ಬೆಂಗಳೂರು: ಯಾವುದ್ಯಾವುದೋ ರಾಜ್ಯದಿಂದ ಬಂದವರಿಗೂ ಬೆಂಗಳೂರು ದೊಡ್ಡ ಮಟ್ಟದ ಅವಕಾಶ ನೀಡಿ, ಜೀವನ ಕಟ್ಟಿಕೊಳ್ಳಲು ನೆರವು ಮಾಡಿಕೊಟ್ಟಿದೆ. ಫುಡ್ ಡೆಲುವರಿ ಬಾಯ್ ಆಗಿ ಕೂಡ ಬೇರೆ ರಾಜ್ಯದವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತಿಚೆಗೆ ಅಸ್ಸಾಂ ಫುಡ್ ಡೆಲಿವರಿ ಬಾಯ್ ನನ್ನು ಕಟ್ಟಿ ಹಾಕಿ, ಥಳಿಸಲಾಗಿದ್ದ ಘಟನೆಗೆ ಸಂಬಂಧಿಸಿದಂತೆ ಇದೀಗ ಅಸ್ಸಾಂ ಸಿಎಂ ಹಿಂತ ಬಿಸ್ವಾ ಶರ್ಮಾ, ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರಿಗೆ ಟ್ವೀಟ್ ಮೂಲಕ ತಿಳಿಸಿದ್ದಾರೆ.
The acute harassment & trauma being faced by a delivery agent from Assam over fake charges, is extremely disturbing.
I request the Hon’ble Chief Minister of Karnataka to kindly ensure that adequate protection and justice is delivered to the said individual.@CMofKarnataka pic.twitter.com/ROgKvxS77R
— Himanta Biswa Sarma (@himantabiswa) June 16, 2023
ಬಾಲಕಿಯೊಬ್ಬರ ಸುಳ್ಳು ಆರೋಪದಿಂದ ಅಸ್ಸಾಂ ಮೂಲದ ಫುಡ್ ಏಜೆಂಟ್ ಕಿರುಕುಳ ಅನುಭವಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಏಜೆಂಟ್ ಗೆ ಸೂಕ್ತ ನ್ಯಾಯ ಕೊಡಿಸಿ, ರಕ್ಷಣೆ ಕೊಡಬೇಕಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಅಸ್ಸಾಂ ಸಿಎಂ ಮನವಿ ಮಾಡಿದ್ದಾರೆ.
ಇದೇ ಜೂನ್ 12ರಂದು ಈ ಘಟನೆ ನಡೆದಿತ್ತು. ಎಲೆಕ್ಟ್ರಾನಿಕ್ ಸಿಟಿಯ ಅಪಾರ್ಟ್ಮೆಂಟ್ ಒಂದರಲ್ಲಿ ಬಾಲಕಿಯೊಬ್ಬಳು ಟೆರೆಸ್ ಮೇಲೆ ಆಟವಾಡುತ್ತಿದ್ದಳು. ಆದರೆ ಮನೆಯವರು ಹುಡುಕಾಡಿದರು ಸಿಕ್ಕಿರಲಿಲ್ಲ. ಬಳಿಕ ಸಿಕ್ಕ ಮೇಲೆ ಕೇಳಿದ್ದಕ್ಕೆ ಫುಡ್ ಡೆಲಿವರಿ ಬಾಯ್ ಟೆರೆಸ್ ಮೇಲೆ ಎಳೆದುಕೊಂಡು ಹೋಗಿದ್ರು ಎಂದಿದ್ದಳು. ಬಳಿಕ ಡೆಲಿವರಿ ಬಾಯ್ ನನ್ನು ಕಟ್ಟಿ ಹಾಕಿ, ಥಳಿಸಿದ್ದರು. ಬಳಿಕ ಫುಡ್ ಡೆಲಿವರಿ ಏಜೆಂಟ್ ಗಳು ಪ್ರತಿಭಟನೆ ಮಾಡಿದ್ದರು. ಅಪಾರ್ಟ್ಮೆಂಟ್ ಸಿಸಿಟಿವಿ ನೋಡಿದಾಗ ಬಾಲಕಿಯೊಬ್ಬಳೆರ ಟೆರೆಸ್ ಗೆ ಹೋಗಿದ್ದು ತಿಳಿದಿತ್ತು.