ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ ಮೇಲೆ, ತನ್ನ ಐದು ಗ್ಯಾರಂಟಿಗಳನ್ನು ಜಾರಿಗೆ ತರುವುದಕ್ಕೆ ಹರಸಾಹಸ ಪಡುತ್ತಿದೆ. ಆದರೂ ತಂದೆ ತರ್ತೀವಿ ಎಂಬ ಮಾತುಗಳನ್ನು ಹೇಳಿದೆ. ಈ ಬಗ್ಗೆ ಗರಂ ಆಗಿರುವ ಶೋಭಾ ಕರಂದ್ಲಾಜೆ, ವಿಧಾನಸಭಾ ಚುನಾವಣೆ ವೇಳೆ ನಿಮ್ಮ ಗ್ಯಾರಂಟಿಗಳ ಭರವಸೆಗಳನ್ನು ನೀಡುವಾಗ ತಲೆಯಲ್ಲಿ ಮೆದುಳು ಇರಲಿಲ್ವಾ..? ಸಗಣಿ ಇಟ್ಟುಕೊಂಡಿದ್ದರಾ..? ಎಂದು ಪ್ರಶ್ನೆ ಮಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ವೇಳೆ ಗೆಲ್ಲುವುದಕ್ಕೆ ಸುಳ್ಳು ಆಶ್ವಾಸನೆ ನೀಡಿದರಾ..? ಐದು ಭರವಸೆಗಳನ್ನು ಈಡೇರಿಸಲು ಸಮಸ್ಯೆ ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಬೇಜವಬ್ದಾರಿ ಸರ್ಕಾರವಾಗಿದೆ. ಕೇಂದ್ರದಲ್ಲಿ ದಾಸ್ತಾನು ಇರುವುದು ತುರ್ತು ಸಂದರ್ಭದಲ್ಲಿ ಜನರಿಗೆ ನೀಡುವುದಕ್ಕೆ ಎಂದಿದ್ದಾರೆ.
ಆಡಳಿತ ನೀಡಲು ಯೋಗ್ಯತೆಯಿಲ್ಲದೆ ಪ್ರತಿ ವಿಚಾರಕ್ಕೂ ನರೇಂದ್ರ ಮೋದಿ ಹಾಗೂ ಕೇಂದ್ರದ ಕಡೆ ಬೊಟ್ಟು ತೋರಿಸಬೇಡಿ. ಕೇಂದ್ರ ಕೊಡುತ್ತಿರುವ ಐದು ಕೆ.ಜಿ ಸೇರಿಸಿ ಹತ್ತು ಕೆ.ಜಿ ನೀಡಬೇಡಿ. ರಾಜ್ಯದಲ್ಲಿ ಆರಾಜಕತೆ ತುಂಬಿದೆ. ವಿದ್ಯುತ್ ಬಿಲ್ ಹೆಚ್ಚಾಗಿದೆ. ಒಬ್ಬ ಮರ್ಯಾದೆ ಇಲ್ಲದ, ಬೇಜವಾಬ್ದಾರಿ ಮುಖ್ಯಮಂತ್ರಿಗಳಂತೆ ಸಿದ್ದರಾಮಯ್ಯ ಅವರು ಮೋದಿ ಕೊಡಲ್ಲ ಎಂದು ಹೇಳುತ್ತಿದ್ದಾರೆ ಕೇಂದ್ರದಲ್ಲಿ ಬಫರ್ ಸ್ಟಾಕ್ ಇರುವುದು ದೇಶಕ್ಕೆ ಆಪತ್ತು ಬಂದಾಗ ಉಪಯೋಗಿಸಲು. ಗ್ಯಾರಂಟಿ ಹೆಸರಲ್ಲಿ ವೋಟು ತಗೆದುಕೊಂಡು ಆಡಳಿತ ನಡೆಸಲು ಸಿದ್ದರಾಮಯ್ಯಗೆ ಯೋಗ್ಯತೆ ಇಲ್ಲ ಎಂದಿದ್ದಾರೆ.