ತಾವು ಊರೂರು ತಿರುಗುತ್ತಾ ಬಂದಾಗ ಕಣ್ಣಿಗೆ ಕಂಡಿದ್ದು ತುರುವನೂರು ,ಯಾಕೆಂದರೆ ಈ ಊರು ಸ್ವಾತಂತ್ರ್ಯ ಚಳವಳಿಯಲ್ಲಿ ಸಾಕಷ್ಟು ಹೆಸರು ಮಾಡಿತ್ತು ಆ ಕಾರಣಕ್ಕಾಗಿ ಅವರು ತುರುವನೂರಿಗೆ ಬಂದು ಅನಾಥನಂತೆ ಮಲಗಿದ್ದಾಗ ಊರಿನ ಜನ ಅವರಿಗೆ ಆಶ್ರಯ ನೀಡಿದರು. ಆದರೆ ಭೂಮಿ ಕೊಟ್ಟಿದ್ದರೆ ಇಂದು ಮಲ್ಲಾಡಿಹಳ್ಳಿಯ ಬದಲಾಗಿ ತುರುವನೂರು ಅದಕ್ಕೆ ಹೆಸರಾಗುತ್ತಿತ್ತು ಎನ್ನುವ ನೋವು ಊರಿನ ಹಿರಿಯರಿಗೆ ಸದಾ ಕಾಡುತ್ತಲೇ ಇರುತ್ತದೆ.

ರಾಘವೇಂದ್ರಸ್ವಾಮಿ ಮಲ್ಲಾಡಿ ಹಳ್ಳಿಗೆ ಹೋಗುವ ಮುನ್ನ ತುರುವನೂರಿನಲ್ಲಿ ನೆಲಸಿದ್ದು ವಿಶೇಷ. ಅಲ್ಲದೆ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ದೇಶ ಸೇವೆಗೈದಿದ್ದರು. 1940 ರಿಂದ 1942 ರವರೆಗೆ ಅವರು ತುರುವನೂರಿನ ಸ್ವಾತಂತ್ರ್ಯಚಳವಳಿಯ ಕಾಲಮಾನದಲ್ಲಿ ಇಲ್ಲಿ ತಂಗಿದ್ದರು.  ಅಲ್ಲಿ ನಡೆಯುತ್ತಿದ್ದ  ಸ್ವಾತಂತ್ಯ ಚಳವಳಿಯಲ್ಲಿ ಕೂಡ ಸಕ್ರಿಯವಾಗಿ ಭಾಗವಹಿಸಿದ್ದರು.

ಇವರು ಈ ಗ್ರಾಮಕ್ಕೆ ಬಂದದ್ದೇ ಒಂದು ರೋಚಕ ಕತೆ ಇದೆ. ಅಲೆಮಾರಿ ಯುವಕನೊಬ್ಬ ಗ್ರಾಮದ ಬಸ್ ನಿಲ್ದಾಣದಲ್ಲಿ ಮಲಗಿದ್ದ,ಎರಡು ದಿನಗಳಿಂದ ಭಿಕ್ಷೆ ಬೇಡುತ್ತಿದ್ದ.ಆನಂತರ ತಾವು ಇದೇ ಗ್ರಾಮದಲ್ಲಿ ನೆಲಸಲು ಅವಕಾಶಕೊಡುವಂತೆ ವಿನಂತಿಸಿಕೊಳ್ಳುತ್ತಾನೆ ಆದರೆ ಗ್ರಾಮದ ಮುಖಂಡರು ಇವರಿಗೆ ಇಲ್ಲಿ ನೆಲಸಲು ಅವಕಾಶವನ್ನು ನಿರಾಕರಿಸುತ್ತಾರೆ, ಆದರೂ ಛಲ ಬಿಡದ ಅವರು ಅಂಗಲಾಚಿ ಬೇಡಿಕೊಂಡು ಇಲ್ಲಿ ನೆಲಸಲು ಅನುಮತಿ ಪಡೆಯುತ್ತಾರೆ. ಪ್ರಾರಂಭದಲ್ಲಿ ಭಿಕ್ಷೆಬೇಡಿ ಜೀವನ ಸಾಗಿಸುತ್ತಿದ್ದ ಇವರು, ತದನಂತರ ಯೋಗ ಶಿಕ್ಷಣವನ್ನು ಇಲ್ಲಿಯ ಯುವಕರಿಗೆ ಕಲಿಸಲು ಮುಂದಾಗುತ್ತಾರೆ.

