ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ವಿದ್ಯುತ್ ಉಚಿತ ನೀಡುವುದಾಗಿ ಭರವಸೆ ನೀಡಿತ್ತು. ಅದರಂತೆ ಅರ್ಜಿ ಸಲ್ಲಿಸಲು ಸಮಯವನ್ನು ಕೂಡ ನೀಡಿದೆ. ಆದರೆ ಇದರ ಮಧ್ಯೆ ವಿದ್ಯುತ್ ಬಿಲ್ ಇದ್ದಕ್ಕಿದ್ದ ಹಾಗೇ ಏರಿಕೆ ಕಂಡಿದೆ. ಅದು ಒಂದು ರೂಪಾಯಿ ಅಲ್ಲ ಎರಡು ರೂಪಾಯಿ ಅಲ್ಲ.. ಬರೋಬ್ಬರಿ ಅರ್ಧಕ್ಕೆ ಅರ್ಧ.
ಹೌದು ಈ ಬಾರಿ ವಿದ್ಯುತ್ ಬಿಲ್ ಬಂದಿರುವುದನ್ನು ಕಂಡು ಜನ ಕಂಗಲಾಗಿದ್ದಾರೆ. ಬಳಸಿರುವ ವಿದ್ಯುತ್ ಬಿಲ್ ನ ಜೊತೆಗೆ ಡಬ್ಬಲ್ ಬಿಲ್ ಬಂದಿದೆ. ಅದಕ್ಕೆ ಬಾಕಿ ಎಂದು ಮೆನ್ಶನ್ ಮಾಡಲಾಗಿದೆ. ಕಳೆದ ತಿಂಗಳ ಬಿಲ್ ಗೂ ಈ ತಿಂಗಳ ಬಿಲ್ ಗೂ ಸಾಕಷ್ಡು ವ್ಯತ್ಯಾಸವಿದ್ದು, ಡಬ್ಬಲ್ ಬಿಲ್ ಆಗಿದೆ.
ಏಪ್ರಿಲ್ ತಿಂಗಳಿನಲ್ಲಿಯೇ ವಿದ್ಯುತ್ ಬಿಲ್ ಏರಿಕೆ ಮಾಡಲು KERC ತೀರ್ಮಾನ ಮಾಡಿತ್ತು. ಆದರೆ ಚುನಾವಣೆ ಇದ್ದ ಕಾರಣ ಅದನ್ನು ತಡೆ ಹಿಡಿಯಲಾಗಿತ್ತು. ಹೊಸ ಸರ್ಕಾರ ಬಂದ ತಕ್ಷಣವೇ ಬೆಲೆ ಏರಿಕೆ ಮಾಡಿದೆ. ಇದರಿಂದ ಜನ ಆಕ್ರೋಶ ಹೊರಹಾಕಿದ್ದಾರೆ.