Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಾಡಿಗೆದಾರರಿಗೆ ವಿದ್ಯುತ್ ಫ್ರೀ ಇರುತ್ತಾ ಇರಲ್ಲಾ..? ಸಚಿವ ಜಾರ್ಜ್ ಹೇಳಿದ್ದೇನು..?

Facebook
Twitter
Telegram
WhatsApp

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಈಗ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಯಾವಾಗ ಯೋಜನೆಗಳೆಲ್ಲಾ ಜಾರಿಯಾಗುತ್ತೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಇದೀಗ ವಿದ್ಯುತ್ ಪೂರೈಕೆ ವಿಚಾರದಲ್ಲಿ ಒಂದಷ್ಟು ಗೊಂದಲಗಳಿದ್ದು ಸಚಿವ ಕೆ ಜೆ ಜಾರ್ಜ್ ಕ್ಲಾರಿಟಿ ನೀಡಿದ್ದಾರೆ.

ಇಂಧನ ಸಚಿವ ಕೆ ಜೆ ಜಾರ್ಜ್ ಮಾತನಾಡಿದ್ದು, ಬಾಡಿಗೆದಾರರು ಸಹ ವಿದ್ಯುತ್ ಬಿಲ್ ಕಟ್ಟಬೇಕಿಲ್ಲ. ಆರ್ ಆರ್ ಸಂಖ್ಯೆ ಆಧಾರದ ಮೇಲೆ ಬಿಲ್ ನೀಡಲಾಗುತ್ತದೆ. ಯೂನಿಟ್ ಆಧಾರದ ಮೇಲೆ ಉಚಿತವಾಗಿ ನೀಡಲಾಗುತ್ತದೆ. ಬಾಡಿಗೆದಾರರನ್ನು ಪ್ರತ್ಯೇಕವಾಗಿ ಗುರುತಿಸುವ ಪ್ರಶ್ನೆಯೇ ಇಲ್ಲ. ಬಾಡಿಗೆದಾರರಾಗಿರಲಿ, ಮಾಲೀಕರಾಗಿರಲಿ ಆರ್ ಆರ್ ಮೇಲೆ ವಿದ್ಯುತ್ ಪರಿಗಣನೆ ಮಾಡಲಾಗುತ್ತದೆ ಎಂದಿದ್ದಾರೆ.

ಆರ್ ಆರ್ ಆಧಾರದ ಮೇಲೆ ಮೀಟರ್ ರೀಡ್ ಮಾಡಲಾಗುತ್ತಿದೆ. 200 ಯೂನಿಟ್ ಬಳಸಿದ್ದರೆ ಅದನ್ನು ಉಚಿತವಾಗಿ ನೀಡಲಾಗುತ್ತದೆ. ಅಲ್ಲದೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಬಳಸಿದರೆ ಹೆಚ್ಚುವರಿ ಬಿಲ್‌ ಮಾತ್ರ ಕಟ್ಟಬೇಕಾಗುತ್ತದೆ. ಒಟ್ಟು ಸರಾಸರಿ ಬಳಕೆಯ ಮೇಲೆ ಹೆಚ್ಚುವರಿಯಾಗಿ ಶೆ. 10ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಿ.ಎನ್.ಚಂದ್ರಪ್ಪ ಗೆಲುವು ಚಿತ್ರದುರ್ಗದ ಸಮಗ್ರ ಅಭಿವೃದ್ಧಿಗೆ ಸಹಕಾರಿ : ಸತೀಶ್ ಜಾರಕಿಹೊಳಿ

ಚಿತ್ರದುರ್ಗ, ಏ. 24 :  ವೀರ ಮದಕರಿ ನಾಯಕ ನಾಡಿನ ಎಲ್ಲ ಜಾತಿ ಜನರ ಪ್ರೀತಿ ಗಳಿಸಿರುವ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಗೆಲುವು ಚಿತ್ರದುರ್ಗದ ಸಮಗ್ರ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದು ಸಚಿವ ಸತೀಶ್

ಮೈಸೂರಿನಲ್ಲಿ ಅಭ್ಯರ್ಥಿ ಬದಲಾಯಿಸಿದ್ದೇಕೆ..? ಯದುವೀರ್ ಗೆ ಟಿಕೆಟ್ ಕೊಟ್ಟಿದ್ದೇಕೆ..?: ಸ್ಪಷ್ಟನೆ ನೀಡಿದ ವಿಜಯೇಂದ್ರ

ಬೆಂಗಳೂರು: ಲೋಕಸಭಾ ಚುನಾವಣೆಯ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಅದರಲ್ಲೂ ಈ ಬಾರಿ ಬಿಜೆಪಿಯಲ್ಲಿ ಹೊಸಬರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಘಟಾನುಘಟಿಗಳಿಗೆ ಟಿಕೆಟ್ ಮಿಸ್ ಆಗಿದೆ. ಮೈಸೂರಿನಿಂದ ಪ್ರತಾಪ್

ಡಾ.ರಾಜ್ 95ನೇ ಹುಟ್ಟುಹಬ್ಬ : ಸಮಾಧಿಗೆ ಪೂಜೆ ಸಲ್ಲಿಸಿದ ರಾಘಣ್ಣ, ಅಶ್ವಿನಿ, ವಂದಿತಾ

ಬೆಂಗಳೂರು: ಇಂದು ವರನಟ ಡಾ.ರಾಜ್ ಕುಮಾರ್ ಅವರ 95ನೇ ವರ್ಷದ ಹುಟ್ಟುಹಬ್ಬ. ಅವರ ಅಭಿಮಾನಿಗಳು ರಾಜ್ಯಾದ್ಯಂತ ಈ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ, ಅಣ್ಣಾವ್ರ ಹುಟ್ಟುಹಬ್ಬವನ್ನು ಸಾರ್ಥಕ ಮಾಡುತ್ತಿದ್ದಾರೆ. ಅವರ ಅಭಿಮಾನಿಗಳಿಂದ ಪ್ರತಿ

error: Content is protected !!