ನಿನ್ನೆಯಷ್ಟೇ ಕೇಂದ್ರ ಸರ್ಕಾರ ರಾಜ್ಯಗಳಿಗೆ ಜಿಎಸ್ಟಿ ಹಣವನ್ನು ರಿಲೀಸ್ ಮಾಡಿದೆ. ಅದು ಒಂದು ತಿಂಗಳ ಹಣವನ್ನು ಮುಂಗಡವಾಗಿ ನೀಡಲಾಗಿದೆ. ಅಂದ್ರೆ ಡಬ್ಬಲ್ ಜಿಎಸ್ಟಿಯನ್ನು ನೀಡಿದೆ. ಆದರೆ ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ.
ಈ ಮೊದಲಿನಿಂದಲೂ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂಬ ಆರೋಪವೇ ಇದೆ. ಇದರ ಮಧ್ಯೆ ಬೇರೆಲ್ಲಾ ರಾಜ್ಯಗಳಿಗೂ ಹೆಚ್ಚಿನ ಜಿಎಸ್ಟಿ ಹಣವನ್ನು ನೀಡಿ, ರಾಜ್ಯಕ್ಕೆ ಮಾತ್ರ ಕಡಿಮೆ ಹಣ ನೀಡಿರುವುದು ಕನ್ನಡಿಗರ ಬೇಸರಕ್ಕೆ ಕಾರಣವಾಗಿದೆ. ಉತ್ತರಪ್ರದೇಶ, ಬಿಹಾರ ಹಾಗೂ ಮಧ್ಯಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳಿಗೆ ಹೆಚ್ಚಿನ ಜಿಎಸ್ಟಿ ಹಣವನ್ನು ಬಿಡಿಗಡೆ ಮಾಡಿದೆ.
ಉತ್ತರ ಪ್ರದೇಶಕ್ಕೆ 21,218 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಬಿಹಾರಕ್ಕೆ 11, 897 ಕೋಟಿ, ಮಧ್ಯಪ್ರದೇಶಕ್ಕೆ 9,285 ಕೋಟಿ ಬಿಡಿಗಡೆ ಮಾಡಿದೆ. ಆದರೆ ರಾಜ್ಯಕ್ಕೆ 4,314 ಕೋಟಿ ಹಣವನ್ನಷ್ಟೇ ಬಿಡುಗಡೆ ಮಾಡಿದೆ. ಇದು ಎಲ್ಲರ ಕೋಪಕ್ಕೆ ಕಾರಣವಾಗಿದೆ. ಇದೀಗ ಕೇಂದ್ರ ಸರ್ಕಾರದಿಂದ ಜಿಎಸ್ಟಿ ಹಣ ಬಂದಿದೆ ಎಂಬುದರ ಕುರಿತಾಗಿ ಬಿಜೆಪಿ ಮಾಡಿದ್ದ ಟ್ವೀಟ್ ಗೆ ನೆಟ್ಟಿಗರು ಕಮೆಂಟ್ ಹಾಕುತ್ತಿದ್ದಾರೆ.