ಬೆಂಗಳೂರು: ಅಂತೂ ಇಂತೂ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಇಂದಿನಿಂದ ಜಾರಿಯಾಗಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿದ್ದಾರೆ. ಜೊತೆಗೆ ಶಕ್ತಿ ಯೋಜನೆಯ ಲಾಂಛನವನ್ನು ರಿಲೀಸ್ ಮಾಡಿದೆ.
ಮಹಿಳೆ, ಶಕ್ತಿ ಎಂಬ ಹೆಸರು, ಬಸ್ ಚಿತ್ರ ಇರುವಂತ ಲೋಗೋ ಬಿಡುಗಡೆ ಮಾಡಿದೆ. ಮಹಿಳಾ ಸಬಲೀಕರಣದತ್ತ ಎಂಬ ಟ್ಯಾಗ್ ಲೈನ್ ಈ ಲೋಗೋದಲ್ಲಿದೆ. ಸ್ಮಾರ್ಟ್ ಕಾರ್ಡ್ ಯೋಜನೆಯ ಮಾದರಿಯನ್ನು ಇಂದೇ ರಿಲೀಸ್ ಮಾಡಿದೆ. ಸರ್ಕಾರದ ಎಲ್ಲಾ ಬಸ್ ಗಳ ಮೇಲೆ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಎಂದು ಅಂಟಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಇಂದು ಐದು ಜನ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ಕೂಡ ನೀಡಿದ್ದಾರೆ. ಇಂದು ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣ ಆರಂಭವಾಗಿದ್ದು, ಸ್ಡಿಕರ್ ಅಂಟಿಸಿದ ಬಸ್ ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದು. ತಮ್ಮಲ್ಲಿರುವ ಆಧಾರ್ ಕಾರ್ಡ್ ತೋರಿಸಿ, ಪ್ರಯಾಣ ಮಾಡಬಹುದು. ಕರ್ನಾಟಕದ ಮಹಿಳೆಯರಿಗೆ ಮಾತ್ರ ಈ ಸೇವೆ ಲಭ್ಯವಿದೆ.