ಕೆಲವೇ ದಿನಗಳಲ್ಲಿ ಯೋಗಗುರುಗಳೆಂದು ಹೆಸರು ಪಡೆಯುತ್ತಾರೆ. ಹೀಗೆ ಇರುವಾಗ ಇಲ್ಲಿಯೇ ಜಮೀನು ನೀಡಿದರೆ ಅಲ್ಲಿ ಆಶ್ರಮ ಕಟ್ಟಿಕೊಂಡು ಔಷಧಿಗಿಡಗಳನ್ನು ಬೆಳೆಯುತ್ತೇನೆ ಎಂದು ಗ್ರಾಮದವರಲ್ಲಿ ಮನವಿ ಮಾಡಿಕೊಳ್ಳುತ್ತಾರೆ, ಆದರೆ ಈ ಗ್ರಾಮದಲ್ಲಿ ಯಾರು ಜಮೀನು ನೀಡಲು ಮುಂದೆಬರುವುದಿಲ್ಲ ಹಾಗಾಗಿ ತೀವ್ರ ನಿರಾಶೆಗೊಂಡ ರಾಘವೇಂದ್ರಸ್ವಾಮಿಗಳು ಈ ಗ್ರಾಮವನ್ನು ಬಿಟ್ಟು ತೆರಳುತ್ತಾರೆ. ಇಲ್ಲಿಂದ ಸೀದ ಅವರು ಮಲ್ಲಾಡಿ ಹಳ್ಳಿಗೆ ಹೋಗಿ ಅಲ್ಲಿ ಆ ಗ್ರಾಮದವರ ಸಹಾಯದಿಂದ ಆಶ್ರಮಕಟ್ಟುತ್ತಾರೆ.

ಅಲ್ಲಿ ಔಷಧಯುಕ್ತ ಗಿಡಗಳನ್ನು ಬೆಳದು ಇಡೀ ದೇಶವನ್ನೆ ಗಮನಸೆಳೆಯುವಂತೆ ಮಾಡುತ್ತಾರೆ. ಆದರೆ ತುರುವನೂರಿನಲ್ಲೆ ಒಂದೊಮ್ಮೆ ಇಂತಹ ಸಹಾಯ ಮಾಡಿದ್ದರೆ ತುರುವನೂರು ಕೂಡ ಇಂದು ವಿಶ್ವದಗಮನಸೆಳೆಯುತ್ತಿತ್ತು. ಆಮೂಲಕ ತುರುವನೂರು ಮತ್ತೊಂದು ಇತಿಹಾಸಕ್ಕೆ ಕಾರಣವಾಗುತ್ತಿತ್ತು ಆದರೆ ಅದು ಸಾಧ್ಯವಾಗಲಿಲ್ಲ ಎನ್ನುವ ನೋವು ಜನರಲ್ಲಿ ಕಾಡುತ್ತಲೇ ಇದೆ.

ಇಂಥ ಗುರುಗಳು ಯೋಗ ಕುರಿತು ಮಾಡಿದ ಸಾಧನೆ ವಿಶ್ವದ ಗಮನಸೆಳೆಯುತು, ಇಂದು ವಿಶ್ವಯೋಗ ದಿನ ಅಂತ ಕರೆಯುತ್ತಾರೆ ಆದರೆ ಯೋಗ  ಕುರಿತು ಅದರ ಆಳ-ಅಗಲವನ್ನು ಅಧ್ಯಯನ ಮಾಡಿ ಶಿಕ್ಷಣ ನೀಡಿದವರು ರಾಘವೇಂದ್ರ ಸ್ವಾಮಿಗಳು.

