ದೊಡ್ಮನೆ ಕುಡಿ ವಿನಯ್ ರಾಜ್ಕುಮಾರ್ ಈಗಾಗಲೇ ಕೆಲ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಆದರೆ ಗ್ರಾಮಾಯಣ ಎಂಬ ಸಿನಿಮಾ ಮಾತ್ರ ಅದೇಕೋ ಅರ್ಧದಲ್ಲಿಯೇ ನಿಂತು ಹೋಗಿತ್ತು. ಒಂದೊಂದೆ ತೊಡಕುಗಳು ಸಿನಿಮಾಗೆ ಕಾಡುತ್ತಿತ್ತು. ಇದೀಗ ಎಲ್ಲಾ ತೊಡಕುಗಳು ಮೀರಿ ಮತ್ತೆ ಸಿನಿಮಾ ಸೆಟ್ಟೇರುತ್ತಿದೆ.
ಗುರುವಾರ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಗಣ್ಯಾತೀಗಣ್ಯರು ಭಾಗವಹಿಸಿಲಿದ್ದಾರೆ. ವಿಶೇಷವಾಗಿ ಡಿಸಿಎಂ ಡಿಕೆ ಶಿವಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್, ಡಾಲಿ ಧನಂಜಯ್, ಮುರುಳಿ ಸೇರಿದಂತೆ ಹಲವರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ.
ಗ್ರಾಮಾಯಣ ಸಿನಿಮಾಗೆ 2018ರಲ್ಲಿಯೇ ಚಾಲನೆ ಸಿಕ್ಕಿತ್ತು. ಆದರೆ ಆ ಸಮಯದಲ್ಲಿ ಕೊರೊನಾ ಹಾವಳಿ ಶುರುವಾಗಿತ್ತು. ಹೀಗಾಗಿ ಶೂಟಿಂಗ್ ಕೂಡ ಸ್ಥಗಿತಗೊಂಡಿತ್ತು. ಇದರ ಜೊತೆಗೆ ಸಿನಿಮಾ ನಿರ್ಮಾಪಕರಾದ ಮೂರ್ತಿ ಅವರು 2020ರಲ್ಲಿ ಕೊನೆಯುಸಿರೆಳೆದಿದ್ದರು. ಹೀಗಾಗಿ ಸಿನಿಮಾ ಇಲ್ಲಿಗೆ ನಿಂತೆ ಹೋಯ್ತು ಎನ್ನುವಾಗ್ಲೇ ಮನೋಹರ್ ನಾಯ್ಡು ಹಾಗೂ ಕೆಪಿ ಶ್ರೀಕಾಂತ್ ಸೇರಿ ಚಿತ್ರಕ್ಕೆ ಮರುಜೀವ ನೀಡಿದ್ದಾರೆ. ಈಗಾಗಲೇ ಸಿನಿಮಾದ 25 ಪರ್ಸೆಂಟ್ ಮುಹೂರ್ತ ನಡೆದಿದೆ. ಆದರೂ ಅದನ್ನೆಲ್ಲಾ ಬಿಟ್ಟು ಮತ್ತೆ ಹೊಸದಾಗಿಯೇ ಶೂಟಿಂಗ್ ಶುರು ಮಾಡುತ್ತಿದೆ ಚಿತ್ರತಂಡ.