Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್‍ ಧರಣಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ,(ಜೂ.16) : ಜಾತಿ ಪ್ರಮಾಣ ಪತ್ರ ಸಲ್ಲಿಸುವ ಪ.ಜಾತಿ /ಪ.ವರ್ಗದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಯಾವುದೇ ಕೋಸ್ ನಲ್ಲಿ ಪ್ರವೇಶ ಪಡೆಯಲು ಮುಂಗಡವಾಗಿ ಶುಲ್ಕಸಂದಾಯ ಮಾಡುವುದನ್ನು ಈ ತಕ್ಷಣದಿಂದಲೇ ನಿಲ್ಲಿಸಬೇಕು.

ಹೆಣ್ಣುಮಕ್ಕಳಿಗೆ ಯಾವುದೇ ಶುಲ್ಕ ಪಡೆಯದೆ ಸಂಪೂರ್ಣ ಉಚಿತವಾಗಿ ಪ್ರವೇಶ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ/ಯುಕೆಜಿ ಜೊತೆಗೆ ಒಂದರಿಂದ ಹತ್ತನೇ ತರಗತಿವರೆಗೆ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಬೇಕು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಾ.  ಬಿ.ಆರ್.  ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್‍ವತಿಯಿಂದ ನಗರದಲ್ಲಿ ಧರಣಿಯನ್ನು ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಶುಕ್ರವಾರ ಧರಣಿಯನ್ನು ನಡೆಸಿ  ಪರಿಶಿಷ್ಟಜಾತಿ/ ಪ.ವರ್ಗ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕೊತ್ತಾಯ ಸಮಾವೇಶದಲ್ಲಿ ಮಾತನಾಡಿದ ತಿಪ್ಪೇಸ್ವಾಮಿ, ಪ.ಜಾತಿ / ಪ.ವರ್ಗದವರ ಶೈಕ್ಷಣಿಕ ಸೌಲಭ್ಯಗಳಿಗೆ ಕಬ್ಬಿಣದ ಸರಳುಗಳಿಂದ ಬಿಗಿದು ಕಪ್ಪು ಕೋಣೆ ಕೂಡಿ ಹಾಕಿರುವ ಸರ್ಕಾರವನ್ನು ಪ.ಜಾತಿ /ಪ.ವರ್ಗ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರು ತಮ್ಮ ಒಡಲಾಳದ ಆಕ್ರೋಶವನ್ನು ಮತದಾನದ ಮೂಲಕ ವ್ಯಕ್ತಪಡಿಸಿ ಜನ ಮೆಚ್ಚಿದ ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿದ್ದಾರೆ.

ಈ ಹಿಂದಿನ ರಾಜ್ಯ ಸರ್ಕಾರವು ಪ.ಜಾತಿ/ಪ.ವರ್ಗದವರ ಶಿಕ್ಷಣದ ಅವಕಾಶಗಳನ್ನು ಕಿತ್ತುಕೊಂಡಿದ್ದು ಸಹಿಸಲಸಾಧ್ಯವಾಗಿತ್ತು ” “ಪ.ಜಾತಿ/ಪ.ವರ್ಗದವರ ಶಿಕ್ಷಣದ ಅವಕಾಶಗಳನ್ನು ಕಿತ್ತುಕೊಂಡಿದ್ದ ಹಿಂದಿನ ಕರ್ನಾಟಕ ರಾಜ್ಯ ಸರ್ಕಾರ ಈ ಹಿಂದೆ ಎಂ.ಬಿ.ಬಿ.ಎಸ್, ಇಂಜಿನಿಯರಿಂಗ್, ಬಿ.ಎಂ.  ಐ.ಎಸ್., ಬಿ.ಎಡ್, ಐ.ಟಿ.ಐ, ಡಿಪ್ಲೋಮ, ಬಿ.ಎಸ್.ಸಿ ನರ್ಸಿಂಗ್, ಪ್ಯಾರಾಮೆಡಿಕಲ್ ತರಬೇತಿ, ಪದವಿ, ಸ್ನಾತಕೋತ್ತರ ಪದವಿ ಯೂನಿವರ್ಸಿಟಿಗಳಲ್ಲಿ ಪ್ರವೇಶ ಪಡೆಯಲು ಪ.ಜಾತಿ/ಪ.ವರ್ಗದ ವಿದ್ಯಾರ್ಥಿಗಳು ಕೇವಲ ಜಾತಿ ಆದಾಯ ಪ್ರಮಾಣ ಪತ್ರ ನೀಡಿದರೆ ಸಾಕು.

