ಸಮಾಜಕ್ಕೆ ಏನಾದರೂ ಸಂದೇಶ ನೀಡಬೇಕೆಂಬ ಮಹದಾಸೆಯಿಂದ ಚಿತ್ರರಂಗ ಪ್ರವೇಶಿಸಿದೆ : ಕೆ.ಮಂಜುನಾಥ ನಾಯಕ್

1 Min Read

ಚಿತ್ರದುರ್ಗ : ಶಿಕ್ಷಕನಾಗಿ ನಿವೃತ್ತಿಯಾದ ನಂತರ ಕುಟುಂಬದ ಜೊತೆ ನೆಮ್ಮದಿಯಾಗಿ ಕಾಲ ಕಳೆಯಬಹುದಾಗಿತ್ತು. ಆದರೆ ಸಮಾಜಕ್ಕೆ ಏನಾದರೂ ಸಂದೇಶ ನೀಡಬೇಕೆಂಬ ಮಹದಾಸೆಯಿಂದ ಚಿತ್ರರಂಗಕ್ಕೆ ಪ್ರವೇಶಿಸಿದೆ ಎಂದು ಅರಳಿದ ಹೂವುಗಳು ಚಿತ್ರದ ನಾಯಕ ನಟ, ನಿರ್ಮಾಪಕ ಕೆ.ಮಂಜುನಾಥ ನಾಯಕ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಇಲ್ಲಿನ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಳಿದ ಹೂವುಗಳು ಚಿತ್ರದಲ್ಲಿ 63 ಸಂದೇಶಗಳಿವೆ. ನಾರಿ ಶಕ್ತಿ, ಮಹಿಳಾ ಸಬಲೀಕರಣ, ಶಿಕ್ಷಣ, ಥ್ರಿಬಲ್ ರೈಡಿಂಗ್‌ನಿಂದಾಗುವ ಅನಾಹುತಗಳು, ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಜೀವಕ್ಕೆ ಅಪಾಯವಾಗುವ ಸನ್ನಿವೇಶಗಳು ಚಿತ್ರದಲ್ಲಿದೆ ಎಂದರು.

ನನ್ನ ಮೊದಲ ಚಿತ್ರ ಸೀತಮ್ಮನ ಮಗ ಯಶಸ್ವಿಯಾಗಿದ್ದರಿಂದ ಅರಳಿದ ಹೂವುಗಳು ಚಿತ್ರದಲ್ಲಿ ನಟಿಸಿದ್ದೇನೆ. ಚಿತ್ರದುರ್ಗ ಹಾಗೂ ಸುತ್ತಮುತ್ತಲಿನಲ್ಲಿ ಚಿತ್ರೀಕರಣವಾಗಿದೆ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರ ವೀಕ್ಷಿಸಿ ಕಲೆಗೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು.

ಚಿತ್ರದ ನಿರ್ದೇಶಕ ಪುರುಷೋತ್ತಮ್ ಮಾತನಾಡಿ ಜೂ.16 ರಿಂದ ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರದುರ್ಗದ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಸಮಾಜಕ್ಕೆ ಉತ್ತಮ ಸಂದೇಶ ಕೊಡಬೇಕೆಂಬ ಗುರಿಯಿಟ್ಟುಕೊಂಡು ಕೆ.ಮಂಜುನಾಥನಾಯಕ್ ಅರಳಿದ ಹೂವುಗಳು ಚಿತ್ರ ನಿರ್ಮಿಸಿ ನಟಿಸಿದ್ದಾರೆ. ನಮ್ಮ ತಂಡದ ಎಲ್ಲರೂ ಸೇರಿಕೊಂಡು ಚಿತ್ರಕ್ಕೆ ಜೀವಕಳೆ ತುಂಬಿದ್ದೇವೆ. ಪ್ರೇಕ್ಷಕರ ಬೆಂಬಲವೇ ನಮಗೆ ಶ್ರೀರಕ್ಷೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ರಾಜನಾಯ್ಕ ಮಾತನಾಡಿ ಅರಳಿದ ಹೂವುಗಳು ಚಿತ್ರ ನೂರು ದಿನ ಯಶಸ್ವಿಯಾಗಿ ಪ್ರದರ್ಶನಗೊಳ್ಳಲಿ ಎಂದು ಶುಭ ಹಾರೈಸಿದರು.

ಸಹ ನಿರ್ದೇಶಕ ದೀಪು, ನಟಿ ಧನಲಕ್ಷ್ಮೀ ಎಂ.ಸುಮಿತ್‌ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *