Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜ್ಯ ಸರ್ಕಾರ ರೈತ ಸಂಘದ ಪ್ರಣಾಳಿಕೆಯನ್ನು ಈಡೇರಿಸದಿದ್ದರೆ ಹೋರಾಟದ ಎಚ್ಚರಿಕೆ : ಎಚ್.ಆರ್. ಬಸವರಾಜಪ್ಪ

Facebook
Twitter
Telegram
WhatsApp

 

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ, (ಜೂ.05) : ಚುನಾವಣೆ ಸಮಯದಲ್ಲಿ ರಾಜ್ಯ ರೈತ ಸಂಘದ ಪ್ರಣಾಳಿಕೆಯನ್ನು ಒಪ್ಪಿಕೊಂಡಿದ್ದ ಕಾಂಗ್ರೆಸ್ ಪಕ್ಷ ಅದನ್ನು ಈಡೇರಿಸುವ ಬಗ್ಗೆ ಭರವಸೆಯನ್ನು ನೀಡಿತ್ತು, ಇದನ್ನು ಜ್ಞಾಪಕ ಮಾಡುವ ಸಲುವಾಗಿ ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳನ್ನು ರೈತ ಸಂಘದ ನಿಯೋಗ ಬೇಟಿ ಮಾಡಲಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಎಚ್.ಆರ್. ಬಸವರಾಜಪ್ಪ ತಿಳಿಸಿದರು.

ನಗರದ ಕ್ರೀಡಾ ಸಭಾಂಗಣದಲ್ಲಿ ಇಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಮಿತಿ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ರೈತ ಸಂಘ ಚುನಾವಣೆಗೂ ಮುನ್ನಾ ಮೂರು ಪಕ್ಷದ ಮುಖಂಡರನ್ನು ಕರೆಯಿಸಿ ನಮ್ಮ ರೈತರ ಸಮಸ್ಯೆಯ ಬಗ್ಗೆ ಪ್ರಣಾಳಿಕೆ ರೂಪದಲ್ಲಿ ನೀಡಿ ಇದನ್ನು ಈಡೇರಿಸಲು ಆರು ತಿಂಗಳ ಕಾಲವನ್ನು ನೀಡಿತ್ತು. ಈ ಸಭೆಗೆ ಕಾಂಗ್ರೆಸ್ ಪಕ್ಷ ಮತ್ತು ಜೆಡಿಎಸ್ ಪಕ್ಷದವರು ಮಾತ್ರ ಭಾಗವಹಿಸಿದ್ದರು ಬಿಜೆಪಿಯವರು ಬಂದಿರಲಿಲ್ಲ. ನಮ್ಮ ಪ್ರಣಾಳಿಕೆಯನ್ನು ನೋಡಿದ ಕಾಂಗ್ರೆಸ್ ಪಕ್ಷ ಮುಂದಿನ ಭಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇವುಗಳನ್ನು ಈಡೇರಿಸುವ ಬಗ್ಗೆ ಆಶ್ವಾಸನೆಯನ್ನು ನೀಡಿ ಆರು ತಿಂಗಳ ಕಾಲವಧಿಯನ್ನು ನೀಡಬೇಕೆಂದು ಮನವಿ ಮಾಡಿತ್ತು. ಇದಕ್ಕೆ ಸಂಘ ಸಮ್ಮತ್ತಿಸಿತ್ತು ಎಂದರು.

ಅಂದಿನ ಸಭೆಗೆ ಬಿಜೆಪಿ ಬಾರದಿದ್ದರಿಂದ ಈ ಚುನಾವಣೆಯಲ್ಲಿ ಅ ಪಕ್ಷವನ್ನು ಸೋಲಿಸಲು ತೀರ್ಮಾನ ಮಾಡಿ, ನಮ್ಮ ಪಕ್ಷದಿಂದಲೂ ಸಹಾ ಐದು ಕಡೆಯಲ್ಲಿ ಸ್ಫರ್ದೆ ಮಾಡಲಾಗಿತ್ತು ಅದರಲ್ಲಿ ಒಂದು ಕಡೆಯಲ್ಲಿ ಜಯವನ್ನು ಸಾಧಿಸಲಾಯಿತು. ಈಗ ಚುನಾವಣೆ ಮುಗಿದು ಕಾಂಗ್ರೆಸ್ ಪಕ್ಷ ಜಯಬೇರಿ ಭಾರಿಸಿ ಅಧಿಕಾರವನ್ನು ಹಿಡಿದಿದೆ.

