ಮೋಕಾ: ಸಮುದಾಯ ಅರೋಗ್ಯ ಕೇಂದ್ರದ ವತಿಯಿಂದ ಆಯೋಜಿಸಿದ ವಿನೂತನವಾದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಡಾ. ಭಾರತಿರವರು ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ದಂತ ವೈದ್ಯ ಡಾ. ಅರ್ಜುಮುನ್ನಿಸಾ ರವರು ಮಾತನಾಡಿ ಇಂದಿನ ಘೋಷಣ ವಾಕ್ಯವಾದ ‘ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವುದು’ ತಿಳಿಸುತ್ತ ‘ವಿಶ್ವ ಪರಿಸರ ದಿನಾಚರಣೆ’ ಮಹತ್ವ, ಪರಿಸರ ನಮ್ಮ ಜೀವನದಲ್ಲಿ ಪ್ರಾಮುಖ್ಯತೆಯನ್ನು ಹಾಗೂ ಅರೋಗ್ಯ ಜೀವನ ಉತ್ತಮ ಗಾಳಿ ಪರಿಸರದ ಕೊಡುಗೆ ಅದನ್ನು ತಿಳಿದ ನಾವು ಹಸಿರನ್ನ ಉಳಿಸಬೇಕು, ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಅದು ಪರಿಸರದಲ್ಲಿ ವಿಲೀನ ಆಗುವುದಿಲ್ಲ ಇದರಿಂದ ಪರಿಸರ ಮಾಲಿನ್ಯ ಆಗುತ್ತದೆ. ಮುಂದಿನ ಜನಾಂಗಕ್ಕೆ ಉತ್ತಮ ಉಸಿರಾಟಕ್ಕೆ ಇದು ಸಹಾಯ ಆಗುತ್ತದೆ ಎಂದರು.
ನಂತರ ಹಿರಿಯ ಅರೋಗ್ಯ ನಿರೀಕ್ಷಣಾ ಅಧಿಕಾರಿ ವಿ. ಬಸವರಾಜ್ ರವರು ಎಲ್ಲರಿಗೂ ‘ಪ್ರತಿಜ್ಞಾ ವಿಧಿ’ ಭೋದಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಪ್ರಸೂತಿ ತಜ್ಞ ವೈದ್ಯರು ಡಾ. ಪರಿಮಳ ದೇಸಾಯಿ, ಮಕ್ಕಳ ತಜ್ಞ ವೈದ್ಯರು ಡಾ.ಸಂಜೀವ್, ಕಚೇರಿ ಅಧೀಕ್ಷಕ ಸಂತೋಷ್ ಕುಮಾರ್, ಹಿರಿಯ ಅರೋಗ್ಯ ನಿರೀಕ್ಷಕ ಬಸವರಾಜ್, ಫಾರ್ಮಸಿ ಅಧಿಕಾರಿಗಳಾದ ಶೇಷಾಗಿರಿ ಮತ್ತು ಶುಶ್ರುಶಕರಾದ ಉಷಾ, ನಯನ, ಮಂಜುಳಾ, ಮತ್ತು ಗ್ರೂಪ್ ಡಿ ನೌಕರರು ಸುಪ್ರಿಯಾ, ಜಗನ್ಮಾತೆ ಭಾಗವಹಿಸಿದ್ದರು.