ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭರವಸೆ ನೀಡಿದ್ದ ಐದು ಗ್ಯಾರಂಟಿಗಳು ಜಾರಿಗೆ ತಂದಿದೆ. ಆದರೆ ಅನ್ನಭಾಗ್ಯ ಯೋಜನೆಯೊಂದನ್ನು ಬಿಟ್ಟು ಇನ್ನುಳಿದ ನಾಲ್ಕು ಯೋಜನೆಗಳಿಗೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
ಮೊದಲನೇಯದಾಗಿ ವಿದ್ಯುತ್ ಯಾರಿಗೆಲ್ಲಾ ಫ್ರೀ ಸಿಗುತ್ತೆ ಎಂಬುದನ್ನು ನೋಡುವುದಾದರೆ, ಬಾಡಿಗೆದಾರರಿಗೂ ವಿದ್ಯುತ್ ಉಚಿತ ಸಿಗಲಿದೆ. ಆದರೆ ಒಂದೇ ಆರ್ ಆರ್ ನಂಬರ್ ಇರಬೇಕಾಗುತ್ತದೆ. ಬಾಡಿಗೆದಾರರೂ ಕರಾರು ಪತ್ರ, ವೋಟರ್ ಐಡಿಯನ್ನು ಅಪ್ಲೋಡ್ ಮಾಡಬಹುದು. ಸೇವಾ ಸಿಂಧುವಿನಲ್ಲಿ ಅರ್ಜಿ ಹಾಕಬೇಕಾಗಿದೆ.
ಇನ್ನು ಗೃಹಲಕ್ಷ್ಮೀ ಯೋಜನೆಯಡಿ 2 ಸಾವಿರ ಹಣ ಪಡೆಯಬೇಕಾದರೆ ಎಪಿಎಲ್, ಬಿಪಿಎಲ್ ಕಾರ್ಡ್ ಇರಲೇಬೇಕು. ಅದರಲ್ಲಿ ಮನೆಯ ಯಜಮಾನಿ ಯಾರೆಂದು ನಮೂದಾಗಿರುತ್ತೋ ಅವರಿಗೆ ಸಿಗುತ್ತದೆ. ಜೂನ್ 15 ರಿಂದ ಜುಲೈ 15ರ ತನಕ ಅರ್ಜಿ ಸಲ್ಲಿಕೆ ಮಾಡಬೇಕಾಗಿದೆ. ಜಿಎಸ್ಟಿ ರಿಟರ್ನ್ ಸಲ್ಲಿಸುವವರಿಗೆ ಈ ಯೋಜನೆ ಸಿಗುವುದಿಲ್ಲ.
ಇನ್ನು ಮಹಿಳೆಯರಿಗೆ ಉಚಿತ ಪ್ರಯಾಣ ಶಕ್ತಿ ಯೋಜನೆಯಡಿ ನೀಡಲಾಗಿದೆ. ಲಿಂಗತ್ವ ಬದಲಾವಣೆಯಾದ ಅಲ್ಪಸಂಖ್ಯಾತರಿಗೂ ಇದು ಲಭ್ಯವಿರುವ ಯೋಜನೆಯಾಗಿದೆ. ಜೂನ್ 11 ರಿಂದ ರಾಜ್ಯದೊಳಗೆ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ.
ಇನ್ನು ಪದವಿದರರಿಗೆ 3 ಸಾವಿರ, ಡಿಪ್ಲೊಮಾ ಮಾಡಿರುವವರಿಗೆ 1,500 ಸಾವಿರ ನೀಡಲಾಗುತ್ತದೆ. ಶಿಕ್ಷಣ ಪೂರೈಸಿ 6 ತಿಂಗಳ ತನಕ ಕೆಲಸ ಇಲ್ಲದೆ ಇದ್ದರೆ ಭತ್ಯೆ ನೀಡಲಾಗುತ್ತದೆ. ಕನ್ನಡಿಗರು ಮಾತ್ರ ಈ ಯುವನಿಧಿ ಯೋಜನೆಗೆ ಅರ್ಹರಾಗಿರುತ್ತಾರೆ. ಇದಕ್ಕೂ ಕೂಡ ಸೇವಾ ಸಿಂಧು ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದೆ.