ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817
ಚಿತ್ರದುರ್ಗ, (ಜೂ.04) : ಲಾಸಿಕಾ ಫೌಂಡೇಶನ್ ನಾಟ್ಯ ಶಾಲೆಯ ಬಾಲ ಕಲಾವಿದೆ ಕು.ಶಮಾ ಭಾಗ್ವತ್ ರವರ ರಂಗಪ್ರವೇಶ ಜೂ. 11 ರ ಭಾನುವಾರ ನಗರದ ತರಾಸು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಂಜುನಾಥ್ ಭಾಗ್ವತ್‍ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಮಾಹಿತಿ ನೀಡಿದ ಅವರು, 14 ವರ್ಷಗಳ ಹಿಂದೆ 3 ಜನ ಆಸಕ್ತ ಮಕ್ಕಳೊಂದಿಗೆ ಆರಂಭವಾದ ಪಯಣಲಾಸಿಕಾ ಫೌಂಡೇಶನ್ ಆಸಕ್ತ ಪ್ರತಿಭೆಗಳನ್ನು ನಮ್ಮ ಸಾಧ್ಯತೆಯಲ್ಲೇ ತರಬೇತಿ ಕೊಡಿಸುತ್ತಾ ಸಾಗಿದ್ದು, ಈಗ ಇದು ನಾಡಿನ ಪ್ರಸಿದ್ಧ ನೃತ್ಯ ತಂಡಗಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿರುವುದು ನಮಗೂ ಹೆಮ್ಮೆ. ಲಾಸಿಕಾ ಫೌಂಡೇಶನ್ ನಾಟ್ಯ ಶಾಲೆ ಅರ್ಪಿಸುತ್ತಿರುವ ಭರತನಾಟ್ಯ ರಂಗ ಪ್ರವೇಶದ ತಯಾರಿ ನಡೆದಿದೆ. ತಮ್ಮೆದುರು ಪ್ರದರ್ಶಿಸುವ ಇರಾದೆ ನಮ್ಮದು ಕಲಾ ವಿದ್ಮನ್ನಿಗಳ ಸಮ್ಮುಖದಲ್ಲಿ, ನೇರ ಸಂಗೀತದ ಎದುರು ಜೂನ್ 11, ಭಾನುವಾರ ಸಂಜೆ 4:30 ಕ್ಕೆ ತರಾಸು ರಂಗಮಂದಿರದಲ್ಲಿ ನಮ್ಮ ನಾಟ್ಯ ಶಾಲೆಯ ಬಾಲ ಕಲಾವಿದೆ ಕು.ಶಮಾ ಭಾಗ್ವತ್ ರವರ ರಂಗಪ್ರವೇಶ. ಶಮಾ ಈಗ 8ನೇ ತರಗತಿಯಲ್ಲಿ ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ಓದುತ್ತಿದ್ದು, ಚಿತ್ರದುರ್ಗದಲ್ಲಿ ಭರತನಾಟ್ಯ ಸಂಪ್ರದಾಯದಂತೆ ರಂಗಪ್ರವೇಶವೊಂದನ್ನು ಮಾಡುತ್ತಿರುವ ಅತೀ ಚಿಕ್ಕ ವಯಸ್ಸಿನ ಕಲಾವಿದೆ ಎಂಬ ಹೆಗ್ಗಳಿಕೆ ಶಮಾ ಭಾಗ್ವತ್ ರವರದ್ದು ಎಂದರು.