ಯೋಗ ಅಂದರೆ ಸೇರುವಿಕೆ, ಕೂಡಿಕೊಳ್ಳೋದು ಅಂತ ಸಾಮಾನ್ಯ ಭಾಷೆಯ ಅರ್ಥ, ಇದು ವಾನೆಲ್ಲಾ ಮಾತನಾಡುವ ಯೋಗದ ವಶಾಲವಾದ ಅರ್ಥ ದೇಹ, ಮನ್ಸು ಕೂಡಿಸೋದು ಅಂತ, ಆರೋಗ್ಯವಾದ ದೇಹದಲ್ಲಿ ಆರೋಗ್ಯವಾದ ಮನಸ್ಸು ಇರುತ್ತದೆಯಂತೆ ಕಂಡುಕೊಂಡು ಇವೆರಡನ್ನೂ ಆರೋಗ್ಯವಾಗಿ ಇಡುವ ಕ್ರಿಯಯಾಗಿ ಯೋಗವನ್ನು ಅರ್ಥ್ಯೆಸಲಾಗಿದೆ.

ಆದರೆ ಇದು ಅಷ್ಟಾಂಗ ಯೋಗ ಮಾರ್ಗದ ಒಂದು ಮೆಟ್ಟಿಲು ಮಾತ್ರ ಯೋಗದ ಅಷ್ಟಾಂಗಗಳು ಯಾವುವೆಂದರೆ, ಯಮ, ನಿಯಮ, ಅಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ  ರ್ಧಯಾನ ಮತ್ತು ಸಮಾಧಿ ಈ ಯೋಗಗಳನ್ನು ಸಿದ್ದಿಯೋಗ ಅಂತಲೂ ಕರಿಯುತ್ತಾರೆ,ಅಸನದ ವಿಷಯಕ್ಕೆ ಬಂದಾಗ ಅವರವರ ದೇಹ ಪ್ರಕೃತಿಗೆ ಅನುಕೂಲಕ್ಕಾಗಿ  ಆಸನಗಳಿವೆ.

ಅವು ವಿರಸನ,ಭದ್ರಾಸನ. ಇದನ್ನು ಸಿದ್ದಿಯೋಗ ಅಂತಲೂ ಕರೀತಾರೆ, ಅಸನದ ವಿಷಯಕ್ಕೆ ಬಂದಾಗ ಅವರವರ ದೇಹ ಪ್ರಕೃತಿಗೆ ಅನುಕೂಲಕ್ಕಾಗಿ ಆರು ಅಸನಗಳಿವೆ. ಅವು ವಿರಸಾನಭದ್ರಾಸನ, ಪದ್ಮಾಸನ, ಸ್ವಸ್ತಿಕಾಸನ, ಸಿದ್ಧಾಸನ ಮನಸ್ಸಿಎ ದೇಹಕ್ಕೆ ಕಿರಿ ಕರಿಯಾಗದೆ ಯಾರು ಎರಡೂವರೆ ಗಂಟೆಗಳ ಕಾಲ ಈ ಆರು ಅಸನಗಳಲಿ ಕಲದೇ ಒಮದರಲ್ಲಿ ಕೂಡೂತ್ತಾರೋ ಅವರು ಆ ಅಸನದಲ್ಲಿ ಸಿದ್ದಿ ಮಾಡಿಕೊಳ್ಳಬಹುದು.

