ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817
ಚಿತ್ರದುರ್ಗ,(ಜೂ.03) : ಮುಂದಿನ ದಿನಮಾನದಲ್ಲಿ ನಗರದ ಕೋ-ಆಪರೇಟಿವ್ ಸೊಸೈಟಿ ಹೆಚ್ಚಿನ ಮಟ್ಟದಲ್ಲಿ ಬೆಳೆಯಲು ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ಭರವಸೆಯನ್ನು ನೀಡಿದರು.
ನಗರದ ಕೋ-ಆಪರೇಟಿವ್ ಸೊಸೈಟಿಗೆ ಬೇಟಿ ನೀಡಿದಾಗ ಅಧ್ಯಕ್ಷರಾದ ನಿಶಾನಿ ಜಯ್ಯಣ್ಣ ಮತ್ತು ಪದಾಧಿಕಾರಿಗಳು ಸ್ವಾಗತ ಕೋರಿ ಆತ್ಮೀಯವಾಗಿ ಸನ್ಮಾನಿಸಿದರು. ಇದಕ್ಕೆ ಉತ್ತರವಾಗಿ ಮಾತನಾಡಿದ ಸಚಿವರು, ಈ ಸೊಸೈಟಿ ತುಂಬಾ ಹಳೆಯದಾಗಿದ್ದು, ಇದಕ್ಕೆ ಹೆಚ್ಚಿನ ರೀತಿಯ ಹೆಸರು ಇದೆ, ಇದನ್ನು ಸ್ಥಾಪನೆ ಮಾಡಿದ ತಿರುಮಲಾಚಾರ್ ಉತ್ತಮ ಆಶಯವನ್ನು ಇಟ್ಟುಕೊಂಡು ಸ್ಥಾಪನೆ ಮಾಡಿದ್ದಾರೆ ಇದರಿಂದಾಗಿ 100 ವರ್ಷ ದಾಟಿ ಸೊಸೈಟಿ ಬೆಳದಿದೆ. ಇಲ್ಲಿ ಉತ್ತಮವಾದ ಪದಾಧಿಕಾರಿಗಳ ದಂಡು ಇದೆ ಇದರಿಂದ ಇಲ್ಲಿನ ಷೇರುದಾರರಿಗೆ ಉತ್ತಮವಾದ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ಇವರ ಕಾರ್ಯವನ್ನು ಪ್ರಶಂಸಿದರು.
ಸ್ವಾತಂತ್ರ ಪೂರ್ವದಲ್ಲಿ ಪ್ರಾರಂಭವಾದ ಈ ಸೊಸೈಟಿ 3000 ಜನ ಸದಸ್ಯರಿದ್ದಾರೆ, ಇದರ ಘನತೆ ಗೌರವವನ್ನು ಎತ್ತಿಹಿಡಿಯಲಾಗಿದೆ. ಈ ಭಾಗದ ನಾಗರೀಕರಿಗೆ ಬ್ಯಾಂಕ್ ರೀತಿಯಲ್ಲಿ ಸೌಲಭ್ಯವನ್ನು ನೀಡುತ್ತಿರುವ ಸೂಸೈಟಿ ಎಂದರೆ ಟೌನ್ ಕೋ-ಆಪರೇಟಿವ್ ಸೊಸೈಟಿ ಎನ್ನಬಹುದಾಗಿದೆ. ಇಂದಿನ ಆಡಳಿತ ಮಂಡಳಿ ಸಂಸ್ಥಾಪನಾ ಚಾರ್ಯರವರ ಹೆಸರನ್ನು ಉಳಿಸುವ ಕಾರ್ಯವನ್ನು ಅಧ್ಯಕ್ಷರಾದ ನಿಶಾನಿ ಜಯ್ಯಣ್ಣ ರವರು ಮಾಡುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ಈ ಸೊಸೈಟಿಗೆ ವಿವಿಧ ರೀತಿಯ ಬೇಡಿಕೆಯನ್ನು ಇಟ್ಟಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡುವುದರ ಬದಲಿಗೆ ಮುಂದಿನ ದಿನದಲ್ಲಿ ಒಂದು ದಿನ ಪೂರ್ಣವಾಗಿ ಇಲ್ಲಿ ಕಳೆಯುವುದರ ಮೂಲಕ ಇಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದು ಅದರ ಪರಿಹಾರಕ್ಕೆ ಪ್ರಯತ್ನ ಮಾಡಲಾಗುವುದು ಎಂದ ಸಚಿವರು, ಇಲ್ಲಿ ಸಹಕಾರ ಉತ್ತಮವಾಗಿ ಬೆಳದಿದೆ ಇವರಿಂದ ಇದರ ಬಗ್ಗೆ ನಾನು ತಿಳಿಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ಟೌನ್ ಕೋ-ಆಪರೇಟಿವ್ ಸೂಸೈಟಿಯ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಸೂರ್ಯ ಪ್ರಕಾಶ್, ಸದಸ್ಯರಾದ ನಾಗರಾಜ್ ಬೇದ್ರೇ, ಎಸ್,ವಿ. ಪ್ರಸನ್ನ, ಡಾ.ರಹಮತ್ತುಲ್ಲಾ, ಶ್ರೀನಿವಾಸ್ ಮೂರ್ತಿ, ಚಿಕ್ಕಣ್ಣ ಕೆ. ಸೈಯದ್ ನೂರುಲ್ಲಾ , ಚಂದ್ರಪ್ಪ, ಪ್ರಕಾಶ್ ಕೆ. ಶ್ರೀಮತಿ ಚಂಪಕಾ ಶ್ರೀಮತಿ ಪುಪ್ಪವಲ್ಲಿ ವ್ಯವಸ್ಥಾಪಕರಾದ ಮಹ್ಮದ್ ನಯೀಮ್ ಉಪಸ್ಥಿತರಿದ್ದರು.