ನಮ್ಮ ಪ್ರನಾಳಿಕೆಯ ಬಗ್ಗೆ ಮನವರಿಕೆಯನ್ನು ಮಾಡುವ ಬಗ್ಗೆ ಇಂದಿನ ಸಭೆ ನಮೆಗೆ ಅಧಿಕಾರವನ್ನು ನೀಡಿದೆ, ಈ ಹಿನ್ನಲೆಯಲ್ಲಿ ಅತಿ ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳನ್ನು ಬೇಟಿ ಮಾಡುವ ಬಗ್ಗೆ ದಿನಾಂಕವನ್ನು ನಿಗಧಿ ಮಾಡಲಾಗುವುದು ಎಂದು ತಿಳಿಸಿದ ಅವರು, ನಮ್ಮ ಪ್ರನಾಳಿಕೆಯಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ಮೂರು ಕೃಷಿ ಕಾಯ್ದೆಯನ್ನು ರಾಜ್ಯ ಸರ್ಕಾರ ರದ್ದು ಮಾಡಬೇಕು. ವಿದ್ಯುತ್ ಖಾಸಗೀಕರಣದ ಕಾಯ್ದೆಯನ್ನು ವಾಪಾಸ್ಸ ಪಡೆಯಬೇಕು, ಸ್ವಾಮಿನಾಥನ್ ವರದಿ ಯನ್ವಯ ಬೆಳೆಗಳಿಗೆ ಬೆಂಬಲ ಬೆಲೆಯನ್ನು ನೀಡಬೇಕು, ಪಠ್ಯ ಪುಸ್ತಕವನ್ನು ಪರಿಸ್ಕರಿಸುವಾಗ ಇತಿಹಾಸವನ್ನು ತಿರುಚಬಾರದು, ಬಗರ್ ಹುಕ್ಕುಂ ಸಾಗುವಳಿ ಪತ್ರವನ್ನು ಶೀಘ್ರವಾಗಿ ವಿತರಣೆ ಮಾಡಬೇಕು.

ಗ್ರಾಮೀಣ ಪ್ರದೇಶದ ರಸ್ತೆಯನ್ನು ಉತ್ತಮಗೂಳಿಸಬೇಕು, ಎಪಿಎಂಸಿ ಕಾಯ್ದೆ ರದ್ದಾಗಿದ್ದು ಎಪಿಎಂಸಿಗಳನ್ನು ಬಲಪಡಿಸಬೇಕಿದೆ. ಯಶಸ್ವಿನಿ ಯೋಜನೆಯಲ್ಲಿ ಆಸ್ಪತ್ರೆಗಳಿಗೆ 2018 ಅನ್ವಯ ಹಣವನ್ನು ಪಾವತಿ ಮಾಡಲಾಗುತ್ತಿದೆ ಇದರಿಂದ ಅಸ್ಪತ್ರೆಗಳಲ್ಲಿ ರೋಗಿಗಳು ಹಣವನ್ನು ಕಟ್ಟಬೇಕಿದೆ ಇದನ್ನು ಬದಲಾಯಿಸಬೇಕಿದೆ ಎಂದು ಆಗ್ರಹಿಸಲಾಗಿದೆ.

ಖಾಸಗಿ ಶಾಲೆಗಳಲ್ಲಿ ಪೋಷಕರಿಗೆ ತಿಳಿಯುವ ಹಾಗೇ ಶುಲ್ಕದ ಪಟ್ಟಿಯನ್ನು ಪ್ರದರ್ಶನ ಮಾಡಬೇಕು ಅದೇ ರೀತಿಯಾಗಿ ಆಸ್ಪತ್ರೆಗಳಲ್ಲಿಯೂ ಸಹಾ ಪಟ್ಟಿಯನ್ನು ಹಾಕಬೇಕು, ರೈತರಿಗೆ ಇದುವರೆವಿಗೂ ಬೆಳೆ ವಿಮೆ ಪರಿಹಾರ ಸಿಕ್ಕಿಲ್ಲ ಇದು ಶೀಘ್ರವಾಗಿ ಸಿಗುವಂತೆ ಮಾಡಬೇಕಿದೆ.  ಅತಿ ವೃಷ್ಟಿ ಆನಾವೃಷ್ಟಿಯಾದಲ್ಲಿ ನೊಂದವರಿಗೆ ಶೀಘವಾಗಿ ಪರಿಹಾರದ ಹಣ ವಿತರಣೆಯಾಗಬೇಕಿದೆ.

ವಿದ್ಯುತ್ ಸೇವೆಗಳಿಗೆ ಆಧಾರ ಲಿಂಕ್ ಮಾಡುವುದನ್ನು ಸರ್ಕಾರ ನಿಲ್ಲಿಸಬೇಕಿದೆ ಸರ್ಕಾರ ಖರೀದಿ ಮಾಡಿದ ರಾಗಿಗೆ ಇದುವರೆವಿಗೂ ಹಣವನ್ನು ನೀಡಲ್ಲ. ಇದನ್ನು ಶೀಘ್ರವಾಗಿ ವಿತರಣೆಯನ್ನು ಮಾಡುವಂತಾಗಬೇಕಿದೆ ಇದರ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆಯನ್ನು ಮಾಡುವ ಸಲುವಾಗಿ ದಿನಾಂಕವನ್ನು ನಿಗಧಿ ಮಾಡಲಾಗುವುದು ಅಂದಿನ ಸಭೆಗೆ ರೈತರಿಗೆ ಸಂಬಂಧಪಟ್ಟ ಎಲ್ಲಾ ಸಚಿವರು, ಅಧಿಕಾರಿಗಳು ಹಾಜರಿರುವಂತೆ ನೋಡಿಕೊಳ್ಳಬೇಕಿದೆ ಎಂದು ಸರ್ಕಾರವನ್ನು ಬಸವರಾಜಪ್ಪ ಒತ್ತಾಯಿಸಿದರು.

ಸರ್ಕಾರ ನಮ್ಮ ಬೇಡಿಕೆಯನ್ನು ಹಂತ ಹಂತವಾಗಿ ಈಡೇರಿಸುವ ಬಗ್ಗೆ ಭರವಸೆಯನ್ನು ನೀಡಿದೆ. ಇದು ಈಡೇರದಿದ್ದರೆ ನಮ್ಮ ಹೋರಾಟವನ್ನು ಪ್ರಾರಂಭ ಮಾಡಲಾಗುವುದು. ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಸಮಯದಲ್ಲಿ ನಾವು ಬೆಂಬಲ ನೀಡಿದ್ದೇವೆ ಎಂದು ಸುಮ್ಮನೇ ಇರುವುದಿಲ್ಲ.‌ ನಮ್ಮ ಬೇಡಿಕೆ ಈಡೇರದಿದ್ದರೆ ಹೋರಾಟವನ್ನು ಮಾಡಲಾಗುವುದು ಎಂದು ಸರ್ಕಾರವನ್ನು ಎಚ್ಚರಿಸಿದರು.

ಗೋಷ್ಠಿಯಲ್ಲಿ ಕಾರ್ಯಧ್ಯಕ್ಷರಾದ ಗಣೇಶ್, ರಾಜ್ಯ ಪ್ರಧಾನ ಕಾರ್ಯದರ್ಶೀ ಈಚಘಟ್ಟದ ಸಿದ್ದವೀರಪ್ಪ ಉಪಾಧ್ಯಕ್ಷರಾದ ಪರಮಣ್ಣನವರ್, ಚಂದ್ರಪ್ಪ, ಮಹೇಶ್, ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಶಿವಪ್ಪ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜನಪ್ಪ, ಹಸಿರು ಸೇನೆಯ ನಾಗರಾಜ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜಿಲ್ಲಾಧ್ಯಕ್ಷರು, ಕಾರ್ಯದರ್ಶಿಗಳು ಪದಾಧಿಕಾರಿಗಳು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ಜೊತೆಗೆ ರೇವಣ್ಣ ಮೇಲೂ ದೂರು ದಾಖಲು : ಮನೆ ಕೆಲಸದಾಕೆಯಿಂದ ಆರೋಪ..!

ಹಾಸನ: ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಇರುವ ಪೆನ್ ಡ್ರೈವ್ ಗಳು ಹಾಸನದಾದ್ಯಂತ ಸದ್ದು ಮಾಡುತ್ತಿವೆ. ಈ ಸಂಬಂಧ ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸದ್ಯ ಪ್ರಜ್ವಲ್ ರೇವಣ್ಣ

ಚಿತ್ರದುರ್ಗ | ಭೋವಿ ಗುರುಪೀಠಕ್ಕೆ ಗೀತಾ ಶಿವರಾಜಕುಮಾರ ಭೇಟಿ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 28 : ಇಲ್ಲಿನ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠಕ್ಕೆ ಭಾನುವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜಕುಮಾರ ಅವರು ಭೇಟಿ ನೀಡಿ, ಗುರುಪೀಠದ

ಚಿತ್ರದುರ್ಗ | ಭೋವಿ ಗುರುಪೀಠಕ್ಕೆ ಗೀತಾ ಶಿವರಾಜಕುಮಾರ ಭೇಟಿ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 28 : ಇಲ್ಲಿನ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠಕ್ಕೆ ಭಾನುವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜಕುಮಾರ ಅವರು ಭೇಟಿ ನೀಡಿ, ಗುರುಪೀಠದ

error: Content is protected !!