ಸುದ್ದಿಒನ್, ಚಿತ್ರದುರ್ಗ, (ಜೂ.15) : ಹಿರಿಯೂರು ಉಪವಿಭಾಗ ಪೊಲೀಸರಿಂದ ಅಂತರ್ ರಾಜ್ಯ ಗೋಸಾಗಾಣಿಕೆ ಮಾಡುತ್ತಿದ್ದ 8 ಮಂದಿ ಆರೋಪಿಗಳನ್ನು ಬಂಧಿಸಿ ಅವರಿಂದ 1 ಲಕ್ಷ 55 ಸಾವಿರ ನಗದು ಹಣ ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಿತ್ರದುರ್ಗ ಜಿಲ್ಲೆಯಾದ್ಯಂತ ಹಸುಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಿರಿಯೂರು, ಹೊಳಲ್ಕೆರೆ ಮತ್ತು ಹೊಸದುರ್ಗ
ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ದೂರುಗಳಿಗೆ ಸಂಬಂಧಿಸಿದಂತೆ ಹಿರಿಯೂರು ಉಪವಿಭಾಗ ಪೊಲೀಸರು ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರು, ಹರಿಯಾಣ ಮತ್ತು ದೆಹಲಿ ಮೂಲದವರಾಗಿದ್ದು, ಮಹಮ್ಮದ್ ಆಸೀಫ್, ತಾಲೀಮ್, ಜಾವೀದ್, ತೌಫೀಕ್, ಸಹಬೂಬ್, ಸಲೀಂ, ಲಿಯಾಖತ್ ಮತ್ತು ಮಹಮೂದೀನ್ ಎಂದು ಗುರುತಿಸಲಾಗಿದೆ.
ಕಳ್ಳತನ ಮಾಡಿದ ಹಸುಗಳನ್ನು ಮಾರಾಟ ಮಾಡಿ ಇಟ್ಟುಕೊಂಡಿದ್ದ ಒಟ್ಟು 1,55,000 ರೂಪಾಯಿ ನಗದು ಹಣ, ಒಂದು ಮಿನಿ ಲಾರಿ, ಒಂದು ಹೊಂಡ ಆಕ್ಟಿವ್ ಸ್ಕೂಟರ್ ವಾಹನವನ್ನು
ವಶಪಡಿಸಿಕೊಂಡಿರುತ್ತಾರೆ.
ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ
ಹಿರಿಯೂರು ಉಪವಿಭಾಗ ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರು ಕೆ. ಪರುಶುರಾಮ ಅವರು ಶ್ಲಾಘಿಸಿರುತ್ತಾರೆ.