ಬೇಸಿಗೆ ರಜೆಯಲ್ಲಿ ಎಲ್ಲಾ ಮಕ್ಕಳು ತಮ್ಮ ಅಜ್ಜ ಅಜ್ಜಿಯ ಮನೆಯಲ್ಲಿ ಆಟವಾಡ್ತಾ ಇದ್ರೆ, ಶಮ ತನ್ನ ತಾಯಿಯ ಗುರುಗಳಾದ ಶ್ರೀಮತಿ ಶುಭ ಧನಂಜಯ್ ರವರ ಮನೆಯಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಳು. ನಾಟ್ಯ ಕಲಾವಿದೆ ಶ್ವೇತಾ ಮತ್ತು ಮಂಜುನಾಥ್ ಭಾಗ್ವತ್ ದಂಪತಿಗಳ ಪುತ್ರಿ ,ಬಾಲ ಪ್ರತಿಭೆ “ಶಮಾ ಭಾಗ್ವತ್ “ಹುಟ್ಟಿ ನಾಲ್ಕೇ ನಾಲ್ಕು ತಿಂಗಳಿನಲ್ಲಿ,ಮಹಾ ಶಿವರಾತ್ರಿ ಪ್ರಯುಕ್ತ ಚಿತ್ರದುರ್ಗದ ಕಬೀರಾನಂದ ಆಶ್ರಮ ಏರ್ಪಡಿಸುವ ಕಾರ್ಯಕ್ರಮದಲ್ಲಿ ತಾಯಿ ವಿದುಷಿ ಶ್ವೇತಾ ರವರ ಜೊತೆ ಕೃಷ್ಣನಾಗಿ ರಂಗವೇರಿದ್ದಳು. ಶಮಾ ತನ್ನ ಒಂದೂವರೆ ವರ್ಷದಲ್ಲಿ ಮತ್ತೆ ಕೃಷ್ಣನಾಗಿ ,ರಂಗದ ತುಂಬೆಲ್ಲ ನಲಿದಾಡಿದಳು . ನಾಲ್ಕನೇ ವರ್ಷದಿಂದಲೇ ಭರತನಾಟ್ಯದ ಶಾಸ್ತ್ರೀಯ ಶಿಕ್ಷಣ ಮಗುವಿಗೆ ದೊರಕತೊಡಗಿತು . ಇಂದು ಹನ್ನೆರಡರ ಮುದ್ದು ಬಾಲೆ ಮುದ್ದು ಶಮಾ ಇಷ್ಟೇ ದಿನಗಳಲ್ಲಿ ತನ್ನ ಕಲಾ ಸಾಧನೆಯ ಒಂದೊಂದೇ ಪುಟ್ಟ ಹೆಜ್ಜೆಯ ಮೂಲಕ ರಂಗದ ಮೇಲೆ ತನ್ನದೇ ಆದ ಗುರುತು ಮೂಡಿಸುತ್ತ , ಅಧಿಕೃತವಾಗಿ ರಂಗಪ್ರವೇಶಕ್ಕೆ ಸಿದ್ಧಳಾಗಿದ್ದಾಳೆ ಎಂದು ಮಂಜುನಾಥ್ ತಿಳಿಸಿದರು.
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಉನ್ನತ ಸ್ಥಾನದಲ್ಲಿ ತೇರ್ಗಡೆಯಾದಳು. ಶಮಾ , ಲಾಸಿಕಾ ಫೌಂಡೇಶನ್ನಿನ ಪ್ರಸಿದ್ಧ ನೃತ್ಯ ರೂಪಕಗಳಾದ ಶ್ರೀಕೃಷ್ಣ ಲೀಲೋತ್ಸವದಲ್ಲಿ ಬಾಲಕೃಷ್ಣನಾಗಿ ,ಆದಿ ಶಂಕರಾಚಾರ್ಯ ರೂಪಕದಲ್ಲಿ ಬಾಲ ಶಂಕರನಾಗಿ ,ಗಣೇಶ ಜನನ ನೃತ್ಯ ರೂಪಕದಲ್ಲಿ ಬಾಲ ನಾಟ್ಯ ವಿನಾಯಕನಾಗಿ ,ಶ್ರೀರಾಮ ಕಥಾಚರಿತ ರೂಪಕದಲ್ಲಿ ಬಾಲ ರಾಮನಾಗಿ, ಶಮಾ ಪಾತ್ರ ನಿರ್ವಹಿಸಿದ ಪರಿ ಜಿಲ್ಲೆಯಾದ್ಯಂತ ಬೆರಗು ಮೂಡಿಸಿದೆ .
ಈ ಪುಟ್ಟ ಬಾಲೆಯ ಅಸಾಮಾನ್ಯ ನೃತ್ಯ ಸಾಧನೆಯನ್ನು ಗುರುತಿಸಿ ಹತ್ತು ಹಲವು ಪ್ರಶಸ್ತಿ ಸಮ್ಮಾನಗಳು ಅರಸಿ ಬಂದಿವೆ . ಇದೀಗ ,ಶ್ರೀಮತಿ ಶ್ವೇತಾರವರ ನೃತ್ಯ ಗುರು, ಶ್ರೀಮತಿ ಶುಭಾ ಧನಂಜಯ,ನಾಟ್ಯಾತರಂಗ ಬೆಂಗಳೂರು ಇವರಲ್ಲಿ ವಿಶೇಷ ನೃತ್ಯಭ್ಯಾಸ ಮಾಡುತ್ತಿದ್ದಾರೆ.