ಆದರೆ ಈಗ ಈ ಕೋರ್ಸ್‍ಗಳಿಗೆ ಪ.ಜಾತಿ/ಪ.ವರ್ಗದ ವಿದ್ಯಾರ್ಥಿಗಳು ಪ್ರವೇಶ ಪಡೆಯಬೇಕೆಂದರೆ ಕೋರ್ಸ್ ನ ಪೂರ್ಣ ಶುಲ್ಕವನ್ನು ವಿದ್ಯಾರ್ಥಿಯು ಆ ಶಾಲೆ/ ಕಾಲೇಜಿಗೆ ಮೊದಲು ಪಡೆದ ನಂತರ ಪ್ರವೇಶ ಪಡೆಯಬೇಕು.  ನಂತರ ವಿದ್ಯಾರ್ಥಿ ವೇತನ ಬಂದರೆ ಮಾತ್ರ ಹಿಂತಿರುಗಿ ಪಡೆಯಬೇಕು ವಿದ್ಯಾರ್ಥಿವೇತನ ಬರಬಹುದು…..!  ಬರದೇಯೂ ಇರಬಹುದು….?

ಕೂಲಿ-ನಾಲಿ ಮಾಡಿ ಬದುಕುವ ಎಸ್ಸಿ, ಎಸ್ಟಿ ಮಕ್ಕಳು ಅಕಸ್ಮಾತ್ ಉತ್ತಮ ಅಂಕ ಪಡೆದು ಒಳ್ಳೆಯ ಕೋರ್ಸ್‍ಗಳಿಗೆ ಸೀಟ್ ಸಿಕ್ಕರೆ ಸಾವಿರಾರು ರೂಪಾಯಿಗಳಿಂದ ಲಕ್ಷಾಂತರ ರೂಪಾಯಿಗಳವರೆಗೆ ಮುಂಗಡವಾಗಿ ಶಾಲಾ ಕಾಲೇಜುಗಳ ಶುಲ್ಕ ಪಾವತಿಸಲು ಸಾಧ್ಯವಾಗದೆ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರಿ ಪದವಿ ಕಾಲೇಜು, ಸ್ನಾತಕೋತ್ತರ ಪದವಿ, ವಿಶ್ವವಿದ್ಯಾಲಯ ಗಳಲ್ಲಿಯೂ ಪೂರ್ಣ ಶುಲ್ಕ ಪಾವತಿಸಿ ಪ್ರವೇಶ ಪಡೆಯುವ0ತಹ ಕ್ರೂರ ಕಾನೂನು ಜಾರಿಗೆ ತರಲಾಗಿದೆ.

ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಎಂದು ಕಾನೂನು ಇದ್ದರೂ ಬೋಧನಾ ಶುಲ್ಕ ಹೊರತುಪಡಿಸಿ ಇತರೆ ಶುಲ್ಕಗಳೆಂದು ಸಾವಿರಾರು ರೂಪಾಯಿಗಳನ್ನು ಕಾಲೇಜ್‍ನವರು ವಿಧಿಸುವ ಕಡ್ಡಾಯವಾಗಿ ಕಟ್ಟಲೇ ಬೇಕಾಗಿದೆ.ಎಸ.ಸಿ.ಪಿ/ ಟಿ.ಎಸ್.ಪಿ ಹಣದಲ್ಲಿ ನೀಡುತ್ತಿದ್ದ ನರ್ಸಿಂಗ್ (ಜೆಎನ್‍ಎಂ) ಪ್ಯಾರಾಮೆಡಿಕಲ್ ತರಬೇತಿ, ಗಗನಸಖಿ ತರಬೇತಿ, ಎಸ್ ಸಿ/ಎಸ್ ಟಿ.ಬುಕ್ ಬ್ಯಾಂಕ್ (ಎಸ್ಬಿಎಸ್ಟಿ ಕಾಲೇಜ್ ಮಕ್ಕಳಿಗೆ ಏತರಿಸುತ್ತಿದ್ದಪಠ್ಯಪುಸ್ತಕಗಳಲೈಬ್ರರಿ) ಮುಂತಾದ ಅನೇಕ ಕಾರ್ಯಕ್ರಮಗಳನ್ನುಹಾಗೂ ವಿದೇಶಗಳಲ್ಲಿ ಉನ್ನತವ್ಯಾಸಂಗದ ಅವಕಾಶಗಳನ್ನು ನಿಲಕ್ಷಿಸುವ ಮೂಲಕ ಪ.ಜಾ/ಪವರ್ಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜೀವನವನ್ನುಗಾಡಾಂಧಕಾರದಲ್ಲಿಟ್ಟಿದೆ.

ಈ ಹಿಂದೆ ಇದ್ದಂತಹ ಆರ್.ಟಿ.ಇ. ಕಾಯ್ದೆಗೆ ಹೊಸ ರೀತಿಯ ಮ್ಯಾಪಿಂಗ್ ಮಾದರಿ ಅಳವಡಿಸುವ ಮೂಲಕ ಪ್ರತಿಷ್ಠಿತ ಶಾಲೆ /ಕಾನ್ವೆಂಟ್‍ಗಳಲ್ಲಿ ಎಲ್ಲ ಜಾತಿಯ ಬಡವರ ಮಕ್ಕಳಿಗೆ ಮೀಸಲಿದ್ದ 25% ಸೀಟುಗಳ ಪ್ರವೇಶವನ್ನು ತಪ್ಪಿಸುವ ಮೂಲಕ ಬಡವರ ಮಕ್ಕಳು ಪ್ರತಿಷ್ಠಿತ ಕಾನ್ವೆಂಟ್ ಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಪಡೆಯುವ ಅವಕಾಶ ತಪ್ಪಿಸಿದೆ. ಹಣವಂತರ ಮಕ್ಕಳಿಗೆ ಕಾನ್ವೆಂಟ್ ನಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಸಿಕ್ಕರೆ ಕೂಲಿ-ನಾಲಿ ಮಾಡಿ ಬದುಕುವ ಬಡವರ ಮಕ್ಕಳಿಗೆ ಸರ್ಕಾರಿ ಕನ್ನಡ ಮಾಧ್ಯಮ ಶಾಲೆ ಅನಿವಾರ್ಯ ಎಂಬಂತೆ ಮಾಡಿದೆ ಎಂದಿದ್ದಾರೆ.

