ರಾಮನಗರ: ಕಳೆದ ಬಾರಿ ಟೋಲ್ ಹೆಚ್ಚಳ ಮಾಡಿದ್ದಕ್ಕೇನೆ ಜನಾಕ್ರೋಶಗೊಂಡಿದ್ದರು. ಬಳಿಕ ಯಥಾಸ್ಥಿತಿಯಲ್ಲೊಯೇ ಟೋಲ್ ಹಣ ಮುಂದುವರೆದಿತ್ತು. ಮೊದಲೇ ಟೋಲ್ ಹೆಚ್ಚಿದೆ. ಅದರ ಜೊತೆಗೆ ಇನ್ನು ಹೆಚ್ಚಾಗಿ ತೆಗೆದುಕೊಂಡರೆ ಹೇಗೆ ಎಂಬುದು ವಾಹನ ಸವಾರರ ಬೇಸರ. ಇದೀಗ ಮತ್ತೆ ಟೋಲ್ ದರವನ್ನು ಹೆಚ್ಚಳ ಮಾಡಲಾಗಿದೆ. ಹೆದ್ದಾರಿ
ಹೆದ್ದಾರಿ ಪ್ರಾಧಿಕಾರ ಟೋಲ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಜೂನ್ 1 ರಿಂದ ಅನ್ಚಯವಾಗುವಂತೆ ಹೆಚ್ಚಳ ಮಾಡಲಾಗಿದೆ. ಹೆದ್ದಾರಿ ಶುರುವಾದ ಎರಡೇ ವಾರದಲ್ಲಿ ಎರಡು ಬಾರಿ ಪರಿಷ್ಕರಣೆ ಮಾಡಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
ಕಾರು, ವ್ಯಾನ್, ಜೀಪ್ ಗಳಿಗೆ ಒನ್ ವೇಗೆ ಸುಮಾರು 135 ರಿಂದ 165 ರೂಪಾಯಿ ಹೆಚ್ಚಳ ಮಾಡಲಾಗಿದೆ. ಲಘು ವಾಹನಗಳಿಗೂ 220ರಿಂದ 270ರ ತನಕ ಹೆಚ್ಚಳ ಮಾಡಲಾಗಿದೆ.