ಮೇಲಿನ ಆರೂ ಅಸನಗಳು ಯಾರಿಗೆ ಸಿದ್ಧಿಸುವುದಿಲ್ಲವೋ ಅವರು ಸುಖಾಸನ ಅಂದ್ರೆ ಅವರ ದೇಹ ಯಾವ ರೀತಿ ಕುಳಿತುಕೊಂಡರೆ ಒಗ್ಗತ್ತೋ ಹಾಗೆ ಕುಳಿತು ಮುಂದುವರಿಸಬಹುದು ಎನ್ನುವುದನ್ನು ಸ್ವಾಮಿಗಳು ತಿಳಿಸಿದ್ದರು.

ಆಶ್ರಮದಲ್ಲಿ ವ್ಯಾಯಾಮ ಶಾಲೆ ಇತ್ತು ಆ ಗರುಡಿಮನೆಯಲ್ಲಿಯೇ ಹಲವು ವಿಶೇಷೆಗಳಿದ್ದವು, ಕೆಂಪು ಮಣ್ಣು ಆಯುರ್ವೇದ ಹಲವು ಗಿಡಮೂಲಿಕೆಗಳ  ಸಂಗಮ. ಆ ಮಣ್ಣಿನಲ್ಲಿ ಮಿಂದೆದ್ದರೆ ಎಂಥ ರೋಗಗಳೂ ಪರಿಹಾರ. ಸ್ವಾಮೀಜಿ ಆಶ್ರಮಕ್ಕಾಗಿ ಇಡೀ ವಾರ ಸಂಚಾರದಲ್ಲೇ ಇರುತ್ತಿದ್ದರು. ಆಶ್ರಮ ನಡೆಯಬೇಕೆಂದರೆ ಅವರು ಊರೂರು ಸುತ್ತಿ ಜೋಳಿಗೆ ಹಿಡಿಯಬೇಕು.

ಆದರೆ ಅವರು ಭಾನುವಾರ ಎಲ್ಲಿದ್ದರೂ ಸಂಜೆ ಆಶ್ರಮಕ್ಕೆ ಬರಲೇ ಬೇಕು .ಪ್ರತಿ ಸೋಮವಾರ ಅವರು ಆಯುರ್ವೇದದ ಅಸ್ಪತ್ರೆಯಲ್ಲಿ ರೋಗಿಗಳಿಗೆ ಔಷಧ ಕೊಡುತ್ತಿದ್ದರು.ಎಂಥ ರೋಗಿವಿದ್ದರೂ ಸ್ವಾಮೀಜಿ ಕೊಡುವ ಔಷಧಿಗೆ ಅದು ಮಣಿಯಲೇ ಬೇಕು. ಬೆಳಿಗ್ಗೆ ನಾಲ್ಕಕ್ಕೆ ಆರಂಭವಾಗುವ ಆಸ್ಪತ್ರೆ ಒಮ್ಮೊಮ್ಮೆ ಸಂಜೆ ನಾಲ್ಕರವರೆಗೂ ನಿರಂತರವಾಗಿ ನಡೆದದ್ದು ಉಂಟು.