ಪ.ಜಾತಿ/ಪ.ವರ್ಗದವರಿಗೆ ಶೈಕ್ಷಣಿಕ ಆದಾಯ ಮಿತಿಯನ್ನು 2.5 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸಬೇಕು ಆರ್ ಟಿ ಇ ಮಕ್ಕಳ ಪ್ರವೇಶಕ್ಕೆ ಹೊಸ ಮ್ಯಾಪಿಂಗ್ ಕಾಯ್ದೆಯನ್ನು ಈ ವರ್ಷದಿಂದ ರದ್ದುಪಡಿಸಿ 2023 -24 ನೇ ಶೈಕ್ಷಣಿಕ ವರ್ಷದಿಂದಲೇ ಹಳೆ ಮಾದರಿಯ ಮ್ಯಾಪಿಂಗ್ ಪ್ರಕಾರ ಆರ್.ಟಿ.ಇ.ಪ್ರವೇಶ ಆರಂಭಿಸಬೇಕು2013 ರಿಂದ 2018ರವರೆಗೆ ಜಾರಿಯಲ್ಲಿದ್ದ ರೀತಿಯಲ್ಲಿಯೇ ಖಾಸಗಿ ನರ್ಸಿಂಗ್ ಕಾಲೇಜುಗಳಲ್ಲಿ ಖಾಲಿ ಉಳಿದಂತಹ ಜಿಎನ್‍ಎಂ ನರ್ಸಿಂಗ್ ತರಬೇತಿ, ಪ್ಯಾರಾಮೆಡಿಕಲ್, ಬಿಎಸ್ಸಿನರ್ಸಿಂಗ್ ತರಬೇತಿಗೆ ಪ್ರವೇಶ ಪಡೆಯುವ ಎಸ್.ಸಿ/ಎಸ್.ಟಿ.ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕ ಮತ್ತು ಹಾಸ್ಟೆಲ್ ವಿದ್ಯಾರ್ಥಿ ವೇತನವನ್ನು ಎಸ್.ಸಿ.ಪಿ./ಟಿ.ಎಸ್.ಪಿ ಅನುದಾನದ ಮೂಲಕ ಸಂದಾಯವಾಗುವಂತೆ ಈ ಶೈಕ್ಷಣಿಕ ವರ್ಷವೇ ಆರಂಭಿಸಬೇಕುಬೆಲೆ ಏರಿಕೆಗೆ ತಕ್ಕಂತೆ ವಿದ್ಯಾರ್ಥಿ ವೇತನವನ್ನು ರೂ. 1600ಗಳಿಂದ ರೂ. 2500 ಗಳಿಗೆ ಹೆಚ್ಚಿಸಬೇಕು. ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಕಾಲೇಜುಗಳಲ್ಲಿ ಎಸ್ಪಿ /ಎಸ್ಟಿ ಬುಕ್ ಬ್ಯಾಂಕ್ (ಗ್ರಂಥಾಲಯ) ನಾಮಕಾವಸ್ಥೆಗಾಗಿಯಲ್ಲದೆ ಕಡ್ಡಾಯವಾಗಿ ಆರಂಭಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟಜಾತಿ ವರ್ಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕಗಳ ಖರೀದಿಗೆ ಕಡ್ಡಾಯವಾಗಿ ಹಣಮೀಸಲಿಡುವಂತೆ ಮಾಡುವುದು.

ಅಂಬೇಡ್ಕರ್ ಬರಹ ಮತ್ತು ಭಾಷಣಗಳ ಸಂಪುಟಗಳನ್ನು ಪುನರ್ ಮುದ್ರಿಸುವುದು. ವಿಶೇಷವಾಗಿ ಅಂಬೇಡ್ಕರ್ ರವರ“ಬುದ್ಧ ಮತ್ತು ಆತನ ಧಮ್ಮ ಕೃತಿಯ 11ನೇ ಸಂಪುಟದ ಒಂದು ಲಕ್ಷ ಪ್ರತಿಗಳನ್ನು ಮುದ್ರಿಸಬೇಕು ಜುಲೈ 7ನೇ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸುವ ಕರ್ನಾಟಕದ ಹೊಸ ಬಜೆಟ್‍ನಲ್ಲಿ ಪ.ಜಾತಿ/ಪ.ವರ್ಗಗಳ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ವಕೀಲರಾದ ಚಂದ್ರಪ್ಪ, ಹೋರಾಟಗಾರರಾದ ಹುಲ್ಲೂರು ಕುಮಾರ್, ತಿಪ್ಪೇಸ್ವಾಮಿ, ಹನುಮಂತಪ್ಪ, ಕರಿಯಪ್ಪ, ಬೀಸನಹಳ್ಳಿ ಜಯ್ಯಪ್ಪ, ಕುಮಾರಪ್ಪ, ಶೇಷಣ್ಣ ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!