ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, (ಜೂ.15) : ಇಲ್ಲಿನ ಎ.ಪಿ.ಎಂ.ಸಿ.ಯಲ್ಲಿರುವ ವಿಶ್ವಬಂಧು ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಜಿ.ಬಿ.ತೀರ್ಥಪ್ಪ, ಉಪಾಧ್ಯಕ್ಷರಾಗಿ ಟಿ.ನಾಗರಾಜ್ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜಿ.ಬಿ.ತೀರ್ಥಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಟಿ.ನಾಗರಾಜ್ ಇವರುಗಳು ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿ ಲಕ್ಷ್ಮಿರವರು ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ಜಿ.ಬಿ.ತೀರ್ಥಪ್ಪ ಮಾತನಾಡಿ ಎಲ್ಲಾ ನಿರ್ದೇಶಕರುಗಳು ನನ್ನ ಮೇಲೆ ಭರವಸೆಯಿಟ್ಟು ಅವಿರೋಧವಾಗಿ ಆಯ್ಕೆ ಮಾಡಿದ್ದೀರಿ. ಬದಲಾವಣೆಗೆ ತಕ್ಕಂತ ಹೊಸತನವನ್ನು ಕಂಡುಕೊಂಡು ವಿಶ್ವಬಂಧು ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಇನ್ನು ಹೆಚ್ಚು ವಿಸ್ತರಿಸಿ ಸಾಲ ನೀಡುವುದರ ಜೊತೆಗೆ ವಸೂಲಾತಿಯನ್ನು ಮಾಡಿ ಬರುವ ಲಾಭದಿಂದ ಅಭಿವೃದ್ದಿಪಡಿಸಬೇಕಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಕೋರಿದರು.
ಮಾಜಿ ಅಧ್ಯಕ್ಷ ಹೆಚ್.ಎಂ.ದ್ಯಾಮಣ್ಣ ಮಾತನಾಡುತ್ತ ಐದು ವರ್ಷಗಳ ಅವಧಿಗೆ ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದೇವೆ. ಎಲ್ಲರ ಸಲಹೆ, ಸೂಚನೆ, ಬೆಂಬಲ ಪಡೆದು ವಿಶ್ವಬಂಧು ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಇನ್ನು ಬಲಪಡಿಸಬೇಕಿದೆ. ಸಾಲ ಉತ್ತಮ ರೀತಿಯಲ್ಲಿ ವಸೂಲಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಲಾಭ ಪಡೆಯುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದು ಹೇಳಿದರು.
ನಿರ್ದೇಶಕರುಗಳಾದ ಜಿ.ಬಿ.ಶೇಖರಪ್ಪ, ಹೆಚ್.ಎಸ್.ಶಿವಪ್ರಸಾದ್, ಸಿ.ಮಹೇಶ್ವರಪ್ಪ, ದಿವಾಕರ್ ಸಂಕೋಳ್, ಜಿ.ಎನ್.ಶಿವಕುಮಾರ್, ಶ್ರೀಮತಿ ಎಸ್.ಶೋಭಾವತಿ, ಜಿ.ಎನ್.ಶಿವಕುಮಾರ್, ಟಿ.ರುದ್ರಪ್ಪ, ಓಬಳೇಶಪ್ಪ ಚುನಾವಣೆಯಲ್ಲಿ ಹಾಜರಿದ್ದರು.