ಎಲ್ಲಾ ರೋಗಿಗಳನ್ನು ನೋಡುವುದು  ಮುಗಿದ ಮೇಲೆಯೇ ಅವರ ಅಹಾರ ಸೇವನೆ. ಸ್ವಾಮೀಜಿ ಎಲ್ಲಾ ಔಷಧವನ್ನು ಆ ದಿನದಲ್ಲಿಯ ಉಚಿತವಾಗಿ ನೀಡುತ್ತಿದ್ದರು. ಸೇವೆ ಎಂದರೆ ಇದೆ ಅಲ್ಲವೇ. ಪ್ರತಿಯೊಬ್ಬ ರೋಗಿಯನ್ನು ಪರೀಕ್ಷಿಸುವ ಮೊದಲು ಅವರನ್ನು ಕಣ್ಣಿಗೆ ಒತ್ತಿಕೊಳ್ಳುತ್ತಿದ್ದ ಸ್ವಾಮೀಜಿ ರೋಗಿಗಳಲ್ಲಿ ದೇವರನ್ನು ಕಾಣುತ್ತಿದ್ದರು
ಇದು ಆಯುರ್ವೇದವೂ ಬ್ರ್ಯಾಂಡ್ ಆಗಿ ಹಣದ ದಂಧೆ ಅಗಿರುವುದನ್ನು ಕಂಡಾಗ ನಮ್ಮ ಸ್ವಾಮೀಜಿ ಮತ್ತಷ್ಟು ಎತ್ತರವಾಗಿ ಕಾಣುತ್ತಾರೆ.
ಯೋಗಕ್ಕಾಗಿಯೇ ಆ ದಿನದಲ್ಲಿ ವಿಶ್ವ ಯೋಗ ಕೇಂದ್ರವನ್ನು ಉದ್ಟಾಟಿಸುವ ಮೂಲಕ ಅದಕ್ಕೆ ಮತ್ತೊಂದಿಷ್ಟು ಅರ್ಥ ನೀಡಿದವರು ವರನಟ ಡಾ.ರಾಜ್‌ಕುಮಾರ್ ಎನ್ನುವುದು ವಿಶೇಷವೆ.

ಶಿಸ್ತಿಗೆ ಮತ್ತೊಂದು ಹೆಸರು ಸ್ವಾಮೀಜಿ ಆಶ್ರಮದಲ್ಲಿರುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ನಾಲ್ಕೆಕ್ಕೆಲ್ಲಾ ಸೂರ್ಯನಮಸ್ಕಾರ ಕಡ್ಡಾಯ ಶಿಸ್ತು ಪಾಲಿಸುವುದರ ಶಿಕ್ಷೆ ತಪ್ಪಿಸಿಕೊಳ್ಳುವಂತೆಯೇ ಇಲ್ಲ. ಒಂದು ಚಡ್ಡಿ ಅದರ ಮೇಲೆ ಅರ್ಧ ತೋಳಿನ ಜುಬ್ಬ ಇದೇ  ಸ್ವಾಮೀಜಿಯವರ  ಉಡುಪು.ಹೊಸದಾಗಿ ಆಶ್ರಮಕ್ಕೆ ಬರುವವರು ಸ್ವಾಮೀಜಿ ಅವರ ಬಳಿಯೇ ಸ್ವಾಮೀಜಿ ಅವರು ಎಲ್ಲಿ ಸಿಗುತ್ತಾರೆ ಎಂದು ವಿಚಾರಿಸದ್ದು ಉಂಟು‌ ನಾಟಿ ವೈದ್ಯರಾಗಿ ಗುರುತಿಸಿಕೊಂಡಿದ್ದ ಸ್ವಾಮೀಜಿ, ಅನೇಕ ಮಾರಕ ಕಾಯಿಲೆಗಳನ್ನು ಗುಣಮಾಡಿದ್ದರು.

ನೂರಾರು ಜನ ಅವರ ಬಳಿ ಔಷಧ ಪಡೆದುಕೊಳ್ಳಲು ಆಗಮಿಸುಯತ್ತಿದ್ದರು. ರಾಘವೇಂದ್ರ ಸ್ವಾಮಿ ಅವರನ್ನು ಮೊದಲಿಗೆ ವ್ಯಾಯಾಮ ಮೇಷ್ಟ್ರು ಎಂದೇ ಗುರುತಿಸಲಾಗುತ್ತಿತ್ತು. ಅವರು ರಾಜ್ಯದ ವಿವಿಧೆಡೆ ಸ್ಫಾಪಿಸಿದ ವ್ಯಾಯಾಮ ಶಾಲೆಗಳು ಇಂದಿಗೂ ಪಟುಗಳನ್ನು ತಯಾರು ಮಾಡುತ್ತಿವೆ.

