ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಹಲವು ಯೋಜನೆಗಳು ಬರಬೇಕಿದೆ. ಆದರೆ ಕೆಲವೊಮ್ಮೆ ಆ ಕಡೆಯಿಂದ ಹಣ ಬರುವುದು ಕಷ್ಟ ಸಾಧ್ಯವೇ ಇರುತ್ತದೆ. ಇದೀಗ ಕೇಂದ್ರದಿಂದ ರಾಜ್ಯಕ್ಕೆ ಆಗಬೇಕಾದ ಯೋಜನೆಗಳ ವಿಚಾರವಾಗಿಯೇ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಭೇಟಿಗೆ ಹೊರಟಿದ್ದಾರೆ.
ನಿನ್ನೆಯಷ್ಟೇ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರದಿಂದ ಬೆಂಬಲ ಸಿಕ್ತಾ ಇಲ್ಲ ಎಂದು ಹೇಳಿದ್ದರು. ಇದೇ ವಿಚಾರಕ್ಕೆ ಇದೀಗ ಮೋದಿಯವರ ಭೇಟಿ ಮಾಡಲು ಸಿದ್ದರಾಮಯ್ಯ ಅವರು ಅವಕಾಶ ಕೇಳಿದ್ದಾರೆ. ಇದೇ ತಿಂಗಳ 21ಕ್ಕೆ ಭೇಟಿಗೆ ಅವಕಾಶ ಕೇಳಿದ್ದಾರೆ.
ಅದರ ಜೊತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರನ್ನು ಭೇಟಿ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಪ್ರಧಾನಿ ಮೋದಿಯವರ ಭೇಟಿಗೆ ಅವಕಾಶ ಸಿಕ್ಕರೆ, ಅಕ್ಕಿ, ಜಿಎಸ್ಟಿ ವುಚಾರವಾಗಿ ಚರ್ಚೆ ನಡೆಸಲಿದ್ದಾರೆ. ಹೀಗಾವಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಪ್ರಧಾನಿ ಮೋದಿಯವರು ಸಮಯ ನೀಡುತ್ತಾರಾ ಹೇಗೆ ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ.