Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಬ್ಬಬ್ಬಾ.. ಯಶ್ ಬಳಿ ಎಷ್ಟು ಕಾರುಗಳಿವೆ ಗೊತ್ತಾ..? ಅವುಗಳು ಬೆಲೆ ಕೇಳಿದ್ರೆ ಶಾಕ್ ಆಗ್ಬೇಕು..!

Facebook
Twitter
Telegram
WhatsApp

 

ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾಗಾಗಿ ಇಡೀ ಪ್ಯಾನ್ ಇಂಡಿಯಾ ಕಾಯ್ತಾ ಇದೆ. ಯಶ್ 19 ಯಾವಾಗ ಘೋಷಣೆಯಾಗುತ್ತೆ ಎಂಬ ಕುತೂಹಲವಿದೆ. ಅಷ್ಟೆ ಯಾಕೆ ಹೋದಲ್ಲಿ.. ಬಂದಲ್ಲಿ ಅಭಿಮಾನಿಗಳ ಪ್ರಶ್ನೆ ಇದೆ ಆಗಿದೆ. ಮೂಲಗಳ ಪ್ರಕಾರ ಇಷ್ಟರಲ್ಲಿಯೇ ಯಶ್ 19 ಅಪ್ಡೆಟ್ ಸಿಗುವ ಎಲ್ಲಾ ಸಾಧ್ಯತೆಗಳು ಇದೆ. ಇದರ ನಡುವೆ ಹೊಸ ಕಾರು ಖರೀದಿಸಿ, ಮಕ್ಕಳ ಸಮೇತ ಯಶ್ ದಂಪತಿ ಟ್ರಿಪ್ ಹೊರಟಿದ್ದಾರೆ.

ಸದ್ಯಕ್ಕೆ ಯಶ್ ಕೋಟಿ ಕೋಟಿ ರೂಪಾಯಿ ಮೌಲ್ಯದ ಕಾರು ಖರೀದಿ ಮಾಡಿದ್ದಾರೆ. ಸುಮಾರು 5 ಕೋಟಿ ಬೆಲೆಯ ರೇಂಜ್ ರೋವರ್ ಸ್ಪೆಷಲ್ ಕಾರೊಂದನ್ನು ಖರೀದಿಸಿದ್ದಾರೆ. ಹೊಸ ಕಾರು ಖರೀದಿಸಿದ ಖುಷಿಯಲ್ಲಿ ಮಕ್ಕಳು, ಪತ್ನಿ ಜೊತೆಗೆ ಒಂದು ರೌಂಡ್ ಹೊಡೆದಿದ್ದಾರೆ.

ಯಶ್ ಮೊದಲ ಕಾರು ಖರೀದಿ ಮಾಡಿದ್ದು, ಡ್ರಾಮಾ ಸಿನಿಮಾ ಬಳಿಕ. ಅವರ ಸಹೋದರಿ ಗಿಫ್ಟ್ ಮಾಡಿದ ಪಜೆರೋ ಸ್ಪೋರ್ಟ್ಸ್ ಕಾರು ಅವರ ಮೊದಲ ಕಾರಾಗಿತ್ತು. ಆದರೆ ಇದೀಗ ಒಂದಲ್ಲ ಎರಡಲ್ಲ ಬರೋಬ್ಬರಿ ಹತ್ತು ಕಾರಿನ ಒಡೆಯ ರಾಕಿಬಾಯ್. ಮರ್ಸಿಡೆಸ್ ಕಂಪನಿಯದ್ದೇ ಮೂರು ಕಾರುಗಳಿವೆ. ಟೊಯೊಟಾ ವೆಲ್ ಫೇರ್, ಫಾರ್ಚೂನಾರ್, ಇನ್ನೋವಾ ಸೇರಿದಂತೆ ಹಲವು ಕಂಪನಿಗಳ ಕಾರುಗಳ ರಾಕಿಬಾಯ್ ಗ್ಯಾರೇಜ್ ನಲ್ಲಿ ನಿಂತಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!