ಸ್ಮಾಮೀಜಿಯವರು ತಮ್ಮ ಜೀವನದಲ್ಲಿ ಯೋಗಾಸನವನ್ನು ಅಳವಡಿಸಿಕೊಂಡಿದ್ದರು. ಹಾಗಾಗಿಯೇ 96 ವರ್ಷದ ದೀರ್ಘ ಬದುಕನ್ನು ನಡೆಸಿದರು. 1996 ರಲ್ಲಿ ವಯೋಸಹಜ ಉಸಿರಾಟ ಸಮಸ್ಯೆಯಿಂದ ತೊಂದರಗೆ ಒಳಗಾಗುವರೆಗೂ ಯಾವುದೇ ಆರೋಗ್ಯ ಸಮಸ್ಯೆ ಅವರನ್ನು ಕಾಡಿರಲಿಲ್ಲ.
ರಾಜ್ಯದ ಹಲವೆಡೆ ವ್ಯಾಯಾಮ ಶಾಲೆ ನಿರ್ಮಿಸುತ್ತ ಚಿತ್ರದುರ್ಗಕ್ಕೆ ಬಂದ ಸ್ವಾಮೀಜಿ ಅವರು ತೆರಳಲು ಮುಂದಾಗಿದ್ದರು. ಆದರೆ ಜನರ ಒತ್ತಾಸೆಗೆ ಮಣಿದು ಮಲ್ಲಾಡಹಳ್ಳಿಯಲ್ಲೇ ಶಾಲೆ ಸ್ಥಾಪಿಸಿ ಕೊನೆಯವರೆಗೂ ಅಲ್ಲೇ ನೆಲೆ ನಿಂತಿದ್ದರು.

ಸೇವಾಶ್ರಮದಲ್ಲಿ ಭಾರತೀಯ ಪರಂಪರೆಯ ಯೋಗ, ವ್ಯಾಯಾಮಗಳನ್ನೂ ಅತ್ಯಂತ ನಿಷ್ಥೆ ಪ್ರೀತಿ ವಿಶ್ವಾಸದಿಂದ ಬೋಧಿಸಿ ಅಲ್ಲಿನ ಗ್ರಾಮೀಣ ಜನರಿಂದ ವ್ಯಾಯಾಮದ ಮೇಷ್ಟ್ರು ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಲೇ, ಸ್ವತಃ ತಾವೇ 5 ದಶಕಗಳ ಕಾಲ ತಪ್ಪದೇ ಔಷಧಿಗಳನ್ನೂ ವಿತರಿಸತೊಡಾಗಿದರು.

ಮಠದ ರೀತಿಯಲ್ಲಿದ್ದರೂ, ಯಾವುದೇ ಧಾರ್ಮಿಕ ಸಾಂಪ್ರದಾಯಿಕ ಕಟ್ಟು ಪಾಡುಗಳಿಲ್ಲದೇ, ಜಾತಿಯ ಧರ್ಮದ ಬೇಧವಿಲ್ಲದೇ, ಜನರ ಕಷ್ಟ ಸುಖಃಗಳಿಗೆ ಸ್ಪಂದಿಸುತ್ತಿದ್ದ ರಾಘವೇಂದ್ರರನ್ನು ಮಲ್ಲಾಡಿಹಳ್ಳಿಯ ಜನತೆ, ಸ್ವಾಮೀಜಿ ಎಂದು ಪ್ರೀತಿಯಿಂದ ಕರೆಯಲಾರಂಭಿಸಿ ರಾಘವೇಂದ್ರ ಸ್ವಾಮಿಗಳು ಎನಿಸಿಕೊಂಡರೆ, ರಾಘವೇಂದ್ರರು ಮಾತ್ರಾ ತಮ್ಮನ್ನು ತಾವು ತಿರುಕ ಎಂದೇ ಕರೆದುಕೊಂಡಿದ್ದಲ್ಲದೇ, ತಿರುಕ ಎನ್ನುವ ಹೆಸರಿನಿಂದಲೇ, ಯೋಗ, ಆಯುರ್ವೇದ, ಮನೆಮದ್ದುಗಳ ಹಲವಾರು ಪುಸ್ತಕಗಳನ್ನು ರಚಿಸುವ ಮೂಲಕ ಜನಪ್ರಿಯರಾದರು.

