ಬೆಂಗಳೂರು: ಕಾಂಗ್ರೆಸ್ ಸರ್ಕಾರ ಈಗ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಯಾವಾಗ ಯೋಜನೆಗಳೆಲ್ಲಾ ಜಾರಿಯಾಗುತ್ತೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಇದೀಗ ವಿದ್ಯುತ್ ಪೂರೈಕೆ ವಿಚಾರದಲ್ಲಿ ಒಂದಷ್ಟು ಗೊಂದಲಗಳಿದ್ದು ಸಚಿವ ಕೆ ಜೆ ಜಾರ್ಜ್ ಕ್ಲಾರಿಟಿ ನೀಡಿದ್ದಾರೆ.
ಇಂಧನ ಸಚಿವ ಕೆ ಜೆ ಜಾರ್ಜ್ ಮಾತನಾಡಿದ್ದು, ಬಾಡಿಗೆದಾರರು ಸಹ ವಿದ್ಯುತ್ ಬಿಲ್ ಕಟ್ಟಬೇಕಿಲ್ಲ. ಆರ್ ಆರ್ ಸಂಖ್ಯೆ ಆಧಾರದ ಮೇಲೆ ಬಿಲ್ ನೀಡಲಾಗುತ್ತದೆ. ಯೂನಿಟ್ ಆಧಾರದ ಮೇಲೆ ಉಚಿತವಾಗಿ ನೀಡಲಾಗುತ್ತದೆ. ಬಾಡಿಗೆದಾರರನ್ನು ಪ್ರತ್ಯೇಕವಾಗಿ ಗುರುತಿಸುವ ಪ್ರಶ್ನೆಯೇ ಇಲ್ಲ. ಬಾಡಿಗೆದಾರರಾಗಿರಲಿ, ಮಾಲೀಕರಾಗಿರಲಿ ಆರ್ ಆರ್ ಮೇಲೆ ವಿದ್ಯುತ್ ಪರಿಗಣನೆ ಮಾಡಲಾಗುತ್ತದೆ ಎಂದಿದ್ದಾರೆ.
ಆರ್ ಆರ್ ಆಧಾರದ ಮೇಲೆ ಮೀಟರ್ ರೀಡ್ ಮಾಡಲಾಗುತ್ತಿದೆ. 200 ಯೂನಿಟ್ ಬಳಸಿದ್ದರೆ ಅದನ್ನು ಉಚಿತವಾಗಿ ನೀಡಲಾಗುತ್ತದೆ. ಅಲ್ಲದೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಬಳಸಿದರೆ ಹೆಚ್ಚುವರಿ ಬಿಲ್ ಮಾತ್ರ ಕಟ್ಟಬೇಕಾಗುತ್ತದೆ. ಒಟ್ಟು ಸರಾಸರಿ ಬಳಕೆಯ ಮೇಲೆ ಹೆಚ್ಚುವರಿಯಾಗಿ ಶೆ. 10ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದಿದ್ದಾರೆ.