ಸುದ್ದಿಒನ್, ಚಿತ್ರದುರ್ಗ, ಜೂ.11 : ಎಲ್ಲೆಡೆ ವಿದ್ಯುತ್ ದರ ಹೆಚ್ಚಳದ ಬಗ್ಗೆ ಚರ್ಚೆ ಜೋರಾಗಿದೆ. ಈ ವಿಚಾರವಾಗಿ ತಾಲ್ಲೂಕಿನ ಹುಣುಸೇಕಟ್ಟೆ ಗ್ರಾಮದಲ್ಲಿ ಯೂನಿಟ್‍ಗೆ ರೂ.7.00 ದರ ವಿಧಿಸಿದರೆ ವಿದ್ಯುತ್ ಬಿಲ್ಲು ಸಂಪೂರ್ಣವಾಗಿ ಕಟ್ಟುವುದಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುರುವನೂರು ಹೋಬಳಿ ಬೆ.ವಿ.ಕಂ ಎಸ್.ಓ. ಗಿರೀಶ್‍ರೆಡ್ಡಿ ಹಾಗೂ ಲೈನ್‍ಮ್ಯಾನ್‍ಗಳನ್ನು ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳಲು ಬಂದಾಗ ವಿದ್ಯುತ್ ಬಿಲ್ಲು ಕಟ್ಟುವುದಿಲ್ಲವೆಂದು ತಿಳಿಸಿ, ವಾಪಾಸ್ಸು ಕಳುಹಿಸಿದ ಘಟನೆ ನಡೆದಿದೆ.
ವಿದ್ಯುತ್ ಪ್ರತಿ ಯೂನಿಟ್‍ಗೆ ರೂ.4.05 ಯಿಂದ ರೂ.4.75 ಗೆ ಹೆಚ್ಚಳವಾಗಿದೆ. ಆದರೆ ಈಗಿನ ದರ ಪ್ರತಿ ಯೂನಿಟ್‍ಗೆ ರೂ.7.00 ಆಗಿದ್ದು, (ಸುಮಾರು 2 ರೂ 28 ಪೈ.) ಹೆಚ್ಚಳವಾಗಿರುತ್ತದೆ. ಮೀಟರ್ ಬಾಡಿಗೆ ರೂ.110 ಆಗಿದ್ದು, ಹಳೆಯ ಮೀಟರ್ ಬಾಡಿಗೆ ರೂ.85 ಇತ್ತು, ಇತರೆ ಶುಲ್ಕ ಹಣ ಹಾಕಿರುವುದರನ್ನು ಕಡಿತಗೊಳಿಸಿ, ವಿದ್ಯುತ್ ಬಿಲ್ಲು ಯೂನಿಟ್‍ಗೆ ರೂ.4.05 ರಂತೆ ವಿದ್ಯುತ್ ಶುಲ್ಕವನ್ನು ನಿಗಧಿಪಡಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗ್ರಾಮೀಣ ಉಪವಿಭಾಗ, ತುರುವವನೂರು ಇವರಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಪಾಲಯ್ಯ, ಗ್ರಾ.ಪಂ. ಮಾಜಿ ಸದಸ್ಯರು ಗುರುಮೂರ್ತಿ, ಗ್ರಾ.ಪಂ. ಸದಸ್ಯರು ಮಹಂತೇಶ್, ಕೋಲಾರದ ನಾಗರಾಜ್, ಪೂಜಾರಿ ಮಾರುತಿ, ರಂಗೇಗೌಡ ಕೆ.ಎಂ.ಕಾಂತರಾಜ್ ಹಾಗೂ ಇನ್ನು ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.