ರಾಘವೇಂದ್ರ ಸ್ವಾಮೀಜಿಯವರ ನಿಸ್ವಾರ್ಥ ಸೇವೆ ಮತ್ತು ವ್ಯಕ್ತಿತ್ವದಿಂದ ಪ್ರಭಾವಿತರಾದ, ಹೊಳಲ್ಕೆರೆಯ ಪ್ರಾಥಮಿಕ ಶಾಲೆಯ ಉಪಾಧ್ಯಾಯ ವೃತ್ತಿಯಲ್ಲಿದ್ದ ಸೂರ್ಯನಾರಾಯಣರಾವ್ ರಾಘವೇಂದ್ರ ಸ್ವಾಮಿಗಳ ಜೊತೆಗೆ ಸೇರಿಕೊಂಡುಸೂರ್ ದಾಸ್ ಜೀ ಎಂಬ ಹೆಸರಾಗಿಸಿಕೊಂಡು ಇಬ್ಬರೂ ಸೇರಿ ಒಟ್ಟೊಟ್ಟಿಗೆ ಆಶ್ರಮವನ್ನು ಬೆಳಸತೊಡಗಿದರು.

ಉಳಿದ ಸ್ವಾಮೀಜಿಗಳಂತೆ ಕಾವಿಧಾರಿಯಾಗದೇ, ಕಾಯಕವೇ ಕೈಲಾಸ ಎಂಬು ತತ್ವದಡಿಯಲ್ಲಿ ಕೇವಲ ಖಾದಿ ಬಟ್ಟೆಯ ಬಿಳಿಯ ಚಡ್ಡಿ ಮತ್ತು ಅರ್ಧ ತೋಳಿನ ಅಂಗಿ ಧರಿಸುತ್ತಾ ಸರಳ ಜೀವನದಿಂದಲೇ, ಜನರ ಸೇವೆಗಾಗಿಯೇ ತಮ್ಮ ಬದುಕನ್ನು ಮೀಸಲಾಗಿಟ್ಟರು. ಆಶ್ರಮ ನಡೆಸಲು ಜೋಳಿಗೆ ಹಿಡಿದು ಹೊರಟರೆ, ರಾಘವೇಂದ್ರರ ಸೇವಾಕೈಂಕರ್ಯದಿಂದ ಪ್ರಭಾವಿತಗೊಂಡಿದ್ದ ಜನರು ಉದಾರವಾಗಿ ದೇಣಿಗೆ ನೀಡಿದರು.

ಜಾತಿ, ಮತ, ಪಂಥಗಳ ಹಂಗಿಲ್ಲದೆ ಆ ಆಶ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳೂ ಒಟ್ಟಿಗೆ ವಿದ್ಯಾಭ್ಯಾಸದ ಜೊತೆಗೆ ಊಟ ಒಂದೇ ಕಡೆಯಾದರೂ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ವಸತಿಗೃಹ ವ್ಯವಸ್ಥೆ ಹೊಂದಿದ್ದ ಆ ಶಾಲೆಗೆ ಸುತ್ತಮುತ್ತಲ ಗ್ರಾಮಗಳ ಮಕ್ಕಳಲ್ಲದೇ ಕರ್ನಾಟಕದ ಬೇರೆ ಬೇರೆ ಭಾಗಗಳಿಂದಲೂ ವಿದ್ಯಾರ್ಥಿಗಳು ಬಂದು ಕಲಿಯಲಾರಂಭಿಸಿದರು.