ಲಾಸಿಕಾ ಫೌಂಡೇಶನ್ ಹಾಗೂ ನಾಟ್ಯಂತರಂಗ ಅತ್ಯಂತ ಸಂಭ್ರಮದಿಂದ ಅರ್ಪಿಸುತ್ತಿರುವ ರಂಗಪ್ರವೇಶ ಇದಾಗಿದೆ. ಕುಮಾರಿ ಶಮಾ ಭರತನಾಟ್ಯ ಕ್ಷೇತ್ರದಲ್ಲಿ ಭದ್ರವಾದ ಹೆಜ್ಜೆಯೆನ್ನಿಡುವ ಕಾರ್ಯಕ್ರಮ ಇದು ,ಶಮಾ 13 ವರ್ಷದ ಬಾಲಪ್ರತಿಭೆ ಚಿತ್ರದುರ್ಗದಲ್ಲಿ ಅತೀ ಚಿಕ್ಕ ವಯಸ್ಸಿನಲ್ಲಿ ರಂಗಪ್ರವೇಶ ಮಾಡುತ್ತಿರುವಂತ ಹೆಮ್ಮೆ ಕುಮಾರಿ ಶಮಾ ಭಾಗ್ವತ್‍ರವರಿಗೆ ಸಲ್ಲುತ್ತಿದೆ. ನೃತ್ಯ ಎಂದಾಕ್ಷಣ ನಮ್ಮ ಕಲಾ ಸಂಸ್ಕೃತಿಯನ್ನು ಬಿಂಬಿಸುವ ಒಂದು ಅದ್ಭುತ ಕಲಾಪರಂಪರೆಯ ಅನಾವರಣ .ಆ ಪರಂಪರೆಯನ್ನು ಮುಂದುವರೆಸುವಂತ ಕೆಲಸವನ್ನು ನೃತ್ಯ ಗುರುಗಳು ಮಾಡುತ್ತ ಬಂದಿದ್ದಾರೆ.
ಈ ಕಾರ್ಯಕ್ರಮದಲ್ಲಿ ನಮ್ಮೊಡನೆ ಪ್ರಜಾವಾಣಿಯ ಮುಖ್ಯ ಸಂಪಾದಕರಾದ ರವೀಂದ್ರ ಭಟ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನ ಜಂಟಿ ನಿರ್ದೇಶಕರಾದ ಅಶೋಕ ಛಲವಾದಿ , ಸೆಲ್ಕೋ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಯಕ್ಷಗಾನ ಕಲಾವಿದರಾದ ಮೋಹನ ಭಾಸ್ಕರ ಹೆಗಡೆ , ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ್ ರವರು ಆಗಮಿಸಲಿದ್ದಾರೆ.
ಅದೇರೀತಿ ರಂಗಪ್ರವೇಶ ಪ್ರಸ್ತುತಿ ನೇರ ಸಂಗೀತದ ಮೂಲಕ ಸಾದರಗೊಳ್ಳುತ್ತಿದೆ. ಗುರು, ನಾಟ್ಯ ಸರಸ್ವತಿ ಶ್ರೀಮತಿ ಶುಭಾ ಧನಂಜಯ, ನಾಟ್ಯಂತರಂಗ ಬೆಂಗಳೂರು ,ಕು. ಮುದ್ರಾ ಧನಂಜಯ ,ಹಾಡುಗಾರಿಕೆಯಲ್ಲಿ ವಿದ್ವಾನ್ ರೋಹಿತ್ ಭಟ್ ಬೆಂಗಳೂರು ,ಮೃದಂಗದಲ್ಲಿ ವಿದ್ವಾನ್ ನಾಗೇಂದ್ರ ಪ್ರಸಾದ ಬೆಂಗಳೂರು ,ಕೊಳಲುವಾದನದಲ್ಲಿ ವಿದ್ವಾನ್ ಶಶಾಂಕ್ ಬೆಂಗಳೂರು ,ಪಿಟೀಲು ವಾದನದಲ್ಲಿ ವಿದ್ವಾನ್ ವಿಭುದೇಂದ್ರ ಸಿಂಹ ಬೆಂಗಳೂರು ,ರಿಧಂ ಪ್ಯಾಡ್ ನಲ್ಲಿ ಸಾಯಿವಂಶಿ ಬೆಂಗಳೂರು ಇವರು ಭಾಗವಹಿಸಲಿದ್ದಾರೆ.
ಗೋಷ್ಠಿಯಲ್ಲಿ ಶ್ರೀಮತಿ ಶ್ವೇತಾ ಮಂಜುನಾಥ್ ಹಾಗು ಶಮಾ ಭಾಗ್ವತ್ ಉಪಸ್ಥಿತರಿದ್ದರು.