1968 ರಲ್ಲಿ ಆಶ್ರಮದ ರಜತ ಮಹೋತ್ಸವದ ನೆನಪಿಗಾಗಿ ರಜತ ಮಹೋತ್ಸವ ದೈಹಿಕ ಶಿಕ್ಷಣ ಸ್ವಾಮೀಜಿವವರ ಶತಮಾನೋತ್ಸವದ ನೆನಪಾಗಿ ಶತಮಾನೋತ್ಸವ ದೈಹಿಕ ಶಿಕ್ಷಣ ಮಹಾವಿದ್ಯಾಲಯಗಳನ್ನು ಪ್ರಾರಂಭಿಸಿದರು. ಆಶ್ರಮದ ಆವರಣದಲ್ಲಿ ವಿಶಿಷ್ಠವಾದ ಧನ್ವಂತರಿ ಆಸ್ಪತ್ರೆ ಸಮುಚ್ಛಯ ಮತ್ತು ವಿಶ್ವಯೋಗ ಮಂದಿರಗಳನ್ನು ಕಟ್ಟಿಸಿದರು. ಯೋಗ ಕುರಿತ ಅಪರೂಪ ಪುಸ್ತಕವನ್ನೂ ರಚಿಸಿದರು.

ಇಂದಿಗೂ ಅವರಸ್ವಯಂವೈದ್ಯಯೋಗ ಮತ್ತು ಚಿಕಿತ್ಸೆಯ ಅಪರೂಪದ ಕೃತಿಯಾಗಿದೆ.ಯೋಗವನ್ನುವ್ಯಾಪಾರಕ್ಕಾಗಿ ಬಳಸಿ ಕೊಂಡವರ ನಡುವೆ ರಾಘವೇಂದ್ರಸ್ವಾಮೀಜಿ ಸಮಾಜಸೇವೆಗೆ ಬಳಸಿದ್ದು ಈ ನಾಡಿನ ಉಲ್ಲೇಖಾರ್ಹಸಂಗತಿ ಎನ್ನಬಹುದು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಕ್ತದಾನ ಮಾಡುವ ಗುಣ ಬೆಳೆಸಿಕೊಳ್ಳಿ : ಶಿವಲಿಂಗಾನಂದ ಸ್ವಾಮೀಜಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ನ. 23 : ರಕ್ತವನ್ನು ಕೃತಕವಾಗಿ ತಯಾರು ಮಾಡಲು ಬರುವುದಿಲ್ಲ, ಅಲ್ಲದೆ ಯಾವ ಪ್ರಾಣಿಗಳ ರಕ್ತವನ್ನು

ಸೆಡೆಗಳು ಎಂದಿದ್ದ ರಜತ್ ಗೆ ಬೆವರಿಳಿಸಿದ ಬಾದ್ ಶಾ..!

ಬಿಗ್ ಬಾಸ್ ಕನ್ನಡ ಸೀಸನ್ 11ಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಜತ್ ಹಾಗೂ ಶೋಭಾ ಶೆಟ್ಟಿ ಬಂದಿದ್ದಾರೆ. ರಜತ್ ಆರಂಭದಿಂದಾನು ಒಳ್ಳೆ ರೌಡಿಸಂ ತೋರಿಸುವ ರೀತಿಯೇ ಆಟವಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರಬೇಕು

ನಿತ್ಯ ವಿದ್ಯಾರ್ಥಿಯಾಗಿರುವವನೆ ಅತ್ಯುತ್ತಮ ಶಿಕ್ಷಕ : ಪ್ರೊ.ಹೆಚ್.ಎ.ಭಿಕ್ಷಾವರ್ತಿಮಠ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ನವೆಂಬರ್. 23 : ನಿತ್ಯ ವಿದ್ಯಾರ್ಥಿಯಾಗಿರುವವನೆ ಅತ್ಯುತ್ತಮ ಶಿಕ್ಷಕ. ಕೇವಲ ಪದವಿ ಪಡೆದರೆ ಸಾಲದು. ಶಿಕ್ಷಣದ

error